ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ಸರ್ಕಾರ; ಮುತಾಲಿಕ್‌

ರಾಜ್ಯದಲ್ಲಿ ಇರುವುದು ಹಿಂದೂ ವಿರೋಧಿ ಸರ್ಕಾರ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇರುವುದು ಹಿಂದೂ ವಿರೋಧಿ ಸರ್ಕಾರ, ಮುಸ್ಲಿಮರಿಗೆ ಕ್ರಿಶ್ಚಿಯನ್ನರಿಗೆ ನಿರಂತರ ಪ್ರೋತ್ಸಾಹ ಕೊಡಲಾಗುತ್ತಿದೆ, ಶಾಲೆಗಳಲ್ಲಿ ಹಿಂದು ವಿರೋಧಿ ಸಂಪ್ರದಾಯಗಳಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ, ರಾಜ್ಯ ಸರ್ಕಾರದ ಸಲಹೆಗಾರರು ನಾಸ್ತಿಕರು, ರಾಷ್ಟ್ರ ವಿರೋಧಿಗಳು ಆಗಿದ್ದಾರೆ ಎಂದು ಕಿಡಿಕಾರಿದರು.

ಬೆಂಗಳೂರು ಜಿಟಿ ಮಾಲ್‌ನಲ್ಲಿ ಲುಂಗಿ ಧರಿಸಿದ್ದ ರೈತನಿಗೆ ಅಪಮಾನ ಕುರಿತು ಸಹ ಮಾತನಾಡಿದ ಅವರು, ವ್ಯಕ್ತಿಯನ್ನು ಬಟ್ಟೆಯ ಮೇಲೆ ಅಳೆಯುವುದು ಅತ್ಯಂತ ಮೂರ್ಖತನ, ರೈತನಿಗೆ ಅಪಮಾನ ಮಾಡಿದ ಜಿಟಿ ಮಾಲ್ ಅನ್ನು ಸಂಪೂರ್ಣ ಮುಚ್ಚಬೇಕು, ಬೆಂಗಳೂರು ನಡೆಯುತ್ತಿರುವುದು ಅನ್ನದಾತರ ದುಡಿಮೆಯಿಂದ, ಪರಿಶ್ರಮದಿಂದ ಎಂದು ಹೇಳಿದ್ದಾರೆ.

ಇನ್ನುವಾಲ್ಮೀಕಿ ನಿಗಮದಲ್ಲಿ ಬಡವರಿಗೆ ಮೀಸಲಿಟ್ಟ ಹಣವನ್ನು ಭ್ರಷ್ಟರು ನುಂಗಿದ್ದು ಭ್ರಷ್ಟರಿಗೆ ವಾಲ್ಮೀಕಿ ಸಮಾಜದ ಶಾಪ ತಟ್ಟುತ್ತದೆ ಎಂದು ಕಿಡಿಕಾರಿದರು. ಅಲ್ಲದೇ ಮಾಡಿರುವ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳುತ್ತಿರುವುದು ಅಕ್ಷಮ್ಯ ಅಪರಾಧ, ಸಮಿತಿ ರಚನೆ ಮಾಡಿ, ತನಿಖೆ ಮಾಡಿಸುವುದು ನಾಟಕ, ಜನರ ಕಣ್ಣಿಗೆ ಮಣ್ಣು ಎರಚುವ ತಂತ್ರ ಆಗಿದೆ ಎಂದು ದೂರಿದ್ದಾರೆ.

More articles

Latest article

Most read