Sunday, September 8, 2024

ದಿನಕ್ಕೆ 14 ಗಂಟೆ ಕೆಲಸ ಕುರಿತು ಪ್ರಸ್ತಾವನೆ ಸಲ್ಲಿಕೆಯಾಗಿದೆ, ಇನ್ನೂ ತೀರ್ಮಾನ ಆಗಿಲ್ಲ : ಸಚಿವ ಸಂತೋಷ್ ಲಾಡ್

Most read

ಉದ್ಯೋಗಿಗಳ ಕೆಲಸದ ಅವಧಿಯನ್ನು 14 ಗಂಟೆಗಳಿಗೆ ವಿಸ್ತರಣೆ ಮಾಡುವಂತೆ ಕೋರಿ ಕರ್ನಾಟಕದಲ್ಲಿನ ಐಟಿ ಕಂಪೆನಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ ಆದರೆ ಇನ್ನು ತೀರ್ಮಾನ ಮಾಡಿಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿ ಖಾಸಗಿ ಕಂಪನಿಗಳ ಒತ್ತಡದಿಂದ ಮತ್ತೆ ಹಿಂದಕ್ಕೆ ಸರಿದ ಕರ್ನಾಟಕ ಸರ್ಕಾರ ವಿರುದ್ಧ ಈಗಾಗಲೇ ನಾಡಿನ ಜನರು ತೀರ್ವ ಆಕ್ರೋಶಗೊಂಡಿದ್ದಾರೆ. ಇದರ ನಡುವೆಯೇ ಖಾಸಗಿ ಕಂಪನಿಗಳು ಒತ್ತಾಯದ ಮೇಲೆ ಕೆಲಸದ ಅವರಧಿಯನ್ನು ವಿಸ್ತರಿಸುವ ಪ್ರಸ್ತಾಪ ಆಗಿದ್ದು ಈಗ ನಾಡಿನ ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.

ಈ ಕುರಿತು ಬೆಂಗಳೂರಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಕೆಲಸದ ಅವಧಿ ವಿಸ್ತರಣೆ ಕುರಿತು ಒಂದು ಕಂಪನಿಯಿಂದ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಐಟಿ ನೌಕರರ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಕೆಲ ನೌಕರರು ಪರವಿದ್ದ ಇನ್ನುಳಿದವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಕೆಲಸದ ಅವಧಿ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತದ ಕಾರ್ಮಿಕ ಕಾನೂನಿನ ಪ್ರಕಾರ, ಪ್ರತಿ ನಿತ್ಯ 9 ಗಂಟೆ ಕೆಲಸದ ಅವಧಿಗೆ ಅವಕಾಶ ನೀಡಲಾಗಿದೆ. ಜತೆಗೆ ಹೆಚ್ಚುವರಿಯಾಗಿ ಒಂದು ಗಂಟೆ ಓವರ್‌ಟೈಮ್ ಕೆಲಸಕ್ಕೆ ಅವಕಾಶವಿದೆ. ಆದರೆ ಐಟಿ ಕಂಪೆನಿಗಳ ಪ್ರಸ್ತಾವನೆ ಪ್ರಕಾರ, ನಿಗದಿತ ಕೆಲಸದ ವೇಳೆಯನ್ನು 12 ಗಂಟೆಗೆ ವಿಸ್ತರಿಸಿ, ಓವರ್ ಟೈಮ್ ಅನ್ನು 2 ಗಂಟೆ ಹೆಚ್ಚುವರಿ ಮಾಡಿ. ಒಟ್ಟು 14 ಗಂಟೆಗಳ ಕಾಲ ಕೆಲಸದ ಅವಧಿ ವಿಸ್ತರಣೆ ಮಾಡುವಂತೆ ಕೇಳಿದೆ.

More articles

Latest article