ಶಾಲೆಗಳಲ್ಲಿ ಮೊಬೈಲ್ ಬಳಕೆ: ಜಗತ್ತಿನ ಅನುಭವಗಳು ಮತ್ತು ಪಾಠಗಳು

ಶಾಲೆಗಳಲ್ಲಿ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕಿಂತ ಸಮತೋಲನದ ನೀತಿಯನ್ನು ಅನುಸರಿಸುವುದು ಸರಿಯಾದುದು. ನಿಯಂತ್ರಿತ ಬಳಕೆ, ಶಿಕ್ಷಕರ ಮಾರ್ಗದರ್ಶನ ಮತ್ತು ತಂತ್ರಜ್ಞಾನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯನ್ನು ಸಾಧಿಸಬಹುದು – ಒಲಿವರ್ ಡಿಸೋಜಾ, ಮುಂಬೈ.

ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್‌ಗಳು ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿವೆ. ಆದರೆ, ಶಾಲೆಗಳಲ್ಲಿನ ಅವುಗಳ ಬಳಕೆ ವಿದ್ಯಾರ್ಥಿಗಳ ಅಧ್ಯಯನ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಹೆಚ್ಚಾಗಿ ಚರ್ಚೆಯಾಗುತ್ತಿದೆ. ಮಕ್ಕಳು ತರಗತಿಗಳಲ್ಲಿ ಫೋನ್‌ಗಳಿಗೆ ಹೆಚ್ಚು ಗಮನ ಕೊಡುವುದರಿಂದ ಅವರ ಗಮನಶಕ್ತಿ ಕುಂದುತ್ತದೆ. ಇದು ಅವರ ಶೈಕ್ಷಣಿಕ ಸಾಧನೆಗೆ ಹಾನಿ ಮಾಡುತ್ತದೆ. ಜೊತೆಗೆ, ಅತಿಯಾದ ಸ್ಕ್ರೀನ್ ಬಳಕೆ ಮಾನಸಿಕ ಒತ್ತಡ, ಆತಂಕ ಮತ್ತು ಮನಸಿನ ನೋವುಗಳಿಗೆ ಕಾರಣವಾಗಬಹುದು. ಜಗತ್ತಿನ ಅನೇಕ ದೇಶಗಳು ಈ ಸಮಸ್ಯೆಯನ್ನು ಎದುರಿಸಲು ವಿವಿಧ ಕ್ರಮಗಳನ್ನು ಅನುಸರಿಸುತ್ತಿವೆ.

ವಿವಿಧ ದೇಶಗಳ ಕ್ರಮಗಳು

ವಿದ್ಯಾರ್ಥಿಗಳ ಗಮನವನ್ನು ಓದಿನ ಕಡೆ ಕೇಂದ್ರೀಕರಿಸಲು ಮತ್ತು ಅವರ ಒಟ್ಟು ಬೆಳವಣಿಗೆಗೆ ಸಹಾಯ ಮಾಡಲು ಫ್ರಾನ್ಸ್, ಚೀನಾ, ಕೆನಡಾ, ಡೆನ್ಮಾರ್ಕ್, ಸ್ವೀಡನ್ ಮತ್ತು ಇಂಗ್ಲೆಂಡ್ ಮೊದಲಾದ ದೇಶಗಳು ಶಾಲೆಗಳಲ್ಲಿ ಫೋನ್ ಬಳಕೆಗೆ ನಿಯಂತ್ರಣ ಹೇರಿವೆ. ಈ

