ಲೋಕಸಭಾ ಅಧಿವೇಶನ; ಪ್ರತಿಪಕ್ಷಗಳ ಸಭಾತ್ಯಾಗ

Most read

ನವದೆಹಲಿ: ಉತ್ತರಪ್ರದೇಶದ ಸಂಭಲ್ ನಲ್ಲಿ ನಡೆದ ಹಿಂಸಾಚಾರ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷಗಳು ಇಂದು ಲೋಕಸಭೆಯಲ್ಲಿ ಸಭಾತ್ಯಾಗ ನಡೆಸಿದವು. ಲೋಕಸಭಾ ಅಧಿವೇಶನ ಆರಂಭವಾಗುತ್ತಿದ್ದಂತೆ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಸಂಭಲ್ ಹಿಂಸಾಚಾರ ಕುರಿತು ಚರ್ಚಿಸಲು ಅನುಮತಿ ಕೋರಿ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಸಲ್ಲಿಸಿದರು.

ಹಿಂಸಾಚಾರದಲ್ಲಿ ಐವರು ಅಸುನೀಗಿದ್ದು, ಇದು ಅತ್ಯಂತ ಗಂಬೀರವಾದ ವಿಷಯವಾಗಿದೆ. ಆದ್ದರಿಂದ ಚರ್ಚೆಗೆ ಅವಕಾಶ ನೀಡಬೇಕು ಎಂದು ಆಗ್ರಹಪಡಿಸಿದರು. ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಸ್ಪೀಕರ್ ಸಲಹೆ ನೀಡಿದರು. ಇದರಿಂದ ಕೆರಳಿದ ಅಖಿಲೇಶ್ ಯಾದವ್ ತಮ್ಮ ಪಕ್ಷದ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು. ಸಮಾಜವಾದಿ ಪಕ್ಷವನ್ನು ಬೆಂಬಲಿಸಿ ರಾಹುಲ್ ಗಾಂಧಿ ಅವರೂ ಕಾಂಗ್ರೆಸ್ ಸದಸ್ಯರೊಂದಿಗೆ ಸಭಾತ್ಯಾಗ ಮಾಡಿದರು. ಕಾಂಗ್ರೆಸ್, ಎನ್ ಸಿಪಿ, ಡಿಎಂಕೆ, ಶಿವಸೇನಾ ಸದಸ್ಯರು ಯಾದವ್ ಅವರಿಗೆ ಬೆಂಬಲ ಸೂಚಿಸಿ ಸಭಾತ್ಯಾಗ ಮಾಡಿ ಎಸ್ ಪಿಗೆ ಬೆಂಬಲ ಸೂಚಿಸಿದರು.

More articles

Latest article