ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ ಅವರು ನಿವೃತ್ತಿ ಘೋಷಿಸಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ್ದಾರೆ.
ಜನವರಿ 24ರಂದು ಅಸ್ಸಾಂನ ದಿಬ್ರುಗಢ ಸಮೀಪ ಇರುವ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನನ್ನ ವಯಸ್ಸು ನನಗೆ ಕ್ರೀಡೆಯಲ್ಲಿ ಭಾಗವಹಿಸಲು ಬಿಡುವುದಿಲ್ಲ. ಆದರೆ ನನ್ನ ಪೀಟ್ನೆಸ್ ಮೇಲೆ ಹೆಚ್ಚಿನ ಗಮನ ಹರಿಸುತ್ತಿದ್ದೇನೆ. ನಾನು ಯಾವಾಗ ನಿವೃತ್ತಿ ಘೋಷಿಸಲು ಬಯಸಿದಾಗ ವೈಯಕ್ತಿಕವಾಗಿ ಮಾಧ್ಯಮಗಳ ಮುಂದೆ ಖುದ್ದಾಗಿ ನಾನೇ ಬರುತ್ತೇನೆ. ಆದರೆ ಈ ಹಿಂದೆ ಕ್ರೀಡೆಯನ್ನು ತ್ಯಜಿಸುವ ಯಾವುದೇ ಔಪಚಾರಿಕ ಘೋಷಣೆಯನ್ನು ಇನ್ನೂ ಮಾಡಿಲ್ಲ’ ಎಂದು ಹೇಳಿದರು.
ಬಾಕ್ಸರ್ ಗಳಿಗೆ 40 ವರ್ಷ ವಯೋಮಾನದ ತನಕ ಮಾತ್ರ ಉನ್ನತ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಲು ಅಂತರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮವಿದೆ. ಹಾಗಾಗಿ ಮೇರಿ ಕೋಮ್ ನಿವೃತ್ತಿ ಘೋಷಿಸಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.