ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಲೋಕಸಭೆಯ ಚುನಾವಣೆ ಏಳು ಹಂತಗಳಲ್ಲಿ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ಸಾರ್ವತ್ರಿಕ ಲೋಕಸಭಾ ಚುನಾವಣೆ ಜೊತೆಗೆ ಏಕಕಾಲದಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಎಂಬ ನಾಲ್ಕು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
ವಿವರವಾದ ವೇಳಾಪಟ್ಟಿ ಇಲ್ಲಿದೆ
ಹಂತಗಳು | ಮತದಾನದ ದಿನಾಂಕ | ರಾಜ್ಯಗಳು |
ಹಂತ 1 | ಏಪ್ರಿಲ್ 19 | 21 |
ಹಂತ 2 | ಏಪ್ರಿಲ್ 26 | 13 |
ಹಂತ 3 | ಮೇ 7 | 12 |
ಹಂತ 4 | ಮೇ 13 | 10 |
ಹಂತ 5 | ಮೇ 20 | 8 |
ಹಂತ 6 | ಮೇ 25 | 7 |
ಹಂತ 7 | ಜೂನ್ 1 | 8 |
ಹಂತ 1
ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಲೋಕಸಭೆ ಚುನಾವಣೆ 2024 ರ ಹಂತ 1 ರ ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ | ಮಾರ್ಚ್ 20 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | ಮಾರ್ಚ್ 27 |
ನಾಮನಿರ್ದೇಶನಗಳ ಪರಿಶೀಲನೆ | ಮಾರ್ಚ್ 28 |
ಮತದಾನದ ದಿನಾಂಕ | ಏಪ್ರಿಲ್ 19 |
ಫಲಿತಾಂಶ | ಜೂನ್ 4 |
ಹಂತ 2
ಎರಡನೇ ಹಂತದ ಮತದಾನ ಏಪ್ರಿಲ್ 26 ರಂದು ನಡೆಯಲಿದ್ದು, 13 ರಾಜ್ಯಗಳ 89 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
2024 ರ ಲೋಕಸಭಾ ಚುನಾವಣೆಯ 2 ನೇ ಹಂತದ ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ | ಮಾರ್ಚ್ 28 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | ಏಪ್ರಿಲ್ 4 |
ನಾಮನಿರ್ದೇಶನಗಳ ಪರಿಶೀಲನೆ | ಏಪ್ರಿಲ್ 5 |
ಮತದಾನದ ದಿನಾಂಕ | ಏಪ್ರಿಲ್ 26 |
ಫಲಿತಾಂಶ | ಜೂನ್ 4 |
ಹಂತ 3
ಮೂರನೇ ಹಂತದ ಮತದಾನ ಮೇ 7 ರಂದು ನಡೆಯಲಿದ್ದು, 12 ರಾಜ್ಯಗಳ 94 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
2024 ರ ಲೋಕಸಭಾ ಚುನಾವಣೆಯ 3 ನೇ ಹಂತದ ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ | ಏಪ್ರಿಲ್ 12 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | ಏಪ್ರಿಲ್ 19 |
ನಾಮನಿರ್ದೇಶನಗಳ ಪರಿಶೀಲನೆ | ಏಪ್ರಿಲ್ 20 |
ಮತದಾನದ ದಿನಾಂಕ | ಮೇ 7 |
ಫಲಿತಾಂಶ | ಜೂನ್ 4 |
ಹಂತ 4
ಮೇ 13 ರಂದು ನಾಲ್ಕನೇ ಹಂತದ ಮತದಾನ ನಡೆಯಲಿದ್ದು, 10 ರಾಜ್ಯಗಳ 96 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
2024 ರ ಲೋಕಸಭಾ ಚುನಾವಣೆಯ 4 ನೇ ಹಂತದ ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ | ಏಪ್ರಿಲ್ 18 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | ಏಪ್ರಿಲ್ 25 |
ನಾಮನಿರ್ದೇಶನಗಳ ಪರಿಶೀಲನೆ | ಏಪ್ರಿಲ್ 26 |
ಮತದಾನದ ದಿನಾಂಕ | ಮೇ 13 |
ಫಲಿತಾಂಶ | ಜೂನ್ 4 |
ಹಂತ 5
ಮೇ 20 ರಂದು ಐದನೇ ಹಂತದ ಮತದಾನ ನಡೆಯಲಿದ್ದು, ಎಂಟು ರಾಜ್ಯಗಳ 49 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
2024 ರ ಲೋಕಸಭಾ ಚುನಾವಣೆಯ 5 ನೇ ಹಂತದ ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ | ಏಪ್ರಿಲ್ 26 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | ಮೇ 3 |
ನಾಮನಿರ್ದೇಶನಗಳ ಪರಿಶೀಲನೆ | ಮೇ 4 |
ಮತದಾನದ ದಿನಾಂಕ | ಮೇ 20 |
ಫಲಿತಾಂಶ | ಜೂನ್ 4 |
ಹಂತ 6
ಮೇ 25 ರಂದು ಆರನೇ ಹಂತದ ಮತದಾನ ನಡೆಯಲಿದ್ದು, ಏಳು ರಾಜ್ಯಗಳ 57 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
2024 ರ ಲೋಕಸಭಾ ಚುನಾವಣೆಯ 6 ನೇ ಹಂತದ ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ | ಏಪ್ರಿಲ್ 29 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | ಮೇ 6 |
ನಾಮನಿರ್ದೇಶನಗಳ ಪರಿಶೀಲನೆ | ಮೇ 7 |
ಮತದಾನದ ದಿನಾಂಕ | ಮೇ 25 |
ಫಲಿತಾಂಶ | ಜೂನ್ 4 |
ಹಂತ 7
ಏಳನೇ ಹಂತದ ಮತದಾನ ಜೂನ್ 1 ರಂದು ನಡೆಯಲಿದ್ದು, ಎಂಟು ರಾಜ್ಯಗಳ 57 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
2024 ರ ಲೋಕಸಭಾ ಚುನಾವಣೆಯ 7 ನೇ ಹಂತದ ಪ್ರಮುಖ ದಿನಾಂಕಗಳು
ಅಧಿಸೂಚನೆಯ ದಿನಾಂಕ | ಮೇ 7 |
ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕ | ಮೇ 14 |
ನಾಮನಿರ್ದೇಶನಗಳ ಪರಿಶೀಲನೆ | ಮೇ 15 |
ಮತದಾನದ ದಿನಾಂಕ | ಜೂನ್ 1 |
ಫಲಿತಾಂಶ | ಜೂನ್ 4 |
ಲೋಕಸಭೆ ಚುನಾವಣೆ 2024 ರ ರಾಜ್ಯವಾರು ವೇಳಾಪಟ್ಟಿ
ಹಂತ | ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು | ಕ್ಷೇತ್ರಗಳು |
ಏಪ್ರಿಲ್ 19 | ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ , ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಪುದುಚೇರಿ | 102 |
ಏಪ್ರಿಲ್ 26 | ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ | 89 |
ಮೇ 7 | ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಗೋವಾ , ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು, ಜಮ್ಮು ಮತ್ತು ಕಾಶ್ಮೀರ | 94 |
ಮೇ 13 | ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ | 96 |
ಮೇ 20 | ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್ | 49 |
ಮೇ 25 | ಬಿಹಾರ, ಹರಿಯಾಣ, ಜಾರ್ಖಂಡ್, ಒಡಿಶಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ | 57 |
ಜೂನ್ 1 | ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ಒಡಿಶಾ, ಪಂಜಾಬ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಚಂಡೀಗಢ | 57 |