ಮಣಿಪುರಕ್ಕೆ ಬನ್ನಿ ಎಂದರೆ ಕುವೈತ್‌ ಗೆ ಹಾರಿದ ಮೋದಿ; ಕಾಂಗ್ರೆಸ್‌ ವ್ಯಂಗ್ಯ

Most read

ನವದೆಹಲಿ: ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡುವಂತೆ ಅಲ್ಲಿನ ಸಾರ್ವಜನಿಕರು ವರ್ಷದಿಂದ ಕಾಯುತ್ತಿರುವಾಗ, ನಿರಂತರ ಹಾರಾಟ ನಡೆಸುವ ಪ್ರಧಾನಿ ಕುವೈತ್‌ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ಮೋದಿ ಪ್ರವಾಸ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಿಸ್ಟರ್ ಮೋದಿ ಭೇಟಿಯನ್ನು ನಿರಾಕರಿಸುತ್ತಾ ಇದ್ದು, ಅದು ಅವರ ಹಣೆಬರಹ ಆಗಿ ಹೋಗಿದೆ. ಮಣಿಪುರದ ಜನರು ಇನ್ನೂ ಕಾಯುತ್ತಲೇ ಇದ್ದು, ಆದರೆ ನಿರಂತರ ಹಾರಾಡುತ್ತಿರುವ ಪ್ರಧಾನಿ ಕುವೈತ್ ಗೆ ತೆರಳಿದ್ದಾರೆ ಎಂದು ಅಣಕವಾಡಿದ್ದಾರೆ.

ಮಣಿಪುರಕ್ಕೆ ಭೇಟಿ ನೀಡುವಂತೆ ಕಾಂಗ್ರೆಸ್ ಪದೇ ಪದೇ ಮೋದಿಯವರನ್ನು ಒತ್ತಾಯಿಸುತ್ತಿದೆ. ಅವರ ಭೇಟಿಯು ಗಲಭೆ ಪೀಡಿತ ರಾಜ್ಯದಲ್ಲಿ ಶಾಂತಿ ಮತ್ತು ಸಹಜತೆಯನ್ನು ಪುನಃಸ್ಥಾಪಿಸಲು ಸಹಾಯವಾಗುತ್ತದೆ ಎಂದು ಓತ್ತಾಯಿಸುತ್ತಿದರೂ ಪ್ರಧಾನಿ ಮೋದಿ ಇದುವರೆಗೂ ಭೇಟ ನೀಡಿಲ್ಲ.
2023ರ ಮೇ 3ರಂದು ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿ ಬುಡಕಟ್ಟು ಜನಾಂಗಗಳ ನಡುವೆ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತ್ತು. ನವೆಂಬರ್ 2024 ರ ಅಂತ್ಯದ ವೇಳೆಗೆ ಹಿಂಸಾಚಾರದಲ್ಲಿ 258 ಮಂದಿ ಮೃತಪಟ್ಟಿದ್ದಾರೆ. ಹಿಂಸಾಚಾರದಿಂದ 9,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸುಮಾರು 60,000 ಜನರು ನಿರಾಶ್ರಿತರಾಗಿದ್ದಾರೆ.

ಇತ್ತಿಚೆಗಷ್ಟೇ ಮಣಿಪುರದ ಜನಾಂಗೀಯ ಹಿಂಸಾಚಾರದ ಸಂದರ್ಭದಲ್ಲಿ ಸಂಪೂರ್ಣ ಅಥವಾ ಭಾಗಶಃ ಸುಟ್ಟು ಭಸ್ಮವಾಗಿರುವ ವಸತಿಗಳು ಮತ್ತು ಆಸ್ತಿಗಳ ವಿವರಗಳನ್ನು ಮುಚ್ಚಿದ ಕವರ್‌ನಲ್ಲಿ ಒದಗಿಸಬೇಕು. ಜೊತೆಗೆ, ಅಪರಾಧಿಗಳು ಮತ್ತು ಅತಿಕ್ರಮಣದಾರರ ವಿರುದ್ಧ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಹೇಳುವಂತೆಯೂ ಸೂಚನೆ ನೀಡಿತ್ತು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠದ ಮುಂದೆ ಜನವರಿ 20 ರಂದು ಅರ್ಜಿಯ ವಿಚಾರಣೆ ನಡೆಯಲಿದೆ.

More articles

Latest article