ಯುದ್ದ ಕಾರ್ಯಾಚರಣೆಗಳ ಲೈವ್‌ ಪ್ರಸಾರ ಮಾಡುವಂತಿಲ್ಲ: ರಕ್ಷಣಾ ಇಲಾಖೆ ಕಟ್ಟಪ್ಪಣೆ

Most read

ಭಾರತ ಮತ್ತು ಪಾಕಿಸ್ಥಾನದ ನಡುವೆ ಯುದ್ದ ಕಾರ್ಯಾಚರಣೆ ನಡೆಯುತ್ತಿರುವ ಸದ್ಯದ ಭದ್ರತಾ ಸಂಘರ್ಷವನ್ನು ಮನಗಂಡು ಭಾರತ ಸರ್ಕಾರದ ರಕ್ಷಣಾ ಸಚಿವಾಲಯವೂ ಬಹುಮುಖ್ಯ ಆದೇಶವನ್ನು ಹೊರಡಿಸಿ, ಯಾವುದೇ ಮಾಧ್ಯಮವು ಯುದ್ದ ಕಾರ್ಯಾಚರಣೆಗಳ ಲೈವ್‌ ವರದಿಯನ್ನು ಮಾಡಬಾರದು ಎಂದು ಸೂಚಸಿದೆ. ಕಾರ್ಗಿಲ್‌ ದಾಳಿ, ಕಂದಹಾರ್‌ ಅಪಹರಣದಂತಹ ಹಿಂದಿನ ಗಂಭೀರ ಘಟನೆಗಳ ಸಂದರ್ಭದಲ್ಲಿ ಉಂಟಾದ ದುಡುಕಿನ ವರದಿಗಳು ಅನಾಹುತಗಳಿಗೆ ಕಾರಣವಾಗಿತ್ತು. ಹೀಗಾಗಿ ಯಾವುದೇ ಮಾಧ್ಯಮ ಚಾನೆಲ್‌ ಗಳು, ಡಿಜಿಟಲ್‌ ಫ್ಲಾಟ್‌ ಫಾರ್ಮ್‌ ಗಳು ಮತ್ತು ಯಾರೇ ವ್ಯಕ್ತಿಗಳು, ದೇಶದಲ್ಲಿ ನಡೆವ ರಕ್ಷಣಾ ಕಾರ್ಯಾಚರಣೆಗಳು ಮತ್ತು ಭದ್ರತಾ ಪಡೆಗಳ ಚಲನವಲನಗಳ ನೇರ ಪ್ರಸಾರ ಅಥವಾ ನೈಜ ಸಮಯದ ವರದಿ ಮಾಡುವುದನ್ನು ತಡೆಹಿಡಿಯಲಾಗಿದೆ. ಅಂತಹ ಸೂಕ್ಷ್ಮ ಅಥವಾ ಮೂಲ-ಆಧಾರಿತ ಮಾಹಿತಿಯನ್ನು ಬಹಿರಂಗಪಡಿಸುವುದು ಕಾರ್ಯಾಚರಣೆಯ ಪರಿಣಾಮಕಾರಿತ್ವಕ್ಕೆ ತೊಂದರೆಯನ್ನುಂಟು ಮಾಡಬಹುದು ಮತ್ತು ಜನ ಜೀವಗಳಿಗೆ ಅಪಾಯವನ್ನುಂಟುಮಾಡಬಹುದು ಎನ್ನಲಾಗಿದೆ. ಕೇಬಲ್ ಟೆಲಿವಿಷನ್ ನೆಟ್ವರ್ಕ್ (ತಿದ್ದುಪಡಿ) ನಿಯಮಗಳು, 2021 ರ ಕಲಂ 6 (1) (ಪಿ) ಪ್ರಕಾರ, ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಸಮಯದಲ್ಲಿ ನಿಯೋಜಿತ ಅಧಿಕಾರಿಗಳು ಕಾಲ ಕಾಲಕ್ಕೆ ನೀಡುವ ವಿವರಣೆಗಳನ್ನು ಮಾತ್ರ ಪ್ರಕಟಿಸಲು ಸೂಚಿಸಲಾಗಿದೆ. ರಾಷ್ಟ್ರದ ಸೇವೆಯಲ್ಲಿ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯುವ ಮೂಲಕ ಜಾಗರೂಕತೆ, ಸೂಕ್ಷ್ಮತೆ ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ಎಲ್ಲಾ ಮಾಧ್ಯಮಗಳಿಗೆ ಸೂಚಿಸಲಾಗಿದೆ.

More articles

Latest article