Friday, December 12, 2025

ಜಮೀರ್‌ನನ್ನು ಆಲದ ಮರಕ್ಕೆ ನೇಣು ಹಾಕಿ: ಮುತಾಲಿಕ್ ವಿವಾದಾತ್ಮಕ ದ್ವೇಷಭಾಷಣ

Most read

ಸಚಿವ ಜಮೀರ್ ಅಹಮದ್‍ರನ್ನು ಗಡಿಪಾರು ಮಾಡ್ಬೇಕು ಎಂದು ಹೇಳುತ್ತಿದ್ದಾರೆ. ಅದೆಲ್ಲ ಬೇಡ ಯಾವುದಾದರೂ ಆಲದ ಮರಕ್ಕೆ ನೇಣು ಹಾಕಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಭಾಷಣ ಮಾಡಿದ್ದಾರೆ‌.

ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಅಭಿಯಾನದ ಧರ್ಮಸಭೆಯಲ್ಲಿ ಭಾಷಣ ಮಾಡಿದ ಮುತಾಲಿಕ್, ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25,000 ಬಾಂಗ್ಲಾದೇಶಿ ಮುಸಲ್ಮಾನರಿದ್ದಾರೆ. ಅವರನ್ನು ಜಮೀರ್ ಸಾಕಿ, ಓಟರ್ ಲೀಸ್ಟ್ ತಯಾರು ಮಾಡಿದ್ದಾನೆ. ಈ ರೀತಿ ಅನೇಕ ಬ್ಲಂಡರ್ ಗಳನ್ನ ಸನ್ಮಾನ್ಯ ಔರಂಗಜೇಬ್ ಎಂದು ಜಮೀರ್ ಅವರನ್ನು ಟೀಕಿಸಿ ಏಕವಚನದಲ್ಲೇ ಕಿಡಿ ಹೊತ್ತಿಸಿದ್ದಾರೆ.

ಬಿಜೆಪಿಯವರು ಜಮೀರ್ ನನ್ನ ಗಡಿಪಾರು ಮಾಡಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಗಡಿಪಾರು, ಸಸ್ಪೆಂಡ್ ಎಲ್ಲಾ ಬೇಡ ಯಾವುದಾದರೂ ಆಲದಮರಕ್ಕೆ ನೇಣು ಹಾಕಿ. ಈ ದೇಶದಲ್ಲಿ ಇರಲು ಜಮೀರ್ ಲಾಯಕ್ಕಿಲ್ಲ. ಯಾರ ಭೂಮಿ, ಕಟ್ಟಡ ಬೇಕೋ ಅದನ್ನು ನುಂಗಿ ನೀರು ಕುಡಿಯೋಕೆ ಇದು ನಿಮ್ಮ ಅಪ್ಪಂದ ಎಂದು ಕೀಳು ಮಟ್ಟದಲ್ಲಿ ಟೀಕಿಸಿದ್ದಾರೆ‌.

More articles

Latest article