ಜೆಎನ್‌ಯು ಚುನಾವಣೆ: ಎಡ ವಿದ್ಯಾರ್ಥಿ ಸಂಘಟನೆಗಳಿಗೆ ಭರ್ಜರಿ ಗೆಲುವು, ಎಬಿವಿಪಿಗೆ ತೀವ್ರ ಮುಖಭಂಗ

Most read

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಒಕ್ಕೂಟದ ಚುನಾವಣೆಯ ಮತ ಎಣಿಕೆ ಕಾರ್ಯ ಮುಗಿದಿದ್ದು, ಎಡ ಸಂಘಟನೆಗಳ ಒಕ್ಕೂಟ ಮೇಲುಗೈ ಸಾಧಿಸಿದೆ. ಮತ್ತೆ ಆರ್‌ಎಸ್‌ಎಸ್‌ ಅಂಗಸಂಸ್ಥೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ತೀವ್ರ ಮುಖಭಂಗ ಎದುರಿಸಿದೆ.

ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇಂದು ನಡೆದ ಮತಏಣಿಕೆಯ ಆರಂಭದಲ್ಲಿ ಎಬಿವಿಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರೂ, ಮತಏಣಿಕೆ ಪ್ರಗತಿ ಸಾಧಿಸುತ್ತಿದ್ದಂತೆಯೇ ಎಡಪಂಥೀಯ ಅಭ್ಯರ್ಥಿಗಳು ಭಾರೀ ಮುನ್ನಡೆ ಗಳಿಸಿ ಭರ್ಜರಿ ಜಯ ಸಾಧಿಸಿದೆ.

4 ವರ್ಷಗಳ ಕೋವಿಡ್ ವಿರಾಮದ ನಂತರ ನಡೆದ ಚುನಾವಣೆಯಲ್ಲಿ, ಅಖಿಲ ಭಾರತ ವಿದ್ಯಾರ್ಥಿಗಳ ಸಂಘ (ಎಐಎಸ್‌ಎ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್‌ಎಫ್), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್‌ಎಫ್) ಒಳಗೊಂಡ ಯುನೈಟೆಡ್ ಲೆಫ್ಟ್ ಮೈತ್ರಿ ಆರ್‌ಎಸ್‌ಎಸ್-ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿರುದ್ಧ ಸ್ಪರ್ಧಿಸಿತ್ತು.

ಎಬಿವಿಪಿಯ ಅಧ್ಯಕ್ಷೀಯ ಅಭ್ಯರ್ಥಿ ಉಮೇಶ್ ಚಂದ್ರ 2,118 ಮತಗಳನ್ನು ಪಡೆದರೆ, ಎಡಪಕ್ಷ ಅಭ್ಯರ್ಥಿ ಧನಂಜಯ್ 3,100 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ. ಒಟ್ಟಿನಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಾಲ್ಕೂ ಸ್ಥಾನಗಳಲ್ಲಿಯೂ ಎಡ ವಿದ್ಯಾರ್ಥಿ ಸಂಘಟನೆಗಳೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ RSS ಅಂಗಸಂಸ್ಥೆ ಎಬಿವಿಪಿಗೆ ತೀವ್ರ ಮುಖಭಂಗವಾಗಿದೆ.

ಅಧ್ಯಕ್ಷರ ಸ್ಥಾನಕ್ಕೆ

ಧನಂಜಯ್ (ಎಡ)- 3,100

ಉಮೇಶ್ ಚಂದ್ರ ಅಜ್ಮೀರ (ಎಬಿವಿಪಿ)- 2,118

ಉಪಾಧ್ಯಕ್ಷ ಸ್ಥಾನಕ್ಕೆ

ಅವಿಜಿತ್ ಘೋಷ್ (ಎಡ)- 2,762

ದೀಪಿಕಾ ಶರ್ಮಾ (ಎಬಿವಿಪಿ)- 1,848

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ

ಅರ್ಜುನ್ ಆನಂದ್ (ಎಬಿವಿಪಿ) – 2,4,12

ಪ್ರಿಯಾಂಶಿ ಆರ್ಯ (BAPSA, ಎಡ ಬೆಂಬಲಿತ) – 3,440

ಜಂಟಿ ಕಾರ್ಯದರ್ಶಿ

ಗೋವಿಂದ್ ಡಾಂಗಿ (ABVP) – 2,591

ಮೊ ಸಾಜಿದ್ (ಎಡ) – 3,035

More articles

Latest article