ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ವಿಚಾರವಾಗಿ ಸೌಮ್ಯಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರಸ್ವತಿ, ಲಕ್ಷ್ಮಿ ಅಂತ ಪೂಜೆ ಮಾಡ್ತಾರೆ. ನಮಗೆ ಪೂಜೆ ಮಾಡೋದು ಬೇಡ. ನಮಗೆ ರಕ್ಷಣೆ ಬೇಕಿದೆ, ಗೌರವ ಬೇಕಿದೆ ಎಂದಿದ್ದಾರೆ.
ಬೆಂ. ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಮಾತನಾಡಿ, ನಮಗೆಲ್ಲ ಬಹಳ ದುಃಖವಾಗುತ್ತಿದೆ. ಬಹಳ ನೋವಿನಿಂದ ಇಲ್ಲಿಗೆ ಬಂದಿದ್ದೇವೆ. ಬೇಟಿ ಬಚಾವ್ ಬೇಟಿ ಪಡಾವ್ ಅಂತಾ ಪ್ರಧಾನಿ ಮೋದಿಯವರು 10 ವರ್ಷದಿಂದ ಹೇಳ್ತಿದ್ದಾರೆ. ಬಿಜೆಪಿ ಅಭ್ಯರ್ಥಿಯೇ ಇದನ್ನ ಹೊರತಂದಿದ್ದಾರೆ. ಮೋದಿ, ವಿಜಯೇಂದ್ರಗೆ ಇದರ ಮಾಹಿತಿ ಇತ್ತು. ಆದರೂ ಇಂತವರಿಗೆ ಮತ್ತೆ ಟಿಕೆಟ್ ಕೊಟ್ಟಿದ್ದಾರೆ. ಇದರಿಂದ ರಾಜ್ಯದ ಮಹಿಳೆಯರು ನೊಂದಿದ್ದೇವೆ.
ದೇಶದಲ್ಲಿ ಏನೇನಾಗ್ತಿದೆ ಅಂತ ನೋಡ್ತಿದ್ದೇವೆ. ನಾರಿ ಶಕ್ತಿ ಅಂತ ಹೇಳ್ತಾರೆ. ಆದರೆ ಸಾವಿರಾರು ಮಹಿಳೆಯರು ದೇಶದ ಹೆಣ್ಮಕ್ಕಳಲ್ವೇ. ಅವರು ಏನು ಪಾಪ ಮಾಡಿದ್ರು. ಇಂತಹ ವ್ಯಕ್ತಿಗೆ ಮತ್ತೊಮ್ಮೆ ಟಿಕೆಟ್ ಹೇಗೆ ಕೊಟ್ರಿ. ಮಹಿಳೆಯರಿಗೆ ಎಲ್ಲಿ ನ್ಯಾಯ ಸಿಗ್ತಿದೆ. ಹುನ್ನಾವ್ ಪ್ರಕರಣ ಏನಾಯ್ತು? ಮಣಿಪುರದಲ್ಲಿ ಏನು ಘಟನೆ ಆಯ್ತು? ಸಾವಿರಾರು ವಿಡಿಯೋ ರಿಲೀಸ್ ಮಾಡಿದ್ದಾರೆ. ಅವರ ಮುಖಗಳ ಸಮೇತ ಬಿಡುಗಡೆ ಮಾಡಿದ್ದಾರೆ. ಆ ಮಹಿಳೆಯರ ಕಥೆ ಏನಾಗಬೇಡ. ಒಬ್ಬಿಬ್ಬ ಮಹಿಳೆಯರಲ್ಲ ಅನ್ಯಾಯಕ್ಕೆ ಸಿಕ್ಕಿದ್ದು. ಸಾವಿರಾರು ಮಹಿಳೆಯರಿಗೆ ಅನ್ಯಾಯ ಆಗಿದೆ. ಕೆಲಸ, ಸಹಾಯಕ್ಕೆ ಬಂದ್ರೆ ಈ ರೀತಿ ಬಳಸಿಕೊಂಡಿದ್ದಾರೆ. ಅವರಿಗೆ ಲೈಂಗಿಕವಾಗಿ ಕಿರುಕುಳ ಕೊಟ್ಟಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಏನು ಹೇಳ್ತಾರೆ. ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಇಲ್ವಾ? ಶೋಭಕ್ಕ ಇದರ ಬಗ್ಗೆ ಏನು ಹೇಳ್ತಾರೆ. ಯಾಕೆ ಈ ವಿಚಾರವನ್ನ ಖಂಡಿಸಿಲ್ಲ. ಕರ್ನಾಟಕದಲ್ಲಿ ಇಂತಹ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ನ್ಯಾಷನಲ್ ವುಮೆನ್ಸ್ ಕಮೀಷನ್ ಧ್ವನಿ ಎತ್ತಿಲ್ಲ. ಇದನ್ನ ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಆಗ್ರಹಿಸಿದ್ದಾರೆ