ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಶೇ. 1% ಪ್ರತ್ಯೇಕ ಮೀಸಲಾತಿ ನೀಡಲು ಸಮಾನ ಮನಸ್ಕರ ಆಗ್ರಹ

Most read

ಬೆಂಗಳೂರು : ಬೆಂಗಳೂರಿನ ಶಾಸಕರ ಭವನದಲ್ಲಿ ಆಗಸ್ಟ್‌ 26, 2025, ಮಂಗಳವಾರದಂದು ಸಾಹಿತಿಗಳು ಚಿಂತಕರು, ಹೋರಾಟಗಾರರು, ಕಲಾವಿದರ ಹಾಗೂ ಸಮಾನಮನಸ್ಕರ ಸಭೆ ನಡೆಯಿತು.

ಕಳೆದ 30 ವರ್ಷಗಳಿಂದ ಒಳಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿದ್ದ ಹೋರಾಟಕ್ಕೆ ಕರ್ನಾಟಕ ಸರ್ಕಾರ ಜಸ್ಟೀಸ್‌ ನಾಗಮೋಹನ್‌ ದಾಸ್‌ ಆಯೋಗ ರಚಿಸಿ ಸಮೀಕ್ಷೆ ನಡೆಸಿತ್ತು. ಅದರಂತೆ ಅತ್ಯಂತ ಹಿಂದುಳಿದ 59 ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ A ಗುಂಪು ಎಂದು ವಿಂಗಡಿಸಿ ಶೇ. 1ರಷ್ಟು ಮೀಸಲಾತಿ ನೀಡಲು ಶಿಫಾರಸ್ಸು ಮಾಡಿತ್ತು.

ಕರ್ನಾಟಕ ಸರ್ಕಾರ ಜಸ್ಟೀಸ್‌ ನಾಗಮೋಹನ್‌ ದಾಸ್‌ ವರದಿಯ ಶಿಫಾರಸ್ಸನ್ನು ಬದಿಗೊತ್ತಿ ರಾಜಕೀಯ ತೀರ್ಮಾನ ಮಾಡಿ ಅಲೆಮಾರಿ ಸಮುದಾಯಗಳನ್ನು ಸ್ಪೃಶ್ಯ ಸಮುದಾಯಗಳ ಜೊತೆಗೆ ಸೇರಿಸಿ ಅಸ್ಪೃಶ್ಯ ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯದಿಂದ ವಂಚಿಸಲಾಗಿದೆ. ಇದರ ಕುರಿತು ಕರ್ನಾಟಕದ ಸಾಹಿತಿಗಳು, ಚಿಂತಕರು, ಹೋರಾಟಗಾರರು, ಕಲಾವಿದರು ಹಾಗೂ ಸಮಾನ ಮನಸ್ಕರರು ಸಭೆ ನಡೆಸಿ ಸರ್ಕಾರಕ್ಕೆ ಈ ಕೆಳಕಂಡ ಹಕ್ಕೊತ್ತಾಯಗಳನ್ನು ಮಂಡಿಸುತ್ತಿದೆ.

ನಿರ್ಣಯಗಳು:

  1. ಜಸ್ಟೀಸ್‌ ನಾಗಮೋಹನ್‌ ದಾಸ್‌ ಆಯೋಗದ ವರದಿಯ ಅನುಸಾರ ಅಸ್ಪೃಶ್ಯ ಅಲೆಮಾರಿಗಳಿಗೆ ಶೇ. 1% ಪ್ರತ್ಯೇಕ ಮೀಸಲಾತಿ ಯಥಾವತ್ತು ಜಾರಿಗೊಳಿಸಬೇಕೆಂದು ಸರ್ವಾನುಮತದಿಂದ ಒತ್ತಾಯಿಸುತ್ತೇವೆ. ತೆಲಂಗಾಣದ ಮಾದರಿಯಲ್ಲಿ ಮೀಸಲಾತಿ ಬಿಂದುವನ್ನು ಜಾರಿಗೊಳಿಸಲು ಈ ಸಭೆ ಸರ್ವಾನುಮತದಿಂದ ಒತ್ತಾಯಿಸುತ್ತದೆ.
  2. ಶೇ.‌1% ಹೊರತಾದ ಅಭಿವೃದ್ಧಿ ಕಾರ್ಯಕ್ರಮಗಳು ಸಹ ನಮ್ಮ ಹಕ್ಕು. ಹಾಗಾಗಿ ಅದನ್ನೂ ಸಹ ಅಸ್ಪೃಶ್ಯ ಅಲೆಮಾರಿ ಸಮುದಾಯ ಗಟ್ಟಿಯಾಗಿ ಒತ್ತಾಯಿಸುತ್ತದೆ.
  3. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ದಿ ನಿಗಮ ಅಲೆಮಾರಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ 49 ಸಮುದಾಯಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶ ಹೊರಡಿಸಬೇಕು. ಇತರೆ  ಸಮುದಾಯಗಳನ್ನು ಕೈಬಿಡಬೇಕು.

