ಮುಡಾ 50:50 ಅನುಪಾತದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮೊದಲ ತಲೆದಂಡವಾಗಿದ್ದು, ರಾಜ್ಯಪಾಲರ ಆದೇಶಾನುಸಾರ ಹಾವೇರಿ ವಿವಿ ಕುಲಸಚಿವರಾಗಿದ್ದ ಮಾಜಿ ಮುಡಾ ಆಯುಕ್ತ ಜಿಟಿ ದಿನೇಶ್ ಕುಮಾರ್ ರನ್ನು ಅಮಾನತು ಮಾಡಲಾಗಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಹಿಂದಿನ ಆಯುಕ್ತ, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕವಾಗಿದ್ದ ಜಿ.ಟಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.
ಮುಡಾ ಮಾಜಿ ಆಯುಕ್ತರ ಮೇಲೆ ಗಂಭೀರ ಆರೋಪವಿದ್ದರು ಅವರಿಗೆ ಹಾವೇರಿ ವಿವಿ ಕುಲಸಚಿವರಾಗಿ ನೇಮಕ ಮಾಡಿರುವ ಕುರಿತು ಕನ್ನಡ ಪ್ಲಾನೆಟ್ ಅಲ್ಲದೇ ಇತರೆ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದರು. ಇದಾದನಂತರ ಈತರದ ಆರೋಪ ಕೇಳಿ ಬಂದಾಗಲೂ ಈ ರೀತಿ ನೇಮಕ ಮಾಡಿದ್ದೇಕೆ ಎಂದು ಬಿಜೆಪಿ ಪ್ರಶ್ನಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಮಧ್ಯ ಇದೀಗ ರಾಜ್ಯಪಾಲರ ಆದೇಶಾನುಸಾರ ಮುಡಾದಿಂದ ಹಾವೇರಿ ವಿವಿ ಕುಲಸಚಿವರಾಗಿದ್ದ ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಉಮಾದೇವಿ ಆದೇಶ ಹೊರಡಿಸಿದ್ದಾರೆ.
ಮುಡಾ ಮಾಜಿ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಅವರ ಮೇಲೆ ಮುಡಾ ಹಗರಣದ ಅರೋಪ ಕೇಳಿ ಬಂದ ನಂತರ ಅವರನ್ನು ಹುದ್ದೆಯಿಂದ ತೆರವುಗೊಳಸಲಾಗಿತ್ತು. ನಂತರ ಅವರನ್ನು ಹಾವೇರಿ ವಿವಿಗೆ ಕುಲಸಚಿವರಾಗಿ ವರ್ಗಾವಣೆ ಮಾಡಲಾಗಿತ್ತು. ಆದರೆ ಈಗ ರಾಜ್ಯಪಾಲರ ಮೇರೆಗೆ ಅಮಾನತು ಮಾಡಲಾಗಿದೆ.
ಮುಡಾ ಮಾಜಿ ಆಯುಕ್ತರಾಗಿದ್ದ ಡಿ.ಬಿ.ನಟೇಶ್ ಹಾಗೂ ಜಿ.ಟಿ.ದಿನೇಶ್ ಕುಮಾರ್ ಅವರು ಸರಕಾರಕ್ಕೆ 5 ಸಾವಿರ ಕೋಟಿ ರೂಪಾಯಿ ನಷ್ಟ ಉಂಟು ಮಾಡಿದ್ದಾರೆ. ಇವರಿಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ವಕೀಲ ಅರುಣ್‌ಕುಮಾರ್ ಎನ್ನುವರು ಮೈಸೂರಿನ ಲಕ್ಷ್ಮಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.