ಮತಾಂತರವಾಗಿದ್ದಕ್ಕೆ ಬದುಕಿದೆ.. ಇಲ್ಲಂದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ : ಖಿನ್ನತೆಯ ದಿನಗಳನ್ನು ನೆನೆದ ನಟಿ ಮೋಹಿನಿ

ನಟಿ ಮೋಹಿನಿ ಯಾರಿಗೆ ಗೊತ್ತಿಲ್ಲ ಹೇಳಿ. ರವಿಚಂದ್ರನ್ ಜೊತೆಗೆ ಶ್ರೀರಾಮಚಂದ್ರ ಸಿನಿಮಾದಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದವರು. 1992ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ನಟಿ ಮೋಹಿನಿ, ಮೊದಲಿಗೆ ರಾಘವೇಂದ್ರ ರಾಜ್‍ಕುಮಾರ್ ಅವರ ಕಲ್ಯಾಣ ಮಂಟಪ ಸಿನಿಮಾ ಮಾಡಿದರು‌. ಬ್ಯಾಕ್ ಟು ಬ್ಯಾಕ್ ಕನ್ನಡ ಸಿನಿಮಾಗಳಲ್ಲಿ ಮಿಂಚಿದವರು.

ನಟಿ ಮೋಹಿನಿ ಮೂಲತಃ ತಮಿಳಿನವರು. ಆದರೆ ಅವರನ್ನು ನೋಡಿದಾಗ ಅಪ್ಪಟ ಕನ್ನಡ ಹುಡುಗಿ ಎಂಬಂತ ಫೀಲ್ ಬರುತ್ತಿತ್ತು. ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದಾರೆ. 2011ರಲ್ಲಿ ಮಲಯಾಳಂನ ಕಲೆಕ್ಟರ್ ಚಿತ್ರವೇ ಅವರ ಕಡೆಯ ಚಿತ್ರ. ಅದಾದ ಮೇಲೆ ಚಿತ್ರರಂಗಕ್ಕೆ ಅವರು ಮರಳಲೇ ಇಲ್ಲ. ಅಭಿಮಾನಿಗಳು ಸಹ ಸಾಕಷ್ಟು ಮಿಸ್ ಮಾಡಿಕೊಂಡರು.

ಆದರೆ ಮೋಹಿನಿ 2006ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತಗೊಳ್ಳುವ ಮೂಲಕ ಮೋಹಿನಿ ಕ್ರಿಸ್ಟಿನಾ ಆದರು. ಇದು ಎಲ್ಲರಿಗೂ ಶಾಕ್ ನೀಡಿತ್ತು. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಈ ಬಗ್ಗೆ ಇತ್ತಿಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ನಾನು ಮತಾಂತರವಾಗಿರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಕೆಲವೊಮ್ಮೆ ನಾನೇಕೆ ಬದುಕಬೇಕು..? ಈ ಜೀವನ ಯಾಕೆ ಬೇಕು..? ಎಂಬ ಆಲೋಚನೆ ಬರುತ್ತಾ ಇತ್ತು. ಕೆಟ್ಟ ಕೆಟ್ಟ ಕನಸುಗಳು ಬರಲು ಆರಂಭಿಸಿದವು. ನಿದ್ದೆಯೂ ಹಾಳಾಗುತ್ತಾ ಹೋಯಿತು. ಆರೋಗ್ಯದಲ್ಲೂ ಕೊಂಚ ಇಳಿಕೆ ಕಾಣುತ್ತಾ ಬಂತು. ಮನಸ್ಸು ಮೊದಲಿನಂತೆ ಇರಲಿಲ್ಲ. ಆದರೆ ವೈದ್ಯರ ಬಳಿ ಹೋದಾಗ ಎಲ್ಲವೂ ಸರಿ ಇದೆ ಎಂದೆ ವರದಿ ಬಂತು. ನನಗೆ ಏನಾಗ್ತಿದೆ ಎಂದು ಅರಿಯುವ ಸಲುವಾಗಿಯೇ ಒಬ್ಬ ಶಿವಾಚಾರ್ಯರನ್ನು ಭೇಟಿಯಾದೆ. ಬದುಕಿನಲ್ಲಿನ ಏರಿಳಿತಗಳ ಬಗ್ಗೆ ಅವರ ಬಳಿ ಚರ್ಚೆ ಮಾಡಿದೆ. ಜ್ಯೋತಿಷ, ಜಾತಕ, ಕಾಲ, ಕರ್ಮ ಎಲ್ಲವನ್ನು ಮೀರಿದ ದೇವರು ಯಾರು ಎಂದು ಹುಡುಕ ತೊಡಗಿದೆ. ಆಗ ಯೇಸು ಕ್ರಿಸ್ತನು ನನ್ನ ಕನಸ್ಸಲ್ಲಿ ಬಂದನು. ಆ ನಂತರದ ದಿನಗಳಲ್ಲಿ ಕೆಟ್ಟ ಕನಸುಗಳು ನಿಧಾನಕ್ಕೆ ಕಡಿಮೆಯಾಯಿತು. ಆತ್ಮಹತ್ಯೆಯ ಆಲೋಚನೆ ನಿಂತಿತ್ತು. ನಿರಾಂತಕವಾಗ ತೊಡಗಿದೆ, ಸಮಾಧಾನವಾದೆ. ಅನೇಕ ಬಾರಿ ನನ್ನನ್ನು ಏಸು ಕ್ರಿಸ್ತನೇ ರಕ್ಷಿಸಿದ್ದಾನೆ.

ಒಮ್ಮೆ ನನ್ನ ಕೈಯನ್ನೇ ನಾನು ಕೊಯ್ದುಕೊಂಡಿದ್ದೆ. ಕೊಕಾ ಕೊಲಾಗೆ ಇಲಿ ವಿಷ ಹಾಕಿ ಕುಡಿದಿದ್ದೆ. ದೇಹಕ್ಕೆ ಏನಾದರೂ ಆಗುತ್ತಾ ಅಂತ ನಾನು ಕಾಯ್ತಾ ಇದ್ದೆ. ಆದರೆ ಏನು ಆಗಲಿಲ್ಲ. ಇನ್ನೊಂದು ಬಾರಿ 136 ನಿದ್ರೆ ಮಾತ್ರೆಗಳನ್ನ ನುಂಗಿದ್ದೆ. ಆಗೆಲ್ಲಾ ಕಾಪಾಡಿದ್ದು ಯೇಸು ಕ್ರಿಸ್ತ ಎಂದಿದ್ದಾರೆ.

More articles

Latest article

Most read