ರಂಗ ಕೃತಿ ವಿಮರ್ಶೆ‌ | ಕಿರಣ್ ಭಟ್ ರವರ ‘ಹೌಸ್ ಫುಲ್’ ಓದುವುದೇ ಥ್ರಿಲ್

ಕಿರಣ್ ರವರು ತಾವು ನೋಡಿದ ನಾಟಕವೊಂದನ್ನು ಪ್ರೊಮೋಟ್ ಮಾಡಿ ಪ್ರೇಕ್ಷಕರಿಗೆ ನಾಟಕ ನೋಡುವಂತೆ ಪ್ರೇರೇಪಿಸುವ, ರಂಗ ಮಂದಿರ ‘ಹೌಸ್ ಫುಲ್’ ಆಗುವಂತೆ ಪ್ರಚೋದಿಸುವ ಕಾರ್ಯವನ್ನು ತಮ್ಮ ಬರಹಗಳ ಮೂಲಕ ಬದ್ಧತೆಯಿಂದ ಮಾಡಿದ್ದಾರೆ, ಅದಕ್ಕಾಗಿ ಅವರು ಅಭಿನಂದನೀಯರು.

ರಂಗ ಪ್ರಯೋಗಗಳ ಕುರಿತು ಕೆಲವಾರು ವಿಮರ್ಶೆ ವಿಶ್ಲೇಷಣೆಗಳನ್ನು ಓದಿದ್ದೇವೆ. ಪತ್ರಿಕೆಯಲ್ಲಿ ವರದಿಗಳನ್ನೂ ನೋಡಿದ್ದೇವೆ. ಆದರೆ ಕಿರಣ್ ಭಟ್ ರವರು ತಾವು ನೋಡಿದ ನಾಟಕಗಳ ಕುರಿತು ಬರೆಯುವ ರೀತಿ ಶೈಲಿ ಎಲ್ಲದಕ್ಕಿಂತಲೂ ಭಿನ್ನವಾಗಿದೆ.  ಬರವಣಿಗೆಯ ಸರಳತೆಯಿಂದಾಗಿ ಓದಿಸಿಕೊಂಡು ಹೋಗುವಂತಿವೆ. ರಂಗ ಪ್ರದರ್ಶನದ ಚೌಕಟ್ಟನ್ನೂ ಮೀರಿ ಅವರು ಕಟ್ಟಿಕೊಡುವ ವಿವರಗಳನ್ನು ಓದುವುದೇ ಒಂದು ಚೆಂದ.

ಆರ್. ವಿ.ಭಂಡಾರಿಯವರ ಗರಡಿಯಲ್ಲಿ ಬೆಳೆದ ಕಿರಣ್ ಮಕ್ಕಳ ರಂಗಭೂಮಿಯಲ್ಲಿ ಹೆಚ್ಚು ಕೆಲಸ ಮಾಡಿದವರು. ರಂಗಭೂಮಿಯ ಆಳ ಅಗಲಗಳನ್ನು ಅಳತೆ ಮಾಡಿದವರು. ಕೇರಳಕ್ಕೆ ವರ್ಗವಾಗಿ ಹೋದಾಗ ಅಲ್ಲಿಯ ರಂಗಭೂಮಿ ಪ್ರಯೋಗಗಳ ಆಚೆ ಈಚೆಯ ವಿವರಗಳನ್ನು ‘ರಂಗ ಕೈರಳಿ’ ಎನ್ನುವ ಪುಸ್ತಕದಲ್ಲಿ ಬರೆದು ಅಚ್ಚರಿ ಹುಟ್ಟಿಸಿದವರು. ಈಗ “ಹೌಸ್ ಫುಲ್” ಎನ್ನುವ ಇನ್ನೊಂದು ಕೃತಿಯನ್ನು ರಚಿಸಿ ಕರ್ನಾಟಕದಲ್ಲಾದ ರಂಗ ಪ್ರಯೋಗಗಳ ಕುರಿತ ಲೇಖನಗಳ ಸಂಗ್ರಹವನ್ನು ‘ಬಹುರೂಪಿ’ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ.

