Monday, December 9, 2024

Wayanad ಲೋಕಸಭೆ : ಒಟ್ಟಾಗಿ ಉತ್ತಮ ಭವಿಷ್ಯವನ್ನು ನಿರ್ಮಿಸೋಣ : ಪ್ರಿಯಾಂಕ್‌ ಗಾಂಧಿ ಸಂದೇಶ

Most read

ವಯನಾಡ್‌ ಲೋಕಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯುತ್ತಿದ್ದು ಎಲ್ಲರೂ ದಯವಿಟ್ಟು ಮತ ಚಲಾಯಿಸುವಂತೆ ಮತ್ತು ಉತ್ತಮ ಭವಿಷ್ಯವನ್ನು ಒಟ್ಟಾಗಿ ನಿರ್ಮಿಸಲು ಕೈಜೋಡಿಸಿ ಎಂದು ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕ ಗಾಂಧಿ ವಾದ್ರ ಕೋರಿದ್ದಾರೆ.

“ನನ್ನ ಪ್ರೀತಿಯ ಸಹೋದರಿ ಮತ್ತು ಸಹೋದರರೇ, ದಯವಿಟ್ಟು ಇಂದು ಮತ ಚಲಾಯಿಸಿ, ಇದು ನಿಮ್ಮ ದಿನವಾಗಿದೆ, ನಿಮ್ಮ ಆಯ್ಕೆಯನ್ನು ಮಾಡಲು ಮತ್ತು ನಮ್ಮ ಸಂವಿಧಾನವು ನಿಮಗೆ ನೀಡಿದ ಮಹಾನ್ ಶಕ್ತಿಯನ್ನು ಚಲಾಯಿಸುವ ದಿನವಾಗಿದೆ. ನಾವು ಒಟ್ಟಾಗಿ ಉತ್ತಮ ಭವಿಷ್ಯವನ್ನು ನಿರ್ಮಿಸೋಣ” ಎಂದು ಎಕ್ಸ್ ಪೋಸ್ಟ್ ನಲ್ಲಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ಬುಧವಾರ ಬೆಳಗ್ಗೆ 7 ಗಂಟೆಗೆ ಉಪಚುನಾವಣೆಯ ಮತದಾನ ಆರಂಭವಾಗಿದೆ.

ವಯನಾಡ್ ಕ್ಷೇತ್ರವು ವಯನಾಡ್ ಜಿಲ್ಲೆಯ ಮಾನಂತವಾಡಿ , ಸುಲ್ತಾನ್ ಬತ್ತೇರಿ ಮತ್ತು ಕಲ್ಪೆಟ್ಟಾದ ಏಳು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.

More articles

Latest article