Saturday, July 27, 2024

KRS ಜಲಾಶಯದ ಹಿನ್ನೀರಿಗೆ ಕನ್ನ; ಅಕ್ರಮ ಪಂಪ್ ಸೆಟ್ ಅಳವಡಿಸಿ ಫಾರ್ಮ್​ಹೌಸ್ನಲ್ಲಿ ಬೆಳೆ!

Most read

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಜಲಾಶಯದ ಹಿನ್ನೀರಿಗೆ ಅಕ್ರಮವಾಗಿ ಪಂಪ್ ಸೆಟ್ ಅಳವಡಿಸಿ ನೀರು ಕದಿಯುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಡ್ಯಾಂನಲ್ಲಿ ನೀರಿಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಎದುರುಸುತ್ತಿರುವ ಇಂತಹ ಸಮಯದಲ್ಲಿ ಡ್ಯಾಂಗೆ ಪಂಪ್ ಸೆಟ್ ಅಳವಡಿಸಿ  ಫಾರ್ಮ್​ಹೌಸ್​ಗೆ ನೀರು ಪೂರೈಕೆ ಮಾಡಲಾಗುತ್ತಿದೆ.

ಹೌದು, ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಡ್ಯಾಂನ ಹಿನ್ನೀರಿಗೆ ಹೊಂದಿಕೊಂಡಿರುವ ಫಾರ್ಮ್ ಹೌಸ್ಗೆ ಡ್ಯಾಂ ನಿಂದ ಅಕ್ರವಾಗಿ ನೀರು ಪೂರೈಕೆ ಮಾಡಿಕೊಳ್ಳುತ್ತಿರುವ ಘಟನೆ ನಡೆದಿದೆ.  ಡ್ಯಾಂನ ಹಿನ್ನೀರಿಗೆ ಮೋಟಾರ್ ಅಳವಡಿಕೆ ಮಾಡಿ ಸುಮಾರು 200 ಮೀ. ಪೈಪ್ ಅಳವಡಿಸಿಕೊಂಡು ಜಲಾಯಶಯದ ನೀರನ್ನು ಫಾರ್ಮ್ ಹೌಸ್ಗೆ ಪೂರೈಕೆ ಮಾಡಿಕೊಳ್ಳುವ ಮೂಲಕ ನೀರಗೆ ಕನ್ನ ಹಾಕಲಾಗುತ್ತಿದೆ.

ಕುಡಿಯುವ ನೀರಿಗೆ ಸಮಸ್ಯೆ ಇದ್ದರೂ ಫಾರ್ಮ್​ಹೌಸ್​ಗೆ ಅಕ್ರಮವಾಗಿ ನೀರು ಪೂರೈಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂಬಂಧ ಮಾಹಿತಿ ನೀಡಿದರೂ ಅಧಿಕಾರಿಗಳು ಉಳ್ಳವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಸ್ವಲ್ಪ ದೂರದಲ್ಲೇ ಜಲಾಶಯ ಇರುವ ಹಿನ್ನೆಲೆ ಪ್ರಭಾವಿಗಳು ಜಲಾಶಯಕ್ಕೆ ಅಕ್ರಮವಾಗಿ ಮೋಟಾರ್ ಅಳವಡಿಸಿಕೊಂಡು ಫಾರ್ಮ್​ಹೌಸ್​ನಲ್ಲಿ ವಿವಿಧ ಬೆಳೆ ಬೆಳೆದಿದ್ದಾರೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಪ್ತಪಡಿಸಿದ್ದಾರೆ.

ಕೆಆರ್‌ಎಸ್ ನೀರನ್ನು ಕದಿಯುತ್ತಿರುವ ಬಗ್ಗೆ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಎಚ್ಚೆತ್ತ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಎಇ ಸುರೇಶ್ ಬಾಬು, ಎಇಇ ಕಿಶೋರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆಆರ್​ಎಸ್​​ ಹಿನ್ನೀರಿಗೆ ಅಳವಡಿಸಿದ್ದ ಮೋಟಾರ್​ಗಳನ್ನು ತೆರವು ಮಾಡಿದ್ದಾರೆ.

More articles

Latest article