Sunday, September 8, 2024

ಬೂಟು ನೆಕ್ಕುವುದನ್ನು ನಿಲ್ಲಿಸಿ: ಅಟಲ್‌ ಸೇತುವನ್ನು ಹೊಗಳಿದ್ದ ರಶ್ಮಿಕಾಗೆ ಅಂಜಲಿ ನಿಂಬಾಳ್ಕರ್‌ ಕ್ಲಾಸ್

Most read

ಮುಂಬೈನ ಅಟಲ್‌ ಸೇತು ಮತ್ತು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಪ್ರಧಾನಿ ಮೋದಿಯೇ ಕಾರಣ ಎಂಬಂತೆ ಮಾತನಾಡಿದ್ದ ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಪ್ರತಿಪಕ್ಷಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಅದರಲ್ಲೂ ಮಾಜಿ ಸಚಿವೆ ಡಾ ಅಂಜಲಿ ನಿಂಬಾಳ್ಕರ್‌ ಸ್ವಲ್ಪ ಕಾರವಾಗಿಯೇ ಪ್ರತಿಕ್ರಿಯಿಸಿದ್ದು, ಬೂಟು ನೆಕ್ಕುವುದನ್ನು ನಿಲ್ಲಿಸಿ, ಇದು ನಿಮ್ಮನ್ನು ಮೆಗಾಸ್ಟಾರ್‌ ಮಾಡಲು ಸಹಾಯ ಮಾಡಲ್ಲ ಎಂದು ಕಿಡಿಕಾರಿದ್ದಾರೆ.

ರಶ್ಮಿಕಾ ಮಂದಣ್ಣ ವಿಡಿಯೋಗೆ ತಮ್ಮ ಅಧಿಕೃತ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿರುವ ಅಂಜಲಿ ನಿಂಬಾಳ್ಕರ್‌ ಮುಂಬೈ – ಅಹಮದಾಬಾದ್ ಬುಲೆಟ್ ರೈಲು ಯೋಜನೆ ದುರಂತ. ಬೂಟ್ ನೆಕ್ಕುವುದನ್ನು ನಿಲ್ಲಿಸಿ. ಮೆಗಾಸ್ಟಾರ್ ಮಾಡಲು ಇದು ನಿಮಗೆ ಸಹಾಯ ಮಾಡುವುದಿಲ್ಲ ಎಂದು ಎಂದು ನೇರಾ ನೇರ ವಾಗ್ದಾಳಿ ನಡೆಸಿದ್ದಾರೆ.

ನವಿ ಮುಂಬೈನಿಂದ ಮುಂಬೈಗೆ ಪ್ರಯಾಣಿಸಲು ಎರಡು ಗಂಟೆ ಹಿಡಿಯುತ್ತಿತ್ತು. ಈಗ ಅದು 20 ನಿಮಿಷಗಳಿಗೆ ಇಳಿದಿದೆ. ಯೋಚಿಸಿದರೆ ಅಸಾಧ್ಯ ಎನಿಸುತ್ತದೆ. ಅದನ್ನು ಸಾಧಿಸಿ ತೋರಿಸಿದ್ದಾರೆ. ಗೋವಾದಿಂದ ಮುಂಬೈಗೆ, ಬೆಂಗಳೂರಿನಿಂದ ಮುಂಬೈ ರಸ್ತೆ ಹಾಗೂ ಇನ್ನಿತರೆ ಮೂಲಸೌಕರ್ಯಗಳು ಅಭಿವೃದ್ಧಿಯಾಗುತ್ತಿರುವ ರೀತಿ ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ನಟಿ ರಶ್ಮಿಕಾ ಪ್ರಧಾನಿಮೋದಿಯನ್ನು ಹೊಗಳಿ ಮಾತನಾಡಿದ್ದರು.

ಭಾರತ ದೊಡ್ಡ ಕನಸು ಕಾಣಲು ಸಾಧ್ಯವಿಲ್ಲ ಎಂದವರ ಮನೆ ಬಾಗಿಲನ್ನು ಬಡಿದು ಹೇಳಿ, ನಾವು ಇಂತಹ ದೊಡ್ಡ ಅದ್ಭುತವನ್ನು ಕೇವಲ 7 ವರ್ಷದಲ್ಲಿ ನಿರ್ಮಿಸಿದ್ದೇವೆ ಎಂದು. ಅಟಲ್‌ ಸೇತು ಭಾರತದ ಭವಿಷ್ಯದ ಬಾಗಿಲನ್ನು ದೊಡ್ಡದಾಗಿಯೇ ತೆರೆದಿದೆ, ವಿಕಸಿತ ಭಾರತದ ಮಾರ್ಗವನ್ನು ಕೂಡ ತೆರೆದಿಟ್ಟಿದೆ. ಅಟಲ್‌ ಸೇತು ಕೇವಲ ಸೇತುವೆಯಲ್ಲ, ಇದು ಯುವ ಭಾರತದ ಗ್ಯಾರಂಟಿ. ನಮ್ಮ ದೇಶವನ್ನು ಈಗ ಯಾರಿಂದಲೂ ತಡೆಯಲು ಆಗಲ್ಲ. ಇಂತಹ ನೂರಾರು ಅಟಲ್‌ ಸೇತುಗಳನ್ನು ನಿರ್ಮಿಸಲು, ಎದ್ದೇಳಿ, ಜಾಗೃತರಾಗಿ ಅಭಿವೃದ್ಧಿಗಾಗಿ ಮತ ಚಲಾಯಿಸಿ ಎಂದು ರಶ್ಮಿಕಾ ಮಂದಣ್ಣ ಕರೆ ನೀಡಿದ್ದರು.

ರಶ್ಮಿಕಾ ಮಂದಣ್ಣ ಅವರ ಈ ಹೇಳಿಕೆ ಈಗ ಸಮಾಜಿಕ ಜಾಲತಾಣದಲ್ಲಿ ಟ್ರಾಲ್‌ ಆಗುತ್ತಿದೆ.

More articles

Latest article