Saturday, July 27, 2024

ಇಂದು ರಾಜ್ಯಕ್ಕೆ ಬರಲಿರುವ ಮೋದಿ, ಲೋಕಸಭಾ ಚುನಾವಣೆ ಕುರಿತು ಚರ್ಚೆ

Most read

ಮಹಾರಾಷ್ಟ್ರದ ಸೋಲಾಪುರದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ 9-40ಕ್ಕೆ ಕಲ್ಬುರ್ಗಿ ವಿಮಾನನಿಲ್ದಾಣಕ್ಕೆ ಆಗಮಿಸಲಿದ್ದಾರೆ.

ಕಲ್ಬುರ್ಗಿ ವಿಮಾನ ನಿಲ್ದಾಣದಿಂದ ವಾಯುಸೇನೆ ಹೆಲಿಕಾಪ್ಟರ್ ನಲ್ಲಿ ನೇರವಾಗಿ ಮಹಾರಾಷ್ಟ್ರದ ಸೋಲಾಪುರಕ್ಕೆ ತೆರಳಲಿರುವ ಮೋದಿ ಪಿಎಂ ಅವಾಸ್ ಯೋಜನೆ ಅಡಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಲಿದ್ದಾರೆ.

ಸೋಲಾಪುರದಿಂದ ಮಧ್ಯಾಹ್ನ 1 ಗಂಟೆಗೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಅವರು ಹಿಂದಿರುಗಲಿದ್ದು, ಈ ವೇಳೆ ಸ್ಥಳೀಯ ನಾಯಕರನ್ನು ಭೇಟಿಯಾಗಲಿದ್ದಾರೆ. ಕಲಬುರ್ಗಿ ಭಾಗದ ಎಂಪಿ, ಶಾಸಕರು, ಎಂಎಲ್‌ ಸಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.

ಲೋಕಸಭಾ ಚುನಾವಣೆ ಸಿದ್ಧತೆ ಸೇರಿ ಹಲವು ವಿಷಯಗಳ ಬಗ್ಗೆ ಅರ್ಧ ಗಂಟೆ ಸ್ಥಳೀಯ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ. ನಂತರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಇಂದು ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ, ವಿಮಾನ ನಿಲ್ದಾಣ ರಸ್ತೆ ಸಂಚಾರ ವ್ಯವಸ್ಥೆಯಲ್ಲಿ‌ ಬದಲಾವಣೆ

ಮೋದಿ ಭೇಟಿ ಹಿನ್ನೆಲೆಯಲ್ಲಿ ಬೆಳಿಗ್ಗೆ 8ರಿಂದ ಸಂಜೆ 6 ರವರೆಗೆ ವಿಮಾನ ನಿಲ್ದಾಣವನ್ನು ಸೇರುವ ಹಲವು ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಚಿಕ್ಕಜಾಲ ಮಾರ್ಗ ಬಳಸುವವರು ಚಿಕ್ಕ ಜಾಲ ವಿಲೇಜ್- ಪಿಬಿ ರಸ್ತೆ-ಸಾದರಹಳ್ಳಿ ಗೇಟ್. ಸಾದರಹಳ್ಳಿ ಮೂಲಕ ಏರ್ ಪೋರ್ಟ್ ಗೆ ಸಂಚರಿಸಬಹುದು.

ಬಾಗಲೂರಿನಿಂದ ಏರ್ ಪೋರ್ಟ್ ಗೆ ತೆರುಳುವವರು ಬಾಗಲೂರು ಕಾಲೋನಿ, ಎಂಪಿಐಟಿ ಕಾಲೇಜ್. ಬೆಂಗಳೂರು ಬಳ್ಳಾರಿ ಹೆದ್ದಾರಿ-ಸಾದಹಳ್ಳಿ ಟೋಲ್. ಕೆ ಐ ಎ ಎಲ್ ಫ್ಲೈ ಓವರ್-ಏರ್ ಪೋರ್ಟ್ ಮೂಲಕ ಸಂಚಾರ.

ಥಣಿಸಂದ್ರ ದಿಂದ ಏರ್ಪೋರ್ಟ್ ಮಾರ್ಗ ಬಳಸುವವರು ಬಾಗಲೂರು ಗುಂಡಪ್ಪ ಸರ್ಕಲ್- ರೇವಾ ಕಾಲೇಜು. ಬಾಗಲೂರು ಕ್ರಾಸ್-ಬಿಬಿ ರಸ್ತೆ- ಚಿಕ್ಕ ಜಾಲ. ಸಾದಹಳ್ಳಿ ಮೂಲಕ ಏರ್ ಪೋರ್ಟ್ ಗೆ ಸಂಚರಿಸಬಹುದು.

More articles

Latest article