ಮರಕುಂಬಿ ದೌರ್ಜನ್ಯ ಪ್ರಕರಣ; ಓರ್ವ ಆರೋಪಿ ಸಾವು

ಗಂಗಾವತಿ: ನಿನ್ನೆಯಷ್ಟೇ ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಶಿಕ್ಷೆಗೊಳಗಾದ ಓರ್ವ ಆರೋಪಿ ಅನಾರೋಗ್ಯದಿಂದ ಇಂದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರಾಮಣ್ಣ ಭೋವಿ ಎಂಬ ಅಪರಾಧಿ ಅಸುನೀಗಿದ್ದಾರೆ. ನಿನ್ನೆ ಕೋರ್ಟ್ ಗೆ ಕರೆದುಕೊಂಡು ಬಂದಾಗ ರಾಮಣ್ಣ ಅಸ್ವಸ್ಥನಾಗಿದ್ದ. ವೈದ್ಯರು ನ್ಯಾಯಾಲಯದಲ್ಲೇ ರಾಮಣ್ಣಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ಧರು. ಶಿಕ್ಷೆ ಪ್ರಕಟವಾದ ಬಳಿಕ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ರಾಮಣ್ಣ ಭೋವಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

ರಾಮಣ್ಣ ಭೋವಿಯೂ ಗಂಗಾವತಿ ತಾಲೂಕಿನ ಮರಕುಂಬಿ ನಿವಾಸಿ. 2014ರ ಆಗಸ್ಟ್ 28ರಂದು ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆಸಿದ್ದ ಪ್ರಕರಣ ಇದಾಗಿದೆ.

More articles

Latest article

Most read