ಹಂಗೇರಿಯ ಅನುಭವ

ಹಂಗೇರಿಯಲ್ಲಿ ಮೊಬೈಲ್ ಫೋನ್, ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ವಾಚ್‌ಗಳನ್ನು ಶಾಲೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಿಕ್ಷಕರ ಅಥವಾ ಮುಖ್ಯೋಪಾಧ್ಯಾಯರ ಅನುಮತಿ ಇದ್ದರೆ ಮಾತ್ರ ಬಳಸಲು ಅವಕಾಶ ಇದೆ. ಈ ನೀತಿಯನ್ನು  ವಿದ್ಯಾರ್ಥಿಗಳ ಗಮನವನ್ನು ಕಲಿಕೆಯತ್ತ ಕೇಂದ್ರೀಕರಿಸಲು ಮತ್ತು ಸೈಬರ್ ಬುಲ್ಲಿಯಿಂಗ್ ತಡೆಯಲು ರೂಪಿಸಲಾಗಿದೆ. ಒಂದು ವರ್ಷದ ಬಳಿಕ ನಡೆಸಿದ ಈ ಅಧ್ಯಯನದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿತು. ಶಾಲಾ ಸಮಯದಲ್ಲಿ ಫೋನ್ ಬಳಕೆ 37% ದಿಂದ 4% ಕ್ಕೆ  ಇಳಿಯಿತು. ಕೆಲವು ಶಾಲೆಗಳು ಶೈಕ್ಷಣಿಕ ಉದ್ದೇಶಗಳಿಗೆ ಬಳಕೆಯನ್ನು ಸೀಮಿತಗೊಳಿಸಿದರೆ  ಕೆಲವು ಸಂಪೂರ್ಣ ನಿಷೇಧವನ್ನು ಜಾರಿಗೆ ತಂದವು.

ವಿದ್ಯಾರ್ಥಿಗಳ ವರ್ತನೆಯಲ್ಲಿ ಬದಲಾವಣೆ

ಮುಖಾಮುಖಿ ಸಂಭಾಷಣೆ ಹೆಚ್ಚಾಯಿತು

ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಹೆಚ್ಚಿತು

ಚೆಸ್ ಮತ್ತು ಕಾರ್ಡ್ ಆಟಗಳಂತಹ ಆಟಗಳಲ್ಲಿ ಆಸಕ್ತಿ ವೃದ್ಧಿಯಾಯಿತು

ಆದರೆ, ಪುಸ್ತಕದ ಓದು ಮತ್ತು ಪಾಠ ಸಿದ್ಧತೆಯಲ್ಲಿ ಸುಧಾರಣೆ ಮಾತ್ರ ಸೀಮಿತವಾಗಿತ್ತು.

ತರಗತಿ ಅನುಭವ: ಮಿಶ್ರ ಪ್ರತಿಕ್ರಿಯೆಗಳು

ಸುಮಾರು ಮೂರನೇ ಒಂದು ಭಾಗದ ಶಿಕ್ಷಕರು ವಿದ್ಯಾರ್ಥಿಗಳ ಗಮನ ಮತ್ತು ಭಾಗವಹಿಸುವಿಕೆಯಲ್ಲಿ ಸುಧಾರಣೆಯನ್ನು  ಕಂಡಿದ್ದಾರೆ. ಆದರೆ 64% ಶಿಕ್ಷಕರು ಯಾವುದೇ ವಿಶೇಷ ಬದಲಾವಣೆಯನ್ನು ಗಮನಿಸಲಿಲ್ಲ. ಕೆಲವು ವಿದ್ಯಾರ್ಥಿಗಳು ಶಾಲೆಯಲ್ಲಿ ಫೋನ್ ಬಳಸುವುದನ್ನು  ಕಡಿಮೆ ಮಾಡಿದರೂ ಮನೆಗಳಲ್ಲಿ ಹೆಚ್ಚು ಸಮಯ ಬಳಸುವ ಮೂಲಕ ಅದನ್ನು ಪೂರೈಸಲು ಪ್ರಯತ್ನಿಸಿದರು.

ಸವಾಲುಗಳು ಮತ್ತು ಸಮಸ್ಯೆಗಳು

ಕೆಲವು ವಿದ್ಯಾರ್ಥಿಗಳು ಫೋನ್‌ಗಳನ್ನು ಕದ್ದುಮುಚ್ಚಿ ಬಳಸಲು ಪ್ರಯತ್ನಿಸಿದರು

ತಕ್ಷಣದ ಮಾಹಿತಿಗೆ ಅವಕಾಶ ಕಡಿಮೆಯಾಯಿತು

ಡಿಜಿಟಲ್ ಕಲಿಕೆಗೆ ಅಡ್ಡಿಯಾಯಿತು

ಇವು ಶಿಕ್ಷಕರಿಗೆ ಹೊಸ ಸವಾಲುಗಳನ್ನು ತಂದವು.

ಏಕಾಗ್ರತೆಗೆ ಭಂಗ

ಒಂದು ಅಧ್ಯಯನದ ಪ್ರಕಾರ, ಫೋನ್‌ನ ನೋಟಿಫಿಕೇಶನ್ ನೋಡಿದ ಕೂಡಲೇ  ವಿದ್ಯಾರ್ಥಿಗಳ ಏಕಾಗ್ರತೆ ಭಂಗವಾಗುತ್ತದೆ. ಮತ್ತೆ ಪೂರ್ಣ ಏಕಾಗ್ರತೆ ಪಡೆಯಲು ಸುಮಾರು 20 ನಿಮಿಷಗಳು ಬೇಕಾಗುತ್ತವೆ.

ಮಾನಸಿಕ ಆರೋಗ್ಯದ ಮೇಲೆ ಪರಿಣಾಮ

ಆಸ್ಟ್ರೇಲಿಯಾದ ಅಧ್ಯಯನವು ಫೋನ್ ನಿಷೇಧದಿಂದ ವಿದ್ಯಾರ್ಥಿಗಳ ಮಾನಸಿಕ ಒತ್ತಡದಲ್ಲಿ 2.4% ಇಳಿಕೆ ಕಂಡುಬಂದಿದೆ ಎಂದು ತಿಳಿಸಿದೆ. ದುಃಖ, ಭಯ ಮತ್ತು ನಿರಾಸೆಯಂತಹ ನಕಾರಾತ್ಮಕ ಭಾವನೆಗಳು ಸುಮಾರು 5.2% ಕಡಿಮೆಯಾದವು. ಆದರೆ, ಸಕಾರಾತ್ಮಕ ಭಾವನೆಗಳಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ.

ಸಮತೋಲನದ ಅಗತ್ಯ

ಈ ಎಲ್ಲಾ ಅಧ್ಯಯನಗಳು ಸೂಚಿಸುವುದೇನೆಂದರೆ, ಫೋನ್ ನಿಷೇಧವು ಮಕ್ಕಳ ಏಕಾಗ್ರತೆಗೆ ಭಂಗವಾಗುವುದನ್ನು ಕಡಿಮೆ ಮಾಡಬಹುದು ಮತ್ತು ಅವರಲ್ಲಿ ಸಾಮಾಜಿಕ ಸಂಪರ್ಕವನ್ನು ಹೆಚ್ಚಿಸಬಹುದು. ಆದರೆ, ಅಷ್ಟೇ ಸಾಕಾಗುವುದಿಲ್ಲ. ವಿದ್ಯಾರ್ಥಿಗಳಿಗೆ ತಂತ್ರಜ್ಞಾನವನ್ನು ಜವಾಬ್ದಾರಿಯಿಂದ ಬಳಸುವ ತರಬೇತಿಯ ಅಗತ್ಯವಿದೆ.

ಕೊನೆಯಲ್ಲಿ, ಇಡೀ ಪ್ರಪಂಚದ 53 ಶೇಕಡ ದೇಶಗಳಲ್ಲಿ 15 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ 16 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮೊಬೈಲ್ ಬಳಕೆಯನ್ನು ಇತ್ತೀಚೆಗೆ  ನಿಷೇಧಿಸಲಾಗಿದೆ.

ಒಲಿವರ್ ಡಿಸೋಜಾ

ಮುಂಬೈ.‌

More articles

Latest article

Most read