Wednesday, May 22, 2024

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ : ಅಧಿಕೃತ ಘೋಷಣೆ ಒಂದೇ ಬಾಕಿ!

Most read

ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ದೆಹಲಿಗೆ ತೆರಳಿ ಅಮಿತ್ ಷಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಶೆಟ್ಟರ್ ಮತ್ತೆ ಬಿಜೆಪಿ ಸೇರ್ಪಡೆಗೆ ಷಾ ಗ್ರೀಸ್ ಸಿಗ್ನಲ್ ನೀಡಿದ್ದಾರೆ ಎಂಬ  ಮಾಹಿತಿ ತಿಳಿದುಬಂದಿದೆ.

ಬುಧವಾರವಷ್ಟೇ ಯಡಿಯೂಪ್ಪ ಮತ್ತು ವಿಜಯೇಂದ್ರ ಅವರು ಯಾವ ಮಾಹಿತಯನ್ನು ನೀಡದೇ ರಹಸ್ಯವಾಗಿ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಅವರ ಮೂಲಕವೇ ಶೆಟ್ಟರ್, ಅಮಿತ್ ಷಾ ನಿವಾಸಕ್ಕೆ ಭೇಟಿ ನೀಡಿ ಮಾತು ಕತೆ ನಡೆದಿದ್ದು ಬಿಜೆಪಗೆ ಸೇರುವುದು ಬಹುತೇಕ ಫೈನಲ್ ಆಗಿದೆ. ಅಧಿಕೃತ ಘೋಷಣೆ ಒಂದೇ ಬಾಕಿ ಎಂಬ ಮಾಹಿತಿ ತಿಳಿದುಬಂದಿದೆ.

ರಾಜ್ಯ ಬಿಜೆಪಿ ನಾಯಕರು ದೆಹಲಿಯಲ್ಲಿದ್ದು, ಈಗ ಜಗದೀಶ್ ಶೆಟ್ಟರ್  ದೆಹಲಿಗೆ ತೆರಳಿರೋದು ಅನೇಕ ಚರ್ಚೆಗೆ ಕಾರಣವಾಗಿತ್ತು. ಶೆಟ್ಟರ್ ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂಬ ಚರ್ಚೆಗಳು ನಡೆದಿತ್ತು. ಕಳೆದ  ಕೆಲವು ದಿನಗಳಿಂದ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹಿಂದಿರುಗಲಿದ್ದಾರೆ ಎಂಬ ಮಾತುಗಳನ್ನು ಶೆಟ್ಟರ್ ಅಕ್ಷರಶಃ ಸತ್ಯ ಮಾಡಿದ್ದಾರೆ ಎನ್ನಲಾಗಿದೆ.

ಸಧ್ಯ ಈಗ ಬಿಜೆಪಿ ಪಕ್ಷದ ಅಧ್ಯಕ್ಷ ಜೆಪಿ ನಡ್ಡ ಅವರೊಡನೆ ಮಾತನಾಡಲು ದೆಹಲಿಯ ಬಿಜೆಪಿ ಕೇಂದ್ರ ಕಚೇರಿಗೆ ಬಿಎಸ್ ವೈ, ವಿಜಯೇಂದ್ರ ಜತೆ ಶೆಟ್ಟರ್ ಆಗಮಿಸಿದ್ದಾರೆ.

ಚರ್ಚೆಯ ಬಳಿಕ ಬೆಂಗಳೂರಿಗೆ ವಾಪಸ್ ಆಗಿ MLC ಸ್ಥಾನಕ್ಕೆ ಇಂದೇ ಶೆಟ್ಟರ್ ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಾಜೀನಾಮೆ ಬಳಿಕ ಬಿಜೆಪಿ ಸೇರ್ಪಡೆ ಘೋಷಣೆ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಬರುತ್ತಿದ್ದು, ಜೆಪಿಯಿಂದ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡ್ತಾರಾ? ಶೆಟ್ಟರ್ ಸ್ಪರ್ಧೆ ಮಾಡುವುದಾದರೆ ಕ್ಷೇತ್ರ ಯಾವುದು.? ಅಥವಾ ರಾಜ್ಯಪಾಲರಾಗಿ ನೇಮಕ ಮಾಡ್ತಾರಾ? ಎಂಬ ಪ್ರಶ್ನೆಗೆ ಶೀಘ್ರ ಉತ್ತರ ಸಿಗಲಿದೆ.

More articles

Latest article