Thursday, September 19, 2024

ಗೋಡ್ಸೆಯನ್ನು ವೈಭವೀಕರಿಸುವವರಿಗೆ ಭಾರತದ ಕಲ್ಪನೆಯನ್ನು ವ್ಯಾಖ್ಯಾನಿಸಲು ಬಿಡುವುದಿಲ್ಲ : ಕಾಂಗ್ರೆಸ್

Most read

ನವದೆಹಲಿ: ಮಹಾತ್ಮಾ ಗಾಂಧಿಯವರ ಪುಣ್ಯಸ್ಮರಣೆಯಂದು ನಡೆದ ಕಾರ್ಯಕ್ರಮದಲ್ಲಿ “ದ್ವೇಷದ ಚಂಡಮಾರುತದಲ್ಲಿ ಸತ್ಯ ಮತ್ತು ಸಾಮರಸ್ಯದ ಜ್ವಾಲೆಯನ್ನು ನಂದಿಸಲು ಬಿಡದೇ ಇರುವುದೇ ರಾಷ್ಟ್ರಪಿತನಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ” ಎಂದು ಕಾಂಗ್ರೆಸ್ ಹೇಳಿದೆ.

ಮಂಗಳವಾರ ದೆಹಲಿಯ ಕಾಂಗ್ರೆಸ್‌ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ʼಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸುವವರಿಗೆ ಭಾರತದ ಕಲ್ಪನೆಯನ್ನು ವ್ಯಾಖ್ಯಾನ ಮಾಡಲು ಬಿಡಬಾರದು ಮತ್ತು ಬಿಡುವುದಿಲ್ಲʼ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ‘ಎಕ್ಸ್’ ಪೋಸ್ಟ್‌ನಲ್ಲಿ “ಶತ್ರು ಎಂದರೆ ಭಯ, ನಾವು ಅದನ್ನು ದ್ವೇಷ ಎಂದು ಭಾವಿಸುತ್ತೇವೆ ಆದರೆ ಅದು ಭಯ” ಎಂದು ಮಹಾತ್ಮ ಗಾಂಧಿಯವರ ಉಲ್ಲೇಖವನ್ನು ಉಲ್ಲೇಖಿಸಿದ್ದಾರೆ.

More articles

Latest article