ಜಾತಿ ನಿಂದನೆ ಪ್ರಕರಣದಲ್ಲಿ ಬಂಧನವಾಗಿದ್ದ ಬಿಜೆಪಿ ಶಾಸಕ ಮುನಿರತ್ನಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಮುನಿರತ್ನ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಮೇಲಿನ ಆದೇಶ ನೀಡಿದ್ದಾರೆ. 2 ಲಕ್ಷ ಬಾಂಡ್, ಇಬ್ಬರ ಶೂರಿಟಿ, ಸಾಕ್ಷಿನಾಶ ಮಾಡಬಾರದು ಹಾಗೂ ತನಿಖೆಗೆ ಸಹಕರಿಸಲು ಷರತ್ತು ವಿಧಿಸಿದೆ.
ಬುಧವಾರ ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ, ಇದು ಆರೇಳು ವರ್ಷದ ಹಳೆಯ ಪ್ರಕರಣ. ಚಲುವರಾಜು ಉಪಸ್ಥಿತಿಯಲ್ಲಿ ಆದ ಘಟನೆ. ಸಾರ್ವಜನಿಕರ ಮುಂದೆ ನಡೆದ ನಿಂದನೆ ಅಲ್ಲ ಎಂದು ವಾದಿಸಿದ್ದರು.