ಕಿರಣ್ ರವರು ತಮ್ಮ ಅನುಭವವನ್ನು ನಾಟಕ ಕೊಟ್ಟ ಅನುಭಾವಕ್ಕೆ ಬ್ಲೆಂಡ್ ಮಾಡಿ ಬರೆಯುವ ರೀತಿ ಓದುಗರಿಗೆ ಖುಷಿ ಕೊಡುತ್ತದೆ. ನಾಟಕ ನೋಡಲು ಹೊರಡುವ ತಯಾರಿಯಿಂದ ಮೊದಲುಮಾಡಿ ರಂಗಪ್ರಯೋಗದ ಕುರಿತು ತಮ್ಮ ಗ್ರಹಿಕೆಗೆ ದಕ್ಕಿದ್ದನ್ನು, ನಾಟಕದಲ್ಲಿ ತಮಗಿಷ್ಟವಾದದ್ದನ್ನು ಅಕ್ಷರಕ್ಕಿಳಿಸುತ್ತಾರೆ.‌

ಕಿರಣ್ ರವರಿಗೆ ವಿಮರ್ಶಾ ಮಾನದಂಡಗಳ ಹಂಗಿಲ್ಲ. ರಂಗ ವಿಮರ್ಶೆಯ ವ್ಯಾಕರಣಗಳೂ ಬೇಕಿಲ್ಲ. ರಂಗ ಪ್ರಯೋಗದ ನ್ಯೂನತೆಗಳ ಬಗ್ಗೆ ಬೆಳಕು ಚೆಲ್ಲುವ ಉಮೇದು ಇಲ್ಲ. ವಸ್ತುನಿಷ್ಠ ವಿಮರ್ಶೆಯ ನಿಷ್ಠುರತೆಯ ಅಗತ್ಯವೂ ಅವರಿಗಿಲ್ಲ. ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡು ನಾಟಕದ ಪರಿಧಿಯಲ್ಲಿ ಪಯಣಿಸುತ್ತಾ ಓದುಗರನ್ನೂ ಸೆಳೆಯುವ ಕಲಾತ್ಮಕತೆಯನ್ನು ಸಿದ್ದಿಸಿಕೊಂಡಿದ್ದಾರೆ.

ನಾಟಕ ಪ್ರಯೋಗದ ವಸ್ತು ವಿಷಯ ಆಶಯ ಆಕೃತಿಗಳಾಚೆ ರಂಗತಂಡದ ಹಿನ್ನೆಲೆ, ನಾಟಕ ಕಟ್ಟಿದವರ ವಿವರಗಳನ್ನು ಕೊಡುತ್ತಲೇ ನಾಟಕದ ಕಥೆಯನ್ನು ಹೇಳುತ್ತಾರೆ. ಕಲಾವಿದರಿಗೆ ಶಹಬ್ಬಾಸ್ ಹೇಳುತ್ತಾ, ಅಭಿನಯಿಸಿದವರ ಶ್ರೇಷ್ಠತೆಯನ್ನು ಹೊಗಳುತ್ತಾ, ಹಾಡು ಸಂಗೀತಗಳ ಪ್ರಕಾರಗಳನ್ನು ಕೊಂಡಾಡುತ್ತಾ, ನಿರ್ದೇಶಕರ ಪ್ರಯತ್ನವನ್ನು ಶ್ಲಾಘಿಸುತ್ತಾ ಸಾಗುವ ಕಿರಣ್ ಭಟ್ ಬಹುತೇಕವಾಗಿ ನಾಟಕದ ಸಕಾರಾತ್ಮಕತೆಯತ್ತಲೇ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ.

ಬಹುಷಃ ಕಲಾವಿದರನ್ನು ಹುರಿದುಂಬಿಸುವ, ನಿರ್ದೇಶಕರನ್ನು ಪ್ರೋತ್ಸಾಹಿಸುವ, ರಂಗತಂಡದ ಕಾರ್ಯವನ್ನು ಉತ್ತೇಜಿಸುವ ಉದ್ದೇಶವನ್ನು ತಮ್ಮ ಲೇಖನಗಳಲ್ಲಿ ಅಳವಡಿಸಿಕೊಂಡಿದ್ದಾರೆ. ನಾಟಕವೊಂದರ ನಕಾರಾತ್ಮಕ ಅಂಶಗಳತ್ತಲೂ ಒಂಚೂರು ವಿಮರ್ಶಾತ್ಮಕ ನೋಟ ಬೀರಿದ್ದರೆ ಮುಂದಿನ ಪ್ರದರ್ಶನಗಳಲ್ಲಿ ಆ ನಾಟಕದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಲು ನಿರ್ದೇಶಕರಿಗೆ, ಕಲಾವಿದರಿಗೆ, ರಂಗ ಸಂಘಟಕರಿಗೆ ಪ್ರಯೋಜನಕಾರಿಯಾಗುತ್ತಿತ್ತು. ಆದರೆ ಕಿರಣ್ ರವರ ಬರಹದ ಆಶಯವೇ ರಂಗ ಪ್ರಯೋಗದ ಕುರಿತು ರೋಚಕ ವಿವರಗಳನ್ನು ಕೊಡುವುದಾಗಿದೆ. ರಂಗ ಕ್ರಿಯೆಯಲ್ಲಿ ತೊಡಗಿಸಿಕೊಂಡವರನ್ನು ಪ್ರೋತ್ಸಾಹಿಸುವುದಾಗಿದೆ. ಈ ನಿಟ್ಟಿನಲ್ಲಿ ಕಿರಣ್ ಯಶಸ್ವಿಯಾಗಿದ್ದಾರೆ.

