ಲೋಕಸಭಾ ಚುನಾವಣೆ 2024: ರಾಜ್ಯದ 17 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

Most read

ರಾಜ್ಯದಲ್ಲಿ ಬಾಕಿ ಇರುವ 21 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ದಿಲ್ಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‌ ಚುನಾವಣಾ ಸಮಿತಿ (ಸಿಇಸಿ) ಸಭೆ ಅಂತ್ಯಗೊಂಡಿದ್ದು, ಒಟ್ಟು ಕರ್ನಾಟಕದಲ್ಲಿ 17 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ.

ಕೇಂದ್ರ ಚುನಾವಣಾ ಆಯೋಗ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟಿಸಿದೆ. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ.

ಕಾಂಗ್ರೆಸ್‌ನಿಂದ ಬಿಡುಗಡೆಯಾದ ಎರಡನೇ ಪಟ್ಟಿ; ಇಲ್ಲಿದೆ ಅಭ್ಯರ್ಥಿಗಳ ಹೆಸರು:-

ಸಂಖ್ಯೆಕ್ಷೇತ್ರದ ಹೆಸರುಅಭ್ಯರ್ಥಿಯ ಹೆಸರು
01‍ಚಿತ್ರದುರ್ಗಬಿ.ಎನ್‌.ಚಂದ್ರಪ್ಪ
02ಉಡುಪಿ-ಚಿಕ್ಕಮಗಳೂರುಜಯಪ್ರಕಾಶ್‌ ಹೆಗ್ಡೆ
03ದಕ್ಷಿಣ ಕನ್ನಡಪದ್ಮರಾಜ್‌
04ಚಿಕ್ಕಬಳ್ಳಾಪುರಇನ್ನೂ ಘೋಷಣೆಯಾಗಿಲ್ಲ
05ಕೋಲಾರಇನ್ನೂ ಘೋಷಣೆಯಾಗಿಲ್ಲ
06ಮೈಸೂರು-ಕೊಡಗುಎಂ.ಲಕ್ಷ್ಮಣ್‌
07ಚಾಮರಾಜನಗರಇನ್ನೂ ಘೋಷಣೆಯಾಗಿಲ್ಲ
08ಬೆಂಗಳೂರು ದಕ್ಷಿಣಸೌಮ್ಯ ರೆಡ್ಡಿ
09ಬೆಂಗಳೂರು ಉತ್ತರಪ್ರೊ.ರಾಜೀವ್‌ ಗೌಡ
10ಬೆಂಗಳೂರು ಕೇಂದ್ರಮನ್ಸೂರ್‌ ಅಲಿಖಾನ್‌
11ಬೆಳಗಾವಿಮೃಣಾಲ್‌ ಹೆಬ್ಬಾಳಕರ್‌
12ಬಳ್ಳಾರಿಇನ್ನೂ ಘೋಷಣೆಯಾಗಿಲ್ಲ
13ಚಿಕ್ಕೋಡಿಪ್ರಿಯಾಂಕಾ ಜಾರಕಿಹೊಳಿ
14ಕಲಬುರಗಿರಾಧಾಕೃಷ್ಣ ದೊಡ್ಡಮನಿ
15ಬೀದರ್ಸಾಗರ್ ಖಂಡ್ರೆ
16ಹುಬ್ಬಳಿ – ಧಾರವಾಡವಿನೋದ್‌ ಅಸುಟಿ
17ಕೊಪ್ಪಳರಾಜಶೇಖರ ಹಿಟ್ನಾಳ್‌
18ರಾಯಚೂರುಜಿ.ಕುಮಾರ ನಾಯಕ್‌
19ಉತ್ತರ ಕನ್ನಡಡಾ.ಅಂಜಲಿ ನಿಂಬಾಳ್ಕರ್‌
20ದಾವಣಗೆರೆಪ್ರಭಾ ಮಲ್ಲಿಕಾರ್ಜುನ
21ಬಾಗಲಕೋಟೆಸಂಯುಕ್ತಾ ಪಾಟೀಲ್‌

ಮೊದಲನೇ ಪಟ್ಟಿಯಲ್ಲಿ ಕಾಂಗ್ರೆಸ್‌ ಘೋಷಿಸಿದ ಅಭ್ಯರ್ಥಿಗಳ ಹೆಸರು:-

ಸಂಖ್ಯೆಕ್ಷೇತ್ರದ ಹೆಸರುಅಭ್ಯರ್ಥಿಯ ಹೆಸರು
01ಹಾವೇರಿ-ಗದಗಆನಂದ ಸ್ವಾಮಿ ಗೌಡದೇವರಮಠ
02ಶಿವಮೊಗ್ಗಗೀತಾ ಶಿವರಾಜಕುಮಾರ್
03ವಿಜಯಪುರಎಚ್ಆರ್ ರಾಜು ಆಲಗೂರ
04ಹಾಸನಎಂ. ಶ್ರೇಯಸ್ ಪಟೇಲ್
05ತುಮಕೂರುಎಸ್.ಪಿ ಮುದ್ದಹನುಮೇಗೌಡ
06ಮಂಡ್ಯವೆಂಕಟರಾಮೇಗೌಡ (ಸ್ಟಾರ್ ಚಂದ್ರು)
07ಬೆಂಗಳೂರು ಗ್ರಾಮಾಂತರಡಿ.ಕೆ.ಸುರೇಶ್

