ಲೋಕಸಭಾ ಚುನಾವಣೆ -2024 ಫಲಿತಾಂಶ : ಕರ್ನಾಟಕದಲ್ಲಿ ಗೆದ್ದವರು ಯಾರು? ಸೋತವರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ

Most read

ಜೂನ್‌ 4, ಮಂಗಳವಾರ ಲೋಕಸಭಾ ಚುನಾವಣೆ 2024ರ ಮತ ಎಣಿಕೆ ನಡೆದಿದೆ. ಈ ಫಲಿತಾಂಶಕ್ಕಾಗಿ ಇಡೀ ದೇಶವೇ ಎದುರು ನೋಡುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಫಲ ಕೊಟ್ಟಿದೆಯಾ? ಇಂಡಿಯಾ ಕೂಟವು ಬಹುಮತ ಸಾಧಿಸುತ್ತದೆಯೇ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಲ್ಲಿ, 9 ಕ್ಷೇತ್ರಗಳನ್ನು ಕಾಂಗ್ರೆಸ್‌ ವಶಪಡಿಸಿಕೊಂಡರೆ. ಉಳಿದ 17 ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಇನ್ನು 2 ಕ್ಷೇತ್ರವನ್ನು ಜೆಡಿಎಸ್‌ ಜಯಭೇರಿ ಬಾರಿಸಿದೆ.

2019ರ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ಗೆಲ್ಲುವ ಮೂಲಕ ಕಾಂಗ್ರೆಸ್‌‌ ಗೆದ್ದ ಏಕೈಕ ಕ್ಷೇತ್ರ ಎನ್ನಿಸಿಕೊಂಡಿತ್ತು. ಆದರೆ ಈಗ ಬಿಜೆಪಿ ಈ ಕ್ಷೇತ್ರವನ್ನು ತನ್ನ ವಶಕ್ಕೆ ಪಡೆದಿದೆ. ಇನ್ನು ಜೆಡಿಎಸ್‌ ಕೂಡ ಕಳೆದ ಚುನಾವಣೆಯಲ್ಲಿ ಹಾಸನ ಕ್ಷೇತ್ರ ಮಾತ್ರ ಗೆದ್ದಿತ್ತು, ಆದರೆ ಈ ಕ್ಷೇತ್ರವನ್ನು ಈಗ ಕಾಂಗ್ರೆಸ್‌ ವಶಕ್ಕೆ ಪಡೆದಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಿಕೆ ಸುರೇಶ್ ಎದುರು ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್‌ ಗೆದ್ದರೆ. ಹಾಸನ ಕ್ಷೇತ್ರದಿಂದ ಪ್ರಜ್ವಲ್‌ ರೇವಣ್ಣ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಾಟೀಲ್‌ ಜಯಿಸಿದ್ದಾರೆ.

