Tuesday, December 10, 2024

ಮುಡಾ: ಮಾಜಿ ನೌಕರ ನಟರಾಜ್ ಏಕಾಂಗಿ ಪ್ರತಿಭಟನೆ

Most read

ಮೈಸೂರು: ಮುಡಾದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಮುಡಾ ಮಾಜಿ ನೌಕರ ನಟರಾಜ್ ಕಣ್ಣೀಗೆ ಪಟ್ಟಿ ಕಟ್ಟಿಕೊಂಡು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ 10 ವರ್ಷದಿಂದ ಮುಡಾದಲ್ಲಿ ನಡೆದಿರುವ ಅಕ್ರಮಗಳ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇನೆ. ಮುಡಾದಲ್ಲಿ ನಾಲ್ಕು ಸಾವಿರ ಕೋಟಿಗಿಂತ ಹೆಚ್ಚಿನ ಹಗರಣ ನಡೆದಿದೆ ಎಂದು ಆಪಾದಿಸಿದರು.


ಮುಡಾ ಹಗರಣ ಹೊರ ಬಂದ ಮೇಲೆ ಮೊದಲ ಸಭೆ ಇಂದು ನಡೆಯುತ್ತಿದೆ. 167 ವಿಷಯಗಳನ್ನು ಕುರಿತು ಚರ್ಚೆ ನಡೆಯುತ್ತಿದೆ. ಖಾಸಗಿ ಲೇಔಟ್ ಗಳ ಟೌನ್ ಪ್ಲ್ಯಾನಿಂಗ್ ಗೆ ಅನುಮತಿ ಪಡೆದುಕೊಳ್ಳಲು ಈ ಸಭೆ ನಡೆಯುತ್ತಿದೆ. ಮುಡಾದ ಹಗರಣ ಕುರಿತು ಯಾರೊಬ್ಬರೂ ಚರ್ಚೆ ಮಾಡುತ್ತಿಲ್ಲ. ಮುಡಾ ಹಗರಣದ ಹಿಂದೆ ಹಿರಿಯ ಸದಸ್ಯರುಗಳ ಕೈವಾಡ ಇದೆ ಎಂಬ ಮಾಹಿತಿ ಇದೆ ಎಂದರು.

More articles

Latest article