ಸುರಪುರ ವಿಧಾನಸಭೆ ಉಪ ಚುನಾವಣೆ ಅಭ್ಯರ್ಥಿ ಹೆಸರು ಘೋಷಣೆ

ಕಾಂಗ್ರೆಸ್ (Congress) ಶಾಸಕ ರಾಜಾ ವೆಂಕಟಪ್ಪನಾಯಕ (Raja Venkatappa Nayaka) ಅವರು ನಿಧನರಾದ್ದರಿಂದ ಸುರಪುರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್ ನಿಂದ ರಾಜ ವೇಣುಗೋಪಾಲ್ ನಾಯ್ಕ್ ಅವರನ್ನು ಕಣಕ್ಕಿಳಿಸಿದೆ.

ಕರ್ನಾಟಕದಲ್ಲಿ (Karnataka) ಮೇ 7ರಂದು ಎರಡನೇ ಹಂತದ ಲೋಕಸಭೆ ಚುನಾವಣೆ ನಡೆಯಲಿದ್ದು ಅದೇ ದಿನ ಸುರಪುರದಲ್ಲೂ ಉಪಚುನಾವಣೆ ನಡೆಯಲಿದೆ.

ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ.  ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ 2024ರ ರಾಜ್ಯವಾರು ವೇಳಾಪಟ್ಟಿ

ಹಂತ – ಚುನಾವಣೆ ನಡೆಯುವ ದಿನಾಂಕರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕ್ಷೇತ್ರಗಳು
ಏಪ್ರಿಲ್ 19ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ , ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿ102
ಏಪ್ರಿಲ್ 26ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ89
ಮೇ 7ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗೋವಾ , ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಜಮ್ಮು ಮತ್ತು ಕಾಶ್ಮೀರ94
ಮೇ 13ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ96
ಮೇ 20ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್49
ಮೇ 25ಬಿಹಾರ, ಹರಿಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ57
ಜೂನ್ 1ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ57

ಕರ್ನಾಟಕ ಎರಡನೇ ಹಂತದ ಲೋಕಸಭಾ ಚುನಾವಣೆ-2024 ರ ಕಾರ್ಯಕ್ರಮಗಳ ಕ್ಯಾಲೆಂಡರ್

ಕ್ರಮ ಸಂಖ್ಯೆದಿನಾಂಕಕಾರ್ಯಕ್ರಮಗಳು
116/03/2024ಚುನಾವಣೆ ನೀತಿ ಸಂಹಿತೆ
228/03/2024ನಾಮನಿರ್ದೇಶನಗಳ ಪ್ರಾರಂಭಿಕ ದಿನಾಂಕ
304/04/2024ನಾಮನಿರ್ದೇಶನಗಳ ಕೊನೆಯ ದಿನಾಂಕ
405/04/2024ನಾಮನಿರ್ದೇಶನಗಳ ಪರಿಶೀಲನೆ
508/04/2024ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ
626/04/2024ಮತದಾನ ದಿನಾಂಕ
704/06/2024ಮತಎಣಿಕೆ
806/06/2024ಚುನಾವಣಾ ಪೂರ್ಣಗೊಳ್ಳುವ ದಿನಾಂಕ

ಕರ್ನಾಟಕ ಮೂರನೇ ಹಂತದ ಲೋಕಸಭಾ ಚುನಾವಣೆ-2024 ರ ಕಾರ್ಯಕ್ರಮಗಳ ಕ್ಯಾಲೆಂಡರ್

ಕ್ರಮ ಸಂಖ್ಯೆದಿನಾಂಕಕಾರ್ಯಕ್ರಮಗಳು
116/03/2024ಚುನಾವಣೆ ನೀತಿ ಸಂಹಿತೆ
212/04/2024ನಾಮನಿರ್ದೇಶನಗಳ ಪ್ರಾರಂಭಿಕ ದಿನಾಂಕ
319/04/2024ನಾಮನಿರ್ದೇಶನಗಳ ಕೊನೆಯ ದಿನಾಂಕ
420/04/2024ನಾಮನಿರ್ದೇಶನಗಳ ಪರಿಶೀಲನೆ
522/04/2024ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ
607/05/2024ಮತದಾನ ದಿನಾಂಕ
704/06/2024ಮತಎಣಿಕೆ
806/06/2024ಚುನಾವಣಾ ಪೂರ್ಣಗೊಳ್ಳುವ ದಿನಾಂಕ

More articles

Latest article