ಅಡ್ಡಮತದಾನ ಚರ್ಚೆ ಬಿಟ್ಟು ದೇಶದ ಸಮಸ್ಯೆ ಗಳನ್ನು ಕುರಿತು ಚರ್ಚಿಸಿ; ಬಿಜೆಪಿಗೆ ಟಿಎಂಸಿ ಸವಾಲು

Most read

ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆಯಲ್ಲಿ 15 ಸದಸ್ಯರು ಅಡ್ಡ ಮತದಾನ ಮಾಡಿರುವುದರ ಚರ್ಚೆಯನ್ನು ಬಿಡಿ!  ಅಮೆರಿಕ ಭಾರತದ ಮೇಲೆ  ಶೇ. 50ರಷ್ಟು ಸುಂಕ ಹೇರಿರುವುದರ ಬಗ್ಗೆ, ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿ 862 ದಿನಗಳಾಗಿದ್ದರೂ ಪ್ರಧಾನಿ ಭೇಟಿ ನೀಡಿದ್ದರ ಬಗ್ಗೆ ಚಿಂತಿಸಿ ಎಂದು ತೃಣಮೂಲ ಕಾಂಗ್ರೆಸ್‌ನ ಲೋಕಸಭಾ ಸದಸ್ಯ ಡೆರೆಕ್ ಒಬ್ರಯಾನ್ ಕೇಂದ್ರ ಸರ್ಕಾರಕ್ಕೆ ತಪರಾಕಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಅವರು ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಲೋಕಸಭಾ ಉಪಾಧ್ಯಕ್ಷ ಸ್ಥಾನ ಭರ್ತಿ ಮಾಡದೆ 2,278 ದಿನಗಳಾಗಿವೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರಧಾನಿ ಉತ್ತರಿಸಿ 4,117 ದಿನಗಳು ಕಳೆದಿವೆ. ಇಂತಹ ವಿಷಯಗಳನ್ನು ಕುರಿತು ಚರ್ಚೆ ನಡೆಸಿ ಎಂದು ಸವಾಲು ಹಾಕಿದ್ದಾರೆ.

ಮೂರು ದಿನಗಳ ಹಿಂದೆ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ ಡಿಎ ಒಕ್ಕೂಟದ ರಾಧಾಕೃಷ್ಣನ್ ಅವರು ಆಯ್ಕೆಯಾಗಿದ್ದಾರೆ.ಅವರು 452 ಮತಗಳನ್ನು ಪಡೆದರೆ ಇಂಡಿಯಾ ಒಕ್ಕೂಟದ ಅಭ್ಯರ್ಥಿ ನಿವೃತ್ತ ನ್ಯಾಯಮೂರ್ತಿ ಸುದರ್ಶನ ರೆಡ್ಡಿ ಅವರು 300 ಮತಗಳನ್ನು ಪಡೆದಿದ್ದರು

More articles

Latest article