ಅಪ್ಪುವಿನ ಮೂರನೇ ವರ್ಷದ ಪುಣ್ಯ ಸ್ಮರಣೆ: ಯಾರೆಲ್ಲಾ ಭಾಗಿ?

ಬೆಂಗಳೂರು: ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಮೂರು ವರ್ಷಗಳು. 2021ರ ಅಕ್ಟೋಬರ್ 29 ರಂದು ದಿಢೀರ್‌ ಎಂದು ಅಸು ನೀಗಿದ್ದನ್ನು ಅವರ ಅಭಿಮಾನಿಗಳಿಗೆ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ಕುಟುಂಬದ ಸದಸ್ಯರು ಮತ್ತುಸಾವಿರಾರು ಅಭಿಮಾನಿಗಳು ಕಂಠೀರವ ಸ್ಟುಡಿಯೇದಲ್ಲಿನ ಸಮಾಧಿಗೆ ವಿಸೇ಼ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ.

ಸಹೋದರ ರಾಘವೇಂದ್ರ ರಾಜ್ಕುಮಾರ್, ಪತ್ನಿ ಮಂಗಳಾ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್, ಮಗಳು ವಂದಿತಾ ಸೇರಿದಂತೆ ಕುಟುಂಬದ ಅನೇಕ ಸದಸ್ಯರು ಅಪ್ಪು ಸಮಾಧಿಗೆ ಪೂಜೆ ನೆರವೇರಿಸಿದರು. ರಾಜ್ ಕುಮಾರ್ ಕುಟುಂಬದವರು ಸಮಾಧಿಗೆ ಪೂಜೆ ಸಲ್ಲಿಸಿ ಮನೆಯಿಂದ ತಯಾರಿಸಿಕೊಂಡು ಬಂದಿದ್ದ ಬಗೆ ಬಗೆ ಖಾದ್ಯಗಳನ್ನು ನೈವೇದ್ಯದ ರೂಪದಲ್ಲಿ ಅರ್ಪಿಸಿ ಗೌರವ ಸಲ್ಲಿಸಿದರು.

ಪ್ರತಿ ವರ್ಷದಂತೆ ಈ ವರ್ಷವೂ ಅಪಪು ಪುತ್ರಿ ಪುತ್ರಿ ವಂದಿತಾ ಅಪ್ಪನಿಗೆ ಇಷ್ಟವಾದ ಬ್ಲಾಕ್ ಕೇಕ್ ತಯಾರಿಸಿಕೊಂಡು ತಂದು ಅರ್ಪಿಸಿದ್ದರು. ಪುನೀತ್ ಕಿರಿಯ ಪುತ್ರಿ ವಂದಿತಾ ಅವರಿಂದಲೇ ಅಪ್ಪನಿಗೆ ಪೂಜೆ ಮಾಡಿಸಲಾಯಿತು.ನಂತರ ಡಾ. ರಾಜ್‌ ಕುಮಾರ್‌ ಅವರಿಗೂ ಗೌರವ ಸಲ್ಲಿಸಿದರು.

ಪುಣ್ಯತಿಥಿ ಪ್ರಯುಕ್ತ ಪುನೀತ್ ಸಮಾಧಿಯನ್ನು ಬಣ್ಣ ಬಣ್ಣದ ಹೂಗಳಿಂದ ಅಲಂಕರಿಸಲಾಗಿತ್ತು. ರಾಜ್ಯದದ ವಿವಿಧ ಭಾಗಗಳಿಂದ ಆಗಮಿಸಿದ್ದ ಅಪ್ಪುವಿನ ಸಾವಿರಾರು ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತು ನೆಚ್ಚಿನ ನಟನಿಗೆ ಗೌರವ ಸಲ್ಲಿಸಿದರು.

ನಟರಾದ ವಿನಯ್ ರಾಜ್ಕುಮಾರ್, ಯುವ ರಾಜ್ಕುಮಾರ್, ನಿರ್ಮಾಪಕ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ನಿರ್ದೇಶಕ ರೋಹಿತ್ ಪದಕಿ ಸೇರಿದಂತೆ ಚಲನಚಿತ್ರರಂಗದ ಅನೇಕ ಗಣ್ಯರು ಅಪ್ಪುವಿಗೆ ಗೌರವ ಸಲ್ಲಿಸಿದರು.

More articles

Latest article

Most read