Saturday, July 27, 2024

ಮಂಡ್ಯ: ಜಿಲ್ಲಾಡಳಿತ – ಪ್ರಗತಿಪರರ ಮಾತುಕತೆ ನಂತರ ಫೆ. 7ರ ಮಂಡ್ಯ ಬಂದ್ ರದ್ದು

Most read

ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ವಿಚಾರವನ್ನು ಖಂಡಿಸಿ ಫೆಬ್ರವರಿ 7ರಂದು ಸಮಾನ ಮನಸ್ಕ ವೇದಿಕೆ ಮಂಡ್ಯ ಜಿಲ್ಲೆ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ ಈಗ ಜಿಲ್ಲಾಡಳಿತ ಮತ್ತು ಪ್ರಗತಿಪರರ ಮಾತುಕತೆಯ ನಂತರ ಬಂದ್‌ ರದ್ದು ಮಾಡಲಾಗಿದೆ.

ಫೆ 7 ರಂದು ಬಂದ್‌ ಗೆ ಕರೆ ನೀಡಿದ್ದ, ಬೆನ್ನಲ್ಲೆ ಸಂಘಪರಿವಾರ ಕೂಡ ಫೆ 9 ರಂದು ಬಂದ್‌ ಗೆ ಕರೆ ನೀಡಿದೆ. ಇದರ ವಿಷಯವಾಗಿ ಜಿಲ್ಲಾಧಿಕಾರಿ ಡಾ ಕುಮಾರ್‌ ಅವರು ಸಂಘಪರಿವಾದವರಿಗೆ ಮತ್ತು ಪ್ರಗತಿಪರರನ್ನು ಕರೆದು ಪ್ರತ್ಯೇಕ ಸಭೆ ನಡೆಸಿದೆ . ಸಭೆಯ ನಂತರ ಫೆ 7 ರ ಬಂದನ್ನು ರದ್ದುಗೊಳಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಜಿಲ್ಲಾಡಳಿತದ ಮನವಿಗೆ ಸಮಾನ ಮನಸ್ಕರ ವೇದಿಕೆ ಸ್ಪಂದಿಸಿದ್ದು ಬಂದ್ ಹಿಂಪಡೆದಿದೆ. ಫೆ.7ರಂದು ಕರೆಕೊಟ್ಟಿದ್ದ ಬಂದ್ ತಾತ್ಕಾಲಿಕ ವಾಪಸ್ಸು ಪಡೆದಿದೆ. ಫೆ.9 ರಂದು ಮಂಡ್ಯ ನಗರ ಬಂದ್​ಗೂ ಅವಕಾಶ ಕೊಡಬೇಡಿ. ಫೆ.9 ರಂದು ಮಂಡ್ಯ ನಗರವನ್ನ ಭಜರಂಗದಳದವರು ಬಂದ್ ಮಾಡಿದರೆ, ಅದನ್ನ ವಿರೋಧಿಸಿ ಮತ್ತೆ ಬಂದ್ ಗೆ ಕರೆಕೊಡುತ್ತೇವೆ ಎಂದು ಸಮಾನ ಮನಸ್ಕರ ವೇದಿಕೆ ಎಚ್ಚರಿಕೆ ನೀಡಿದೆ. ಆದರೆ ಫೆ.9 ರಂದು ಮಂಡ್ಯನಗರ ಬಂದ್ ಮಾಡದ ಬಗ್ಗೆ ಇನ್ನೂ ಭಜರಂಗದಳ ನಿಲುವು ತಿಳಿಸಿಲ್ಲ.

ʼಈಗಾಗಲೇ ಮಂಡ್ಯದಲ್ಲಿ ಸಾಕಷ್ಟು ಬಂದ್‌ ಗಳಾಗಿ ವ್ಯಾಪರ-ವಹಿವಾಟು ಕಡಿಮೆ ಆಗಿದೆ. ದಯಮಾಡಿ ಈ ಬಂದನ್ನು ನಿಲ್ಲಿಸಿ ಎಂದು ಮಂಡ್ಯ ವರ್ತಕರ ಸಂಘವು ಕೇಳಿದೆ. ಪ್ರಗತಿಪರರ ಜೊತೆ ಚರ್ಚೆ ನಡೆಸಿದ ನಂತರ ನಾವು ಸಹ ಜಿಲ್ಲಾಡಳಿತದ ತೀರ್ಮಾನಕ್ಕೆ ಸ್ಪಂದಿಸಿದೆವುʼ ಎಂದು ಸಮಾನ ಮನಸ್ಕರ ವೇದಿಕೆಯ ಲಕ್ಷಣ್‌ ಚೀರನಹಳ್ಳಿ ಕನ್ನಡ ಪ್ಲಾನೆಟ್‌ ಗೆ ಹೇಳಿದ್ದಾರೆ.

More articles

Latest article