ಈ ಸಭೆಯ ಅಧ್ಯಕ್ಷತೆಯನ್ನು ಒಳಮೀಸಲಾತಿ ಹಿರಿಯ ಹೋರಾಟಗಾರರಾದ ಎಸ್‌ ಮಾರೆಪ್ಪ ವಹಿಸಿದ್ದರು.

ಸಭೆಯಲ್ಲಿ ಪ್ರೊ. ರಹಮತ್‌ ತರೀಕೆರೆ, ರಾಜಪ್ಪ ದಳವಾಯಿ, ಪ್ರೊ. ನಿರಂಜನರಾಧ್ಯ, ಶಿವಸುಂದರ್‌, ಡಾ. ವಾಸು ಹೆಚ್.‌ ವಿ, ಬಸವರಾಜ್‌ ಕೌತಾಳ್‌, ಅಂಬಣ್ಣ ಅರೋಲಿಕರ್‌, ಪ್ರೊ. ಎ. ಎಸ್‌. ಪ್ರಭಾಕರ್‌, ಡಾ. ಕೆ. ಷರೀಫಾ, ಬಹುಜನ ವೆಂಕಟೇಶ್‌, ದಾಸನೂರು ಕೂಸಣ್ಣ, ವಿನಯ್‌ ಶ್ರೀನಿವಾಸ್‌, ಮೈತ್ರೇಯಿ, ಡಾ. ಹುಲಿಕುಂಟೆ ಮೂರ್ತಿ, ಜಿ.ಬಿ ಪಾಟೀಲ್‌, ಪ್ರೊ. ಬಿ.ಸಿ. ಬಸವರಾಜ್‌, ಡಾ. ಟಿ. ಗೋವಿಂದರಾಜ್‌, ಪ್ರೊ. ಟಿ. ಯಲ್ಲಪ್ಪ, ದಯಾನಂದ, ಕೆಸ್ತಾರ ವಿ ಮೌರ್ಯ, ಡಿ. ಟಿ ವೆಂಕಟೇಶ್‌, ಶ್ರೀಪಾದ್‌ ಭಟ್‌, ಲೇಖಾ ಅಡವಿ, ನಾರಾಯಣ್ ಕ್ಯಾಸಂಬಳ್ಳಿ, ಪ್ರೊ. ನಾರಾಯಣಸ್ವಾಮಿ, ಕೆ.ವಿ ಭಟ್‌, ಕೆ. ಪಿ ಲಕ್ಷ್ಮಣ್‌, ವಿ.ಎಲ್‌ ನರಸಿಂಹಮೂರ್ತಿ, ಹೆಚ್.ಕೆ  ಶ್ವೇತಾರಾಣಿ, ಮುತ್ತುರಾಜು, ವಿಕಾಸ್‌ ಆರ್‌ ಮೌರ್ಯ, ಚಂದ್ರು ತರಹುಣಿಸೆ, ಅಶ್ವಿನಿ ಬೋದ್‌, ಭರತ್‌ ಡಿಂಗ್ರಿ, ಕೋಡಿಹಳ್ಳಿ ಚಂದ್ರು, ವೇಣುಗೋಪಾಲ್‌ ಮೌರ್ಯ, ಮಹೇಶ್‌, ಸರೋವರ್‌ ಬೆಂಕೀಕೆರೆ ಮತ್ತಿತರರು ಭಾಗವಹಿಸಿದ್ದರು.

More articles

Latest article