ರಂಗ ವಿಮರ್ಶೆಯಲ್ಲಿ ಯಥಾಸ್ಥಿತಿ ವಿಮರ್ಶೆ ಎನ್ನುವುದೊಂದು ಇದೆ. ಅದು ಪ್ರೇಕ್ಷಕರ ದೃಷ್ಟಿಕೋನದಲ್ಲಿ ನಾಟಕವನ್ನು ಇದ್ದದ್ದನ್ನು ಇದ್ದಹಾಗೆ ಗ್ರಹಿಸುವ ಪ್ರಕಾರ. ನಾಟಕ ಪ್ರದರ್ಶನದಲ್ಲಿ ರಂಗವೇದಿಕೆಯ ಮೇಲೆ ಏನೇನು ತೋರಿಸಲಾಗುತ್ತದೆಯೋ ಅದನ್ನು ಸಂಕ್ಷಿಪ್ತವಾಗಿ ವಿವರಿಸುವ ಬಗೆ. ಪ್ರದರ್ಶನದ ಆಳಕ್ಕೆ ಇಳಿದು ಪ್ರೇಕ್ಷಕರ ಮೇಲ್ನೋಟದ ಗ್ರಹಿಕೆಯನ್ನೂ ಮೀರಿ ನಾಟಕದ ಒಲವು, ನಿಲುವು, ಆಶಯ, ಸಮಕಾಲೀನತೆ ಹಾಗೂ ಸಾಮಾಜಿಕ ಪರಿಣಾಮಗಳತ್ತಲೂ ಒಂದಿಷ್ಟು ಬೆಳಕು ಚೆಲ್ಲಬಹುದಾದ ಸಾಧ್ಯತೆಗಳತ್ತಲೂ ಕಿರಣ್ ಭಟ್ ರವರು ತಮ್ಮ ಚಿಕಿತ್ಸಾತ್ಮಕ ನೋಟ ಬೀರಿದ್ದರೆ ಚೆನ್ನಾಗಿತ್ತು. ರಂಗ ಪ್ರಯೋಗದ ಒಳಸುಳಿಗಳು, ಲೋಪ ದೋಷಗಳು, ಪ್ರೇಕ್ಷಕರ ಮೇಲೆ ಮಾಡಬಹುದಾದ ಪರಿಣಾಮಗಳು ಕ್ರಿಯಾಶೀಲ ರಂಗಕರ್ಮಿಯಾದವರಿಗೆ ಗೊತ್ತಿರುತ್ತದೆ. ರಂಗ ಪ್ರಯೋಗದಲ್ಲಾಗಬಹುದಾದ ಸಕಾರಾತ್ಮಕ ಪರಿವರ್ತನೆಗಳಿಗಾಗಿ ಕೆಲವೊಮ್ಮೆ ನಿಷ್ಠುರವಾಗಿಯೂ ಹೇಳಬೇಕಾಗುತ್ತದೆ. ಯಥಾಸ್ಥಿತಿ ಸ್ತುತಿ ವಿವರಗಳನ್ನು ಕಟ್ಟಿಕೊಡಬಹುದೇ ಹೊರತು ಬದಲಾವಣೆಗೆ ಪೂರಕ ವಾತಾವರಣವನ್ನಲ್ಲ. ಆದರೆ ಕಿರಣ್ ರವರು ತಾವು ನೋಡಿದ ನಾಟಕವೊಂದನ್ನು ಪ್ರೊಮೋಟ್ ಮಾಡಿ ಪ್ರೇಕ್ಷಕರಿಗೆ ನಾಟಕ ನೋಡುವಂತೆ ಪ್ರೇರೇಪಿಸುವ, ರಂಗ ಮಂದಿರ ‘ಹೌಸ್ ಫುಲ್’ ಆಗುವಂತೆ ಪ್ರಚೋದಿಸುವ ಕಾರ್ಯವನ್ನು ತಮ್ಮ ಬರಹಗಳ ಮೂಲಕ ಬದ್ಧತೆಯಿಂದ ಮಾಡಿದ್ದಾರೆ, ಅದಕ್ಕಾಗಿ ಅವರು ಅಭಿನಂದನೀಯರು.

ಕಿರಣ್‌ ಭಟ್‌ ಹೊನ್ನಾವರ

ಪ್ರಸನ್ನರವರ ನಿರ್ದೇಶನದ ‘ಅಯೋಧ್ಯಾ ಕಾಂಡ’, ಗರುಡ ಸದಾಶಿವರಾಯರ ‘ಶ್ರೀರಾಮ ಪಟ್ಟಾಭಿಷೇಕ’, ಡಾ.ಶ್ರೀಪಾದ ಭಟ್ ರವರ ನಿರ್ದೇಶನದ ‘ ಮಾಧವಿ’, ನಾರಸಿಂಹ, ಆನಂದ ಭಾವಿನಿ, ಯಶೋಧರಾ, ಪಾಪು ಬಾಪು, ಧರಣಿ ಮಂಡಲ ಹಾಗೂ ‘ಶಸ್ತ್ರ ಸಂತಾನ, ಗಣೇಶ ಮಂದಾರ್ತಿ ನಿರ್ದೇಶನದ ‘ದ್ರೌಪತಿ ಹೇಳ್ತವ್ಳೆ, ಸುರೇಶ್ ಆನಗಳ್ಳಿಯವರ ನಿರ್ದೇಶನದ ‘ಡ್ರಾಗನ್ ಕಂಪನಿ’ ಮತ್ತು ನವಿಲು ಪುರಾಣ, ಛಾಯಾ ಭಾರ್ಗವಿ ನಿರ್ದೇಶನದ ‘ಗುಣಮುಖ’, ಶಶಿಧರ್ ಭಾರೀಘಾಟರವರ ನಿರ್ದೇಶನದ ‘ ಈಡಿಪಸ್’, ಹುಲಗಪ್ಪ ಕಟ್ಟೀಮನಿಯವರ ನಿರ್ದೇಶನದ ‘ಕಾಲಚಕ್ರ’… ಹೀಗೆ ತಾವು ನೋಡಿದ ನಾಟಕಗಳ ಕುರಿತು ತಮ್ಮದೇ ಆದ ವಿವರಣಾತ್ಮಕ ಶೈಲಿಯಲ್ಲಿ ಕಿರಣ್ ಭಟ್ ರವರು ಲೇಖನಗಳನ್ನು ಬರೆದಿದ್ದಾರೆ. ಅವುಗಳನ್ನು ಓದಿ ಅನುಭವಿಸುವುದೇ ಒಂದು ವಿಸ್ಮಯ.

‘ನಾಟಕವೊಂದು ರಂಗವೇದಿಕೆಯ ಮೇಲೆ ಅವತ್ತೆ ಹುಟ್ಟಿ ಅವತ್ತೇ ಸಾಯುತ್ತದೆ’ ಎಂದು ಹೇಳಲಾಗುತ್ತದೆ. ಆದರೆ ಅದು ಹುಟ್ಟಿ ಸಾಯುವ ನಡುವಿನ ಕ್ರಿಯೆಗಳನ್ನು ಅಕ್ಷರರೂಪದಲ್ಲಿ ದಾಖಲಿಸುವುದು ಆ ನಾಟಕದ ಆಯಸ್ಸನ್ನು ಹೆಚ್ಚಿಸುತ್ತದೆ. ಇಂತಹುದೊಂದು ನಾಟಕ ಪ್ರಯೋಗದ ವಿವರಗಳು ರಂಗಭೂಮಿ ಕುರಿತು ಅಧ್ಯಯನ ಮಾಡುವವರಿಗೆ, ಮುಂದಿನ ತಲೆಮಾರಿನ ರಂಗಾಸಕ್ತರಿಗೆ ದೊರಕುವಂತಾಗುತ್ತದೆ. ಇಂತಹ ರಂಗ ಪ್ರಯೋಗಗಳ ವಿವರಗಳನ್ನು ಲೇಖನಗಳ ಮೂಲಕ ದಾಖಲಿಸಿ, ಪುಸ್ತಕ ರೂಪದಲ್ಲಿ ಸಂಗ್ರಹಿಸಿ ಕೊಟ್ಟ ಕಿರಣ್ ಭಟ್ ರವರ ರಂಗಬದ್ಧತೆಗೆ ಅಭಿನಂದನೆಗಳು. ರಂಗ ಲೇಖನಗಳ ಸಂಗ್ರಹದ ‘ಹೌಸ್ ಫುಲ್’ ಪುಸ್ತಕವನ್ನು ಆಸೆ ಮತ್ತು ಆಸಕ್ತಿಯಿಂದ ಪ್ರಕಟಿಸಿ ರಂಗಾಸಕ್ತರಿಗೆ ತಲುಪಿಸಿದ ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ರವರ ರಂಗ ಕಳಕಳಿಗೆ ಹ್ಯಾಟ್ಸಾಫ್.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- http://ನಾಟಕ | ದಶಕದ ಶಾಪ ವಿಮೋಚನೆ; ‘ವಚನ ಕಲ್ಯಾಣ’ಕ್ಕೆ ಚಾಲನೆ https://kannadaplanet.com/breaking-the-kaase-aa-the-dekade-launching-vachana-kalyana/

More articles

Latest article

Most read