Sunday, September 8, 2024

ಮಳೆಯಿಂದ ಕಂಗೆಟ್ಟ ಸಕಲೇಶಪುರಕ್ಕೆ ಸಚಿವ ಕೆ.ಎನ್.ರಾಜಣ್ಣ ಭೇಟಿ

Most read

ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಗುಡ್ಡ ಕುಸಿತ ಪ್ರಕರಣ ನಡೆದ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊಲ್ಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಕುಸಿತ ಸ್ಥಳಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 75ರ ಅವೈಜ್ಞಾನಿಕ ಹಾಗು ಕಳಪೆ ಕಾಮಗಾರಿ ಬಗ್ಗೆ ಸಚಿವರ ಎದುರು ಜನರ ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿಯ ರಸ್ತೆ, ಸೇತುವೆಗಳನ್ನು ಕಳಪೆಯಾಗಿ ನಿರ್ಮಿಸಲಾಗಿದೆ. ಇನ್ನಷ್ಟು ಅಪಾಯ ಸಂಭವಿಸುವ ಮೊದಲು ರಸ್ತೆ ಸರಿ ಮಾಡಿ ಎಂದು ಸಚಿವರನ್ನು ಸ್ಥಳೀಯರು ಆಗ್ರಹಿಸಿದರು.

ನಂತರ ಕೊಲ್ಲಹಳ್ಳಿ ಬಳಿಕ ಶಿರಾಡಿಘಾಟ್ ನ ದೊಡ್ಡತಪ್ಲು ಪ್ರದೇಶಕ್ಕೆ ಸಚಿವರು ಭೇಟಿ ನೀಡಿದರು. ಎರಡು ದಿನಗಳ ಹಿಂದೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಮಾರುತಿ ಓಮ್ನಿ ಕಾರಿನ ಮೇಲೆ ಗುಡ್ಡ ಕುಸಿದು ಅದರಲ್ಲಿ ಇದ್ದ ಐವರು ಅದೃಷ್ಟವಶಾತ್ ಪಾರಾಗಿದ್ದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರ ಟೀಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡೊರೋ ರಸ್ತೆಯಲ್ಲಿ ಈತರ ಅವಾಂತರ ಆದ್ರೆ ರಾಜ್ಯ ಸರ್ಕಾರವೇ ದೂರಿ ರಾಜಕೀಯ ಮಾಡ್ತಿದ್ದಾರೆ ಕುಮಾರಸ್ವಾಮಿ. ಸಾವಿನಲ್ಲಿ ಯಾಕೆ ಇಷ್ಟು ರಾಜಕೀಯ ಮಾಡ್ತಾರೆ. ರಸ್ತೆ ಯಾರ್ ಮಾಡಿದ್ದು ಅನ್ನೊದಕ್ಕಿಂತ ಜನರಿಗೆ ಪರಿಸ್ಥಿತಿ ಅರ್ಥ ಮಾಡಿಕೊಂಡು ಪರಿಹಾರ ಕೊಡೊದು ಮುಖ್ಯ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ನಾಯಕ. ಬಡವರ ಪರವಾಗಿ ಕೆಲಸ ಮಾಡುವುದು ಸಿದ್ದರಾಮಯ್ಯ ಅವರ ಬದ್ದತೆ. ಇಂಥ ಮನುಷ್ಯನಿಗೆ ವಿಧಾನಸಭೆಯಲ್ಲಿ ಮಾತನಾಡಲು ಅವಕಾಶ ಕೊಡದೆ ಅವಮಾನ ಮಾಡಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ, ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಅವರು ಟೀಕಿಸಿದರು.

More articles

Latest article