ಲಡಾಖ್‌ನಲ್ಲಿ ಸೇನಾ ಟ್ಯಾಂಕ್ ಅಪಘಾತ; ಐವರು ಯೋಧರು ನೀರುಪಾಲು

Most read

ಕೇಂದ್ರಾಡಳಿತ ಪ್ರದೇಶ ಲಡಾಖ್ನ ಎಲ್‌ಎಸಿ ಬಳಿ ಶನಿವಾರ ಸೇನಾ ಟ್ಯಾಂಕ್ ನಲ್ಲಿ ತೆರಳುತ್ತಿದ್ದ ಐವರು ನೀರುಪಾಲಾಗಿರುವ ಘಟನೆ ನಡೆದಿದೆ.

ಶನಿವಾರ ಮುಂಜಾನೆ ಲಡಾಖ್‌ನ ನ್ಯೋಮಾ-ಚುಶುಲ್ ಪ್ರದೇಶದ ಎಲ್‌ಎಸಿ ಬಳಿ T-72 ಟ್ಯಾಂಕ್ ನಲ್ಲಿ ನದಿಯೊಂದನ್ನು ದಾಟುತ್ತಿದ್ದಾಗ ಹಠಾತ್ ಪ್ರವಾಹ ಉಂಟಾಗಿದ್ದು, ಐವರು ಯೋಧರು ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಯುದ್ದ ಸಮಯ ಹಾಗೂ ತುರ್ತು ಸಮಯದಲ್ಲಿ ಟ್ಯಾಂಕ್ ನೊಂದಿಗೆ ನದಿಯನ್ನು ದಾಟುವು ಹೇಗೆ ಎಂದು ಅಭ್ಯಾಸ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ನದಿಯ ಆಳವಾದ ಭಾಗವನ್ನು ದಾಟುತ್ತಿದ್ದಾಗ ಟ್ಯಾಂಕರ್ ಸಿಲುಕಿಕೊಂಡಿತ್ತು. ಈ ವೇಳೆ ಏಕಾಏಕಿ ನೀರಿನ ಮಟ್ಟ ಏರಿಯಾಗಿ ಸೈನಿಕರು ಕೊಚ್ಚಿ ಹೋಗಿದ್ದಾರೆ ಎಂಧು ತಿಳಿದುಬಂದಿದೆ.

ಎಲ್ಲ ಐದು ಸೈನಿಕರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ ಎಂದು ಸೇನಾ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

More articles

Latest article