Thursday, December 12, 2024

ಕೆಐಎಎಲ್: ಮಹಿಳೆಗೆ ವಂಚಿಸಲು ಯತ್ನಿಸಿದ ಚಾಲಕನ ಬಂಧನ

Most read

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಕಲಿ ಕ್ಯಾಬ್ ಚಾಲಕನೊಬ್ಬ ಮಹಿಳೆಯೊಬ್ಬರನ್ನು ಸುಲಿಗೆ ಮಾಡಲು ಪ್ರಯತ್ನಿಸಿರುವ ಘಟನೆ ನಡೆದಿದೆ. ಆರೋಪಿ ಬಸವರಾಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ನಿಖಿತಾ ಮಲಿಕಾ ಎಂಬುವರು ಮಿನಿ ಕ್ಯಾಬ್ ಬುಕ್ ಮಾಡಿದ್ದರು. ಆದರೆ ಬಸವರಾಜ್ ಓಲಾದ ಅಧಿಕೃತ ಕ್ಯಾಬ್ ಚಾಲಕ ತಾನೇ ಎಂದು ನಂಬಿಸಿ ಹಣವನ್ನು ಸುಲಿಗೆ ಮಾಡಲು ಪ್ರಯತ್ನ ನಡೆಸಿದ್ದಾನೆ.


ಬಸವರಾಜ್, ನೀವು ಬುಕ್ ಮಾಡಿರುವ ಕ್ಯಾಬ್ ಎಂದು ಹೇಳಿದ ನಂತರ ಮಹಿಳೆ ಕಾರು ಹತ್ತಿದ್ದಾರೆ. ