ನನಗೆ KPCC  ಅಧ್ಯಕ್ಷ ಸ್ಥಾನ ಕೊಟ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಸಚಿವ ಕೆ.ಎನ್ ರಾಜಣ್ಣ

Most read

ರಾಜ್ಯದಲ್ಲಿ ಸರ್ಕಾರ ರಚನೆಯಾಗಿ ಒಂದು ವರ್ಷ ಕಳೆದರು ಹೆಚ್ಚುವ ಡಿಸಿಎಂ ಬಗ್ಗೆ ಇನ್ನು ಹಲವು ಗೊಂದಲದ ಚರ್ಚೆಗಳು ನಡೆಯುತ್ತಲೇ ಇದೆ. ಇದರ ನಡುವೆ ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆಯೂ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಹೌದು, ನನಗೆ KPCC  ಅಧ್ಯಕ್ಷ ಸ್ಥಾನ ಕೊಟ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಹೇಳುವ ಮೂಲಕ ರಾಜಣ್ಣ KPCC   ಗದ್ದುಗೆಯ ಮೇಲೆ ಕಣ್ಣಿಟ್ಟಿದ್ದಾರೆ.

ಡಿಸಿಎಂ ಹುದ್ದೆ ಬೇಡಿಕೆಯ ಮುಂದಾಳತ್ವ ವಹಿಸಿರುವ ಸಚಿವ ಕೆ ಎನ್ ರಾಜಣ್ಣ ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ನಾನು ಡಿಸಿಎಂ ಆಕಾಂಕ್ಷಿ ಅಲ್ಲ. ಸಿದ್ದರಾಮಯ್ಯ ಬೇಕಿದ್ರೆ 10 ವರ್ಷಗಳ ಕಾಲ ಸಿಎಂ ಆಗಿರಲಿ. ನನಗೇನಾದರು KPCC  ಅಧ್ಯಕ್ಷ ಸ್ಥಾನ ಕೊಟ್ರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ ಎಂದು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ರಾಜಣ್ಣ, ಲೋಕ ಚುನಾವಣೆ ಮುಗಿದ ನಂತರ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸುವುದಾಗಿ ಹೈಕಮಾಂಡ್ ಹೇಳಿದ್ದರು. ಆ ಕೆಲಸ ಇನ್ನು ಆಗಿಲ್ಲ. ಹೈಕಮಾಂಡ್ ನೀಡಿದ ಭರವಸೆ ಏನು ಎಂಬ ವಿಚಾರವನ್ನು  ನಾನು ಇಲ್ಲಿ ನೆನಪಿಸುತ್ತಿದ್ದೇನೆ. ಎಲ್ಲ ಸಮುದಾಯದವರೂ ಅಧ್ಯಕ್ಷರಾಗಲು ಅರ್ಹರು. ಲಿಂಗಾಯತ ನಾಯಕರು ಅಧ್ಯಕ್ಷ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ.

More articles

Latest article