ಕಾರು ಚಲಾಯಿಸಿದ ಬಾಲಕ; ಅಪ್ಪನ ವಿರುದ್ಧ ಕೇಸ್‌ ದಾಖಲು

ಕೋಯಿಕ್ಕೋಡ್: ಕೇರಳ ರಾಜ್ಯದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಬಾಲಕನೊಬ್ಬ ಇನ್ನೋವಾ ಕಾರನ್ನು ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಾಲಕನ ತಂದೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉತ್ತರ ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಚಿಕ್ಕಿಯಾಡ್‌ನಲ್ಲಿರುವ ತಮ್ಮ ಮನೆಯ ಬಳಿಯ ರಸ್ತೆಯಲ್ಲಿ 13 ವರ್ಷದ ಬಾಲಕ ಇನ್ನೋವಾ ಕಾರು ಚಲಾಯಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಆ ವಿಡಿಯೊವನ್ನು ಇತ್ತೀಚೆಗೆ ನಮ್ಮ ‘ಸುಭಯಾತ್ರ’ ಪೋರ್ಟಲ್‌ನಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದರು. ಈ ಕುರಿತು ತ್ವರಿತವಾಗಿ ಕ್ರಮ ಕೈಗೊಂಡಿರುವ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಸುಭಯಾತ್ರ’ ಎಂಬ ಯೋಜನೆ ಸಂಚಾರ ಅಪರಾಧಗಳನ್ನು ವರದಿ ಮಾಡಲು ಕೇರಳ ಪೊಲೀಸರ ಒಂದು ಉಪಕ್ರಮವಾಗಿದೆ. ಬಾಲಕನ ತಂದೆಯನ್ನು 37 ವರ್ಷದ ನೌಕಾದ್ ಎಂದು ಗುರುತಿಸಲಾಗಿದ್ದು, ಅವರ ಅಪ್ರಾಪ್ತ ಮಗನಿಗೆ ವಾಹನ ಚಲಾಯಿಸಲು ವಾಹನವನ್ನು ನೀಡಿದ ಆರೋಪದ ಮೇಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

More articles

Latest article

Most read