ಮಣಿಪುರದಲ್ಲಿ ಭೀಕರ ಬಾಂಬ್ ದಾಳಿ: ಇಬ್ಬರು ಹಸುಗೂಸುಗಳ ಸಾವು, ತಾಯಿ ಗಂಭೀರ

ಇಂಫಾಲ: ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮಂಗಳವಾರ ಏಪ್ರಿಲ್ 7, 2026ರ ಮುಂಜಾನೆ ನಡೆದ ಭೀಕರ ಬಾಂಬ್ ದಾಳಿಯಲ್ಲಿ ಐದು ವರ್ಷದ ಬಾಲಕ ಮತ್ತು ಐದು ತಿಂಗಳ ಹೆಣ್ಣು ಮಗು ಸಾವನ್ನಪ್ಪಿದ್ದಾರೆ. ದಾಳಿಯಲ್ಲಿ ಮಕ್ಕಳ ತಾಯಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ

ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೊಂಗ್ಲಾಬಿ ಎಂಬಲ್ಲಿ ಬೆಳಗಿನ ಜಾವ ಸುಮಾರು 1 ಗಂಟೆಗೆ ಈ ಘಟನೆ ನಡೆದಿದೆ. ಶಂಕಿತ ಕುಕಿ ಉಗ್ರರು ಉಡಾಯಿಸಿದ ಬಾಂಬ್ ನೇರವಾಗಿ ನಾಗರಿಕರ ಮನೆಯೊಂದರ ಮೇಲೆ ಬಿದ್ದಿದೆ. ಸ್ಫೋಟ ಸಂಭವಿಸಿದ ಸಮಯದಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ಮಲಗಿದ್ದರು ಎಂದು ವರದಿಯಾಗಿದೆ. ಈ ದಾಳಿಯಲ್ಲಿ 5 ವರ್ಷದ ಬಾಲಕ ಮತ್ತು 6 ತಿಂಗಳ ಮಗು ಸ್ಥಳದಲ್ಲೇ ಮೃತಪಟ್ಟಿವೆ. ಚುರಾಚಾಂದ್‌ಪುರ ಗುಡ್ಡಗಾಡು ಪ್ರದೇಶದ ಸಮೀಪವಿರುವ ಮೊಯಿರಾಂಗ್ ಟ್ರೊಂಗ್ಲಾಬಿ ಪ್ರದೇಶವು 2023 ಮತ್ತು 2024 ರ ಜನಾಂಗೀಯ ಸಂಘರ್ಷದ ಸಮಯದಲ್ಲಿ ನಿರಂತರ ಗುಂಡಿನ ಚಕಮಕಿಗೆ ಸಾಕ್ಷಿಯಾಗಿತ್ತು. ಈಗ ಮತ್ತೆ ಹಿಂಸಾಚಾರ ಉಲ್ಬಣಗೊಂಡಿರುವುದು ಆತಂಕ ಮೂಡಿಸಿದೆ.

ಸ್ಥಳೀಯ ಬಿಜೆಪಿ ಶಾಸಕ ಥೌನೋಜಮ್ ಶಾಂತಿ ಸಿಂಗ್ ಅವರು ಈ “ಬ್ರೂಟಲ್ ಅಟ್ಯಾಕ್” ಅನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು “ಹೀನಾಯ ಭಯೋತ್ಪಾದನಾ ಕೃತ್ಯ” ಎಂದು ಕರೆದಿರುವ ಅವರು, ಈ ಅಮಾನುಷ ಕೃತ್ಯ ಎಸಗಿದವರನ್ನು “ಕುಕಿ ನಾರ್ಕೋ-ಟೆರರಿಸ್ಟ್ಸ್” ಎಂದು ಬಣ್ಣಿಸಿದ್ದಾರೆ. ಮೃತಪಟ್ಟ ಕಂದಮ್ಮಗಳಿಗೆ ಸಂತಾಪ ಸೂಚಿಸಿರುವ ಅವರು, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಸಮಾಜದಲ್ಲಿ ಇಂತಹ ಅಮಾನವೀಯ ಕೃತ್ಯಗಳಿಗೆ ಸ್ಥಾನವಿಲ್ಲ ಮತ್ತು ಇದನ್ನು ಪ್ರತಿಯೊಬ್ಬರೂ ಖಂಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

More articles

Latest article

Most read