ಕರ್ನಾಟಕ ಸರ್ಕಾರವನ್ನು ಉರುಳಿಸುತ್ತಾರಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಶಿಂಧೆ

Most read

ಸತಾರಾ (ಮಹಾರಾಷ್ಟ್ರ): ಕರ್ನಾಟಕದ ಜನತೆ ಮತ ಚಲಾಯಿಸಿ ಅಧಿಕಾರಕ್ಕೆ ತಂದಿರುವ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ, ಬಿಜೆಪಿ ಬೆಂಬಲಿತ ಶಿವಸೇನೆ ಮುಖ್ಯಸ್ಥ ಏಕನಾಥ್‌ ಶಿಂಧೆ ಹೇಳಿದ್ದಾರೆ.

2023ರಲ್ಲಿ ನಡೆದ ಚುನಾವಣೆಯಲ್ಲಿ ಕರ್ನಾಟಕದ ಜನತೆ 136 ಕಾಂಗ್ರೆಸ್‌ ಶಾಸಕರನ್ನು ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಅವರ ಸರ್ಕಾರ ರಚನೆಯಾಗಿದೆ. ಈ ಜನಮತದ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಶಿಂಧೆ ಯಾವ ಲಜ್ಜೆಯೂ ಇಲ್ಲದಂತೆ ಬಹಿರಂಗವಾಗಿ ಹೇಳಿರುವುದು ಈಗ ಚರ್ಚೆಯ ವಿಷಯವಾಗಿದೆ.

ತನ್ನ ತವರು ಜಿಲ್ಲೆಯೂ ಆಗಿರುವ ಸತಾರಾದಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ಏಕನಾಥ್‌ ಶಿಂಧೆ, ʻʻಕರ್ನಾಟಕದಲ್ಲಿ ಒಂದು ʻನಾಥʼ ಆಪರೇಷನ್‌ ಮಾಡಲಿದ್ದೇವೆ. ನಾಥ ಆಪರೇಷನ್‌ ಎಂದರೆ ಎಂದರೆ ಏನು ಗೊತ್ತೆ?  ಮಹಾರಾಷ್ಟ್ರದಲ್ಲಿ ನಡೆದ ಆಪರೇಷನ್‌ ಕಮಲ ಮತ್ತು ಬಿಜೆಪಿ-ಶಿವಸೇನೆ ಸರ್ಕಾರ ಸ್ಥಾಪನೆಯ ಮಾದರಿಯ ಕಾರ್ಯಚರಣೆ. ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದಾರೆ. ಆಯ್ತು ಎಂದಿದ್ದೇನೆʼʼ ಎಂದು ಶಿಂಧೆ ಹೇಳಿದ್ದಾರೆ.

ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಶಿಂಧೆ, ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಚುನಾಯಿತ ಸರ್ಕಾರವನ್ನು ಉರುಳಿಸುತ್ತೇನೆ ಎಂದು ಹೇಳುವುದು ಎಷ್ಟು ಸರಿ? ನಿಮ್ಮ ಸಹಕಾರ ಬೇಕು ಎಂದು ಶಿಂಧೆಯನ್ನು ಕೇಳಿದವರು ಯಾರು? ಯಾವ ರೀತಿಯ ಸಹಕಾರವನ್ನು ಶಿಂಧೆ ನೀಡಲಿದ್ದಾರೆ? ಎಂಬೆಲ್ಲ ಪ್ರಶ್ನೆಗಳು ಈಗ ಉದ್ಭವಿಸಿವೆ.

More articles

Latest article