ರೇವಣ್ಣ ಅವರ ಇಡೀ ಕುಟುಂಬಕ್ಕೆ ಕುಟುಂಬವೇ ಲೈಂಗಿಕ ದೌರ್ಜನ್ಯ, ಸಂತ್ರಸ್ತೆ ಅಪಹರಣ ಅಂತಹ ಕೇಸ್ ನಲ್ಲಿ ಸಿಲುಕಿಕೊಂಡಿದೆ. ಇಂತಹ ಸಂದರ್ಭದಲ್ಲಿ ಮಂಡ್ಯದಲ್ಲಿ ಅಳವಡಿಸಿಸಿರುವ ಕುಮಾರಸ್ವಾಮಿ ಅಭಿನಂದನ ಫ್ಲಕ್ಸ್ ನಲ್ಲಿ ಹೆಚ್.ಡಿ ರೇವಣ್ಣ ಅವರ ಪೋಟೋವನ್ನು ಕೈಬಿಡಲಾಗಿದೆ. ಈ ಮೂಲಕ ಜೆಡಿಎಸ್ ರೇವಣ್ಣ ಕುಟುಂಬದಿಂದ ಅಂತರ ಕಾಯ್ದುಕೊಂಡಿದೆ.
ಮಂಡ್ಯದಲ್ಲಿ ಅಳವಡಿಸಿರುವ ಬೃಹತ್ ಫ್ಲೆಕ್ಸ್ಗಳಲ್ಲಿ ಎಚ್ಡಿ ರೇವಣ್ಣ ಹಾಗೂ ಅವರ ಕುಟುಂಬಸ್ಥರ ಫೋಟೋ ಹೊರತುಪಡಿಸಿ ಬೇರೆಲ್ಲಾ ನಾಯಕರ ಫೋಟೋಗಳನ್ನು ಹಾಕಲಾಗಿದೆ. ಇದು ಜೆಡಿಎಸ್ ಪಕ್ಷ ಎಚ್ಡಿ ರೇವಣ್ಣ ಅವರಿಂದ ಅಂತರ ಕಾಯ್ದುಕೊಂಡಿರುವುದನ್ನು ಬಹಿರಂಗವಾಗಿ ತೋರಿಸುತ್ತದೆ.
ಎಚ್ಡಿ ರೇವಣ್ಣ ಅವರನ್ನು ಕೆಲ ದಿನಗಳ ಹಿಂದೆ, ದೌರ್ಜನ್ಯ ಹಾಗೂ ಅಪಹರಣ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಅಲ್ಲದೆ ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣರನ್ನು ಬಂಧಿಸಲು ಮುಂದಾದಾಗ ಸದ್ಯ ಅವರು ಜಾಮೀನು ಪಡೆದು ಹೊರಗಿದ್ದಾರೆ.
ಇನ್ನೂ ಇವರ ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅಲ್ಲದೆ ಇವರ ಮತ್ತೋರ್ವ ಪುತ್ರ ಸೂರಜ್ ರೇವಣ್ಣ ಸಹ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಐಡಿ ಕಸ್ಟಡಿಯಲ್ಲಿದ್ದಾರೆ.
ಹೀಗೆ ಇಡೀ ಕುಟುಂಬಕ್ಕೆ ಕುಟುಂಬವೇ ಅತ್ಯಾಚಾರ, ಅಪಹರಣ ಹಾಗೂ ಇಂತಹ ಕೆಲಸಕ್ಕೆ ಸಹಕಾರ ನೀಡಿದ ಆರೋಪವನ್ನು ಎದುರಿಸುತ್ತಿರುವ ಕಾರಣ ಜೆಡಿಎಸ್ ಪಕ್ಷ ತೀರ್ವ ಮುಜುಗರಕ್ಕೀಡಾಗಿದೆ. ಇದರಿಂದ ಇವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡದೇ ಇದ್ದರೂ ಅವರಿಂದ ಅಂತರವನ್ನು ಕಾಯ್ದುಕೊಂಡಿದೆ.
ಫ್ಲೆಕ್ಸ್ಗಳಲ್ಲಿ ಎಚ್ಡಿ ದೇವೇಗೌಡ, ಎಚ್ಡಿ ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ, ಆರ್, ಅಶೋಕ್ ಸೇರಿದಂತೆ ಹಲವು ಬಿಜೆಪಿ ನಾಯಕರ ಫೋಟೋಗಳನ್ನು ಹಾಕಲಾಗಿದೆ. ಅಲ್ಲದೆ ಮಾಜಿ ಸಂಸದೆ ಸುಮಲತಾ, ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರ ಫೋಟೋಗಳ ಫ್ಲೆಕ್ಸ್ಗಳು ಮಂಡ್ಯದ ತುಂಬಾ ರಾಜಾಜಿಸುತ್ತಿವೆ. ಆದರೆ ರೇವಣ್ಣ ಅವರ ಪೋಟೋವನ್ನು ಕೈಬಿಡಲಾಗಿದೆ.