  ಲೋಕಸಭಾ ಕ್ಷೇತ್ರ   ಕಾಂಗ್ರೆಸ್‌ ಅಭ್ಯರ್ಥಿ ಬಿಜೆಪಿ ಅಭ್ಯರ್ಥಿ ಜೆಡಿಎಸ್‌ ಅಭ್ಯರ್ಥಿ ಗೆದ್ದವರು 2024
ಚಿತ್ರದುರ್ಗಬಿಎನ್ ಚಂದ್ರಪ್ಪ (ಎಸ್‌ ಸಿ)ಗೋವಿಂದ್‌ ಗಾರಜೋಳ (ಎಸ್‌ ಸಿ) ಗೋವಿಂದ್‌ ಗಾರಜೋಳ
ಉಡುಪಿ-ಚಿಕ್ಕಮಗಳೂರುಜಯಪ್ರಕಾಶ್ ಹೆಗ್ಡೆ (- ಬಂಟ್ಸ್)ಕೋಟಾ ಶ್ರೀನಿವಾಸ ಪೂಜಾರಿ (ಬಿಲ್ಲವ) ಕೋಟಾ ಶ್ರೀನಿವಾಸ ಪೂಜಾರಿ
ದಕ್ಷಿಣ ಕನ್ನಡಪದ್ಮರಾಜ್ (ಬಿಲ್ಲವ)ಕ್ಯಾಪ್ಟನ್ ಬ್ರಿಜೇಶ್ ಚೌಟಾ (ಬಂಟ್ಸ್) ಕ್ಯಾಪ್ಟನ್ ಬ್ರಿಜೇಶ್ ಚೌಟಾ
ಹಾಸನಎಂ. ಶ್ರೇಯಸ್ ಪಟೇಲ್ (ಒಕ್ಕಲಿಗ)   ಪ್ರಜ್ವಲ್‌ ರೇವಣ್ಣಎಂ. ಶ್ರೇಯಸ್ ಪಟೇಲ್
ತುಮಕೂರುಎಸ್.ಪಿ ಮುದ್ದಹನುಮೇಗೌಡ (ಒಕ್ಕಲಿಗ)ವಿ. ಸೋಮಣ್ಣ (ಲಿಂಗಾಯತ) ವಿ. ಸೋಮಣ್ಣ
ಚಿಕ್ಕಬಳ್ಳಾಪುರರಕ್ಷಾ ರಾಮಯ್ಯ (ನಾಯ್ಡು)ಡಾ.ಕೆ ಸುಧಾಕರ್‌ (ಒಕ್ಕಲಿಗ) ಡಾ.ಕೆ ಸುಧಾಕರ್‌  
ಕೋಲಾರಕೆವಿ ಗೌತಮ್‌ (ಎಸ್‌ ಸಿ)ಮಲ್ಲೇಶ್‌ ಬಾಬುಮಲ್ಲೇಶ್‌ ಬಾಬು
ಮಂಡ್ಯವೆಂಕಟರಾಮೇಗೌಡ (ಸ್ಟಾರ್ ಚಂದ್ರು ) (ಒಕ್ಕಲಿಗ)ಹೆಚ್.ಡಿ ಕುಮಾರಸ್ವಾಮಿಹೆಚ್.ಡಿ ಕುಮಾರಸ್ವಾಮಿ
ಮೈಸೂರು-ಕೊಡಗುಎಂ. ಲಕ್ಷ್ಮಣ್ (ಒಕ್ಕಲಿಗ)ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (ಕ್ಷತ್ರಿಯ ) ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
ಚಾಮರಾಜನಗರಸುನೀಲ್‌ ಬೋಸ್‌ (ಎಸ್‌ ಸಿ)ಎಸ್. ಬಾಲರಾಜ್ (ಎಸ್‌ ಸಿ) ಸುನೀಲ್‌ ಬೋಸ್‌
ಬೆಂಗಳೂರು ಗ್ರಾಮಾಂತರಡಿ.ಕೆ.ಸುರೇಶ್ (ಒಕ್ಕಲಿಗ)ಡಾ. ಸಿ.ಎನ್. ಮಂಜುನಾಥ್ (ಒಕ್ಕಲಿಗ) ಡಾ. ಸಿ.ಎನ್. ಮಂಜುನಾಥ್
ಬೆಂಗಳೂರು ದಕ್ಷಿಣಸೌಮ್ಯ ರೆಡ್ಡಿ (ರೆಡ್ಡಿ)ತೇಜಸ್ವಿ ಸೂರ್ಯ (ಬ್ರಾಹ್ಮಣ) ತೇಜಸ್ವಿ ಸೂರ್ಯ
ಬೆಂಗಳೂರು ಉತ್ತರಪ್ರೊ.‌ರಾಜೀವ್ ಗೌಡ (ಒಕ್ಕಲಿಗ)ಶೋಭಾ ಕರಂದ್ಲಾಜೆ (ಒಕ್ಕಲಿಗ) ಶೋಭಾ ಕರಂದ್ಲಾಜೆ
ಬೆಂಗಳೂರು ಕೇಂದ್ರಮನ್ಸೂರ್ ಖಾನ್ (ಮುಸ್ಲಿಂ)ಪಿ.ಸಿ. ಮೋಹನ್ (ಒಕ್ಕಲಿಗ – ಬಲಿಜ ) ಪಿ.ಸಿ. ಮೋಹನ್

 

ಬೆಳಗಾವಿಮೃಣಾಲ್ ಹೆಬ್ಬಾಳಕರ್ (ವೀರಶೈವ ಲಿಂಗಾಯತ)ಜಗದೀಶ್‌ ಶೆಟ್ಟರ್‌ (ಲಿಂಗಾಯತ)ಜಗದೀಶ್‌ ಶೆಟ್ಟರ್‌  
ಬಳ್ಳಾರಿತುಕಾರಾಂ (ಎಸ್‌ ಟಿ)ಬಿ. ಶ್ರೀರಾಮುಲು (ಪರಿಶಿಷ್ಟ ಪಂಗಡ –  ವಾಲ್ಮೀಕಿ)ತುಕಾರಾಂ
ಚಿಕ್ಕೋಡಿಪ್ರಿಯಾಂಕ ಜಾರಕಿಹೊಳಿ (ಎಸ್ ಟಿ)ಅಣ್ಣಾಸಾಹೇಬ್ ಶಂಕರ್ ಜೊಲ್ಲೆ (ಲಿಂಗಾಯತ)ಪ್ರಿಯಾಂಕ ಜಾರಕಿಹೊಳಿ
ಹಾವೇರಿ-ಗದಗಆನಂದ ಸ್ವಾಮಿ ಗೌಡದೇವರಮಠ ((ಲಿಂಗಾಯತ))ಬಸವರಾಜ್ ಬೊಮ್ಮಾಯಿ (ಲಿಂಗಾಯತ)ಬಸವರಾಜ್ ಬೊಮ್ಮಾಯಿ
ಕಲಬುರಗಿಡಾ. ರಾಧಾಕೃಷ್ಣ ದೊಡ್ಡಮನಿ (ಪರಿಶಿಷ್ಟ ಜಾತಿ)ಡಾ. ಉಮೇಶ್ ಜಿ. ಜಾಧವ್ (ಬಂಜಾರ)ಡಾ. ರಾಧಾಕೃಷ್ಣ ದೊಡ್ಡಮನಿ
ಬೀದರ್​ಸಾಗರ್ ಖಂಡ್ರೆ (ವೀರಶೈವ ಲಿಂಗಾಯತ)ಭಗವಂತ್ ಖೂಬಾ (ಲಿಂಗಾಯತ)ಸಾಗರ್ ಖಂಡ್ರೆ
ಹುಬ್ಬಳಿ – ಧಾರವಾಡವಿನೋದ್ ಅಸೂಟಿ (ಕುರುಬ)ಪ್ರಹ್ಲಾದ್ ಜೋಶಿ (ಬ್ರಾಹ್ಮಣ)ಪ್ರಹ್ಲಾದ್ ಜೋಶಿ
ಕೊಪ್ಪಳರಾಜಶೇಖರ್ ಹಿಟ್ನಾಳ್ (ಕುರುಬ)ಡಾ. ಬಸವರಾಜ್ ಕವಟೂರು (ಲಿಂಗಾಯತ –  ಪಂಚಮಶಾಲಿ)ರಾಜಶೇಖರ್ ಹಿಟ್ನಾಳ್
ರಾಯಚೂರುಕುಮಾರ್ ನಾಯ್ಕ್ (ಎಸ್‌ ಟಿ)ರಾಜಾ ಅಮರೇಶ್ವರ ನಾಯಕ (ಎಸ್‌ ಟಿ)ಕುಮಾರ್ ನಾಯ್ಕ್
ಉತ್ತರ ಕನ್ನಡಅಂಜಲಿ‌ ನಿಂಬಾಳ್ಕರ್ (ಮರಾಠ)ವಿಶ್ವೇಶ್ವರ ಹೆಗಡೆ ಕಾಗೇರಿ (ಬ್ರಾಹ್ಮಣ)ವಿಶ್ವೇಶ್ವರ ಹೆಗಡೆ ಕಾಗೇರಿ  
ದಾವಣಗೆರೆಪ್ರಭಾವತಿ ಮಲ್ಲಿಕಾರ್ಜುನ್ (ವೀರಶೈವ ಲಿಂಗಾಯತ)ಗಾಯತ್ರಿ ಸಿದ್ದೇಶ್ವರ (ಲಿಂಗಾಯತ)ಪ್ರಭಾವತಿ ಮಲ್ಲಿಕಾರ್ಜುನ್
ಶಿವಮೊಗ್ಗಗೀತಾ ಶಿವರಾಜಕುಮಾರ್ (ಈಡಿಗ)ಬಿ.ವೈ. ರಾಘವೇಂದ್ರ (ಲಿಂಗಾಯತ)ಬಿ.ವೈ. ರಾಘವೇಂದ್ರ
ಬಾಗಲಕೋಟೆಸಂಯುಕ್ತ ಪಾಟೀಲ್ (ವೀರಶೈವ ಲಿಂಗಾಯತ)ಪಿಸಿ ಗದ್ದಿಗೌಡರ್ (ಲಿಂಗಾಯತ ಗಾಣಿಗ)ಪಿಸಿ ಗದ್ದಿಗೌಡರ್
ವಿಜಯಪುರಎಚ್‌ಆರ್‌ ರಾಜು  ಆಲಗೂರ (ಎಸ್‌ ಸಿ)ರಮೇಶ್ ಜಿಗಜಿಣಗಿ (ಎಸ್‌ ಸಿ)ರಮೇಶ್ ಜಿಗಜಿಣಗಿ

More articles

Latest article