ನಟ ದರ್ಶನ್ ಕೋಪಿಷ್ಠ, ಆದರೆ ಕೊಲೆ ಮಾಡುವಷ್ಟಲ್ಲ: ಶಾಸಕ ಉದಯ್ ಗೌಡ

ನಟ ದರ್ಶನ್ ಸ್ವಲ್ಪ ‌ಮುಂಗೋಪ, ಸಿಟ್ಟು ಜಾಸ್ತಿ. ಆದರೆ ಕೊಲೆ ಮಾಡುವಷ್ಟು ಕ್ರೂರಿಯಲ್ಲ ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಉದಯ್ ಗೌಡ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ನನಗೆ ಹಲವು ವರ್ಷಗಳಿಂದ ಸ್ನೇಹಿತ. ಆದರೆ ಈ ರೀತಿ ದರ್ಶನ್ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ರೇಣುಕಾಸ್ವಾಮಿ ಕೊಲೆಯನ್ನು ದರ್ಶನ್ ಜೊತೆಗಿರುವವರು ಮಾಡಿದ್ರಾ? ಆ ಕೊಲೆಯನ್ನು ಇವರ ಮೇಲೆ ಏನಾದ್ರೂ‌ ಹಾಕಿದ್ರಾ ಗೊತ್ತಿಲ್ಲ?. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು. ನಾನು ಈಗಲೇ ಏನನ್ನೂ‌ ಹೇಳೋಕೆ ಆಗಲ್ಲ ಎಂದು ಉದಯ್ ಗೌಡ ಹೇಳಿದ್ದಾರೆ.

ನಿನ್ನೆ ಪವಿತ್ರಾ ಗೌಡ ಸೇರಿದಂತೆ ಇತರ 13 ಆರೋಪಿಗಳನ್ನು ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ದರ್ಶನ್ ಹಾಗೂ ಇತರ ಮೂವರು ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.

More articles

Latest article

Most read