ಲಖನೌ ವಿಮಾನ ನಿಲ್ದಾಣ: ಸೌದಿ ಏರ್‌ ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ; ಪ್ರಯಾಣಿಕರು ಅಪಾಯದಿಂದ ಪಾರು

ಲಖನೌ: ಅಹಮದಾಬಾದ್ ವಿಮಾನ ದುರಂತ ಇನ್ನೂ ಹಸಿರಾಗಿರುವಾಗಲೇ ಲಖನೌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸೌದಿ ಏರ್‌ ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡು ಕೆಲ ಕಾಲ ಆತಂಕ ಮೂಡಿಸಿತ್ತು. ಇಂದು ವಿಮಾನಗಳು ತಾಂತ್ರಿಕ ದೋಷ ಎದುರಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿವೆ.

ಲಖನೌದಲ್ಲಿ ಇಳಿದ ಸೌದಿ ಏರ್‌ಲೈನ್ಸ್ ವಿಮಾನದಲ್ಲಿಯೂ ತಾಂತ್ರಿಕ ದೋಷದಿಂದ ಹೊಗೆ ಕಾಣಿಸಿಕೊಂಡಿದೆ. 250 ಹಜ್ ಯಾತ್ರಿಕರನ್ನು ಹೊತ್ತ ಸೌದಿ ಏರ್‌ ಲೈನ್ಸ್ ವಿಮಾನವು (ಎಸ್‌ವಿ 3112) ಶನಿವಾರ ರಾತ್ರಿ 10.30ಕ್ಕೆ ಜೆಡ್ಡಾದಿಂದ ಹೊರಟು ಭಾನುವಾರ ಮುಂಜಾನೆ ಸುಮಾರು 6.30ರ ವೇಳೆ ಲಖನೌ ದ ಚೌಧರಿ ಚರಣ್ ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗಿತ್ತು. ಲ್ಯಾಂಡಿಂಗ್ ಆದ ಕೆಲ ಹೊತ್ತಿನಲ್ಲೇ ವಿಮಾನದ ಎಡ ಚಕ್ರದಲ್ಲಿ ಹೊಗೆ ಕಾಣಿಸಿಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ತಕ್ಷಣ ಎಚ್ಚೆತ್ತ ಪೈಲಟ್‌ ವಿಮಾನವನ್ನು ನಿಲ್ಲಿಸಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಮಾಹಿತಿ ನೀಡಿದ್ದಾರೆ. ನಂತರ ವಿಮಾನವನ್ನು  ರನ್‌ ವೇಯಿಂದ ಟ್ಯಾಕ್ಸಿ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಕೂಡಲೇ ಆಗಮಿಸಿದ ವಿಮಾನದ ನಿಲ್ದಾಣದ ತುರ್ತು ಪ್ರಕ್ರಿಯೆ ತಂಡವು ಚಕ್ರಕ್ಕೆ ನೀರು ಹಾಯಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ. ಹೈಡ್ರಾಲಿಕ್ ಸೋರಿಕೆಯಿಂದ ಹೊಗೆ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಂದು ವೇಳೆ ಟೇಕಾಫ್ ಆಗುವ ಸಮಯದಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದರೆ, ವಿಮಾನ ಸ್ಫೋಟಗೊಳ್ಳುವ ಸಾಧ್ಯತೆಯಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೂನ್ 12ರಂದು ಅಹಮದಾಬಾದ್‌ ಪಟೇಲ್‌ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಸ್ವಲ್ಪ ಕ್ಷಣದಲ್ಲೇ ಪತನಗೊಂಡಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಸೇರಿದಂತೆ ಸುಮಾರು 265ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಇಂದು ಬೆಳಗ್ಗೆ ಹಾಂಗ್‌ಕಾಂಗ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆ ಮರಳಿ ಹಾಂಗ್‌ ಕಾಂಗ್‌ ನಲ್ಲಿಯೇ ಲ್ಯಾಂಡಿಂಗ್ ಮಾಡಿತ್ತು. ಬಾಂಬ್ ಬೆದರಿಕೆ ಹಿನ್ನೆಲೆ ಫ್ರಾಂಕ್‌ ಫರ್ಟ್‌ನಿಂದ ಹೈದರಾಬಾದ್ ಕಡೆ ಹೊರಟಿದ್ದ ಲುಫ್ತಾನ್ಸ ಏರ್‌ಲೈನ್ಸ್‌ ನ ಗ್ರೀಮ್‌ ಲೈನ‌ರ್ ವಿಮಾನವೂ ಮರಳಿ ಫ್ರಾಂಕ್‌ ಫರ್ಟ್ ವಿಮಾನ ನಿಲ್ದಾಣದಲ್ಲಿಯೇ ಲ್ಯಾಂಡಿಂಗ್ ಮಾಡಿದೆ.

More articles

Latest article

Most read