ಕುಮಾರಸ್ವಾಮಿ ಸಾಚ ಅಲ್ಲ, ಅವರ ಬಂಧನದ ಕಾಲ ದೂರವಿಲ್ಲ : ಶಾಸಕ ಕದಲೂರು ಉದಯ್

Most read

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಪ್ರಕರಣ ಕುರಿತಾಗಿ ಕಾಂಗ್ರೆಸ್ ಶಾಸಕ ಕದಲೂರು ಉದಯ್ ಕುಮಾರಸ್ವಾಮಿ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,  ಪೆನ್‌ಡ್ರೈವ್ ಪ್ರಕರಣ ಸಂಬಂಧ ಶುಕ್ರವಾರವಷ್ಟೇ ಹೊಳೆನರಸೀಪುರದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಬಂಧನವಾಗಿದೆ. ಕುಮಾರಸ್ವಾಮಿ ಅವರು ಸಹ ಬಂಧನವಾಗುವ ದಿನಗಳು ದೂರವಿಲ್ಲ. ಅವರೇನು ಸಾಚಾನ? ಕುಮಾರಸ್ವಾಮಿ ಲೈಂಗಿಕ ದೌರ್ಜನ್ಯದ ಕಿರುಕುಳ ಬಗ್ಗೆಯೂ ನಾವು ಕೇಳಿದ್ದೇವೆ ಎಂದು ಹೇಳುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕುಮಾರಸ್ವಾಮಿ ಅವರ ವಿರುದ್ಧವೂ ಮಹಿಳೆಯು ಮುಂದಿನ ದಿನಗಳಲ್ಲಿ ದೂರು ಕೊಡುತ್ತಾರೆ. ಮಗಳ ವಯಸ್ಸಿನ ರಾಧಿಕಾರನ್ನು ಪುಸಲಾಯಿಸಿ ಕೈಗೆ ಮಗಳನ್ನು ಕೊಟ್ಟಿದ್ದಾರೆ. ಇದೀಗ ಅವರನ್ನು ರೋಡಿಗೆ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಆದವರು ಇಂಥಹ ನೀಚ ಕೆಲಸ ಮಾಡುತ್ತಾರಾ? ಹಾಗಾದರೆ ಕುಮಾರಸ್ವಾಮಿ ಅವರೇನು ಸಾಚಾನಾ? ಎಂದು ಪ್ರಶ್ನೆ ಮಾಡಿದರು.

ಇವರ ಮನೆ ಹೆಣ್ಣು ಮಕ್ಕಳ ಮರಿಯಾದೆ ಹೋಗಿದ್ದರೆ ಹೀಗೆ ರಸ್ತೆಯಲ್ಲಿ ಬಂದು ಪ್ರತಿಭಟನೆ ಮಾಡುತ್ತಿದ್ದರಾ?. ಬೇರೆಯವರನ್ನು ಮುಳುಗಿಸಿಯೇ ಈವರು ಮೇಲೆ ಬಂದಿರೋದು ಇದೇ ಅವರ ಸಾಧನೆ. ಇವು ಸಹ ಅವರ ನೀಚ ಕೆಲಸ ಎಂದು ವಾಗ್ದಾಳಿ ಮಾಡಿದ್ದಾರೆ.

More articles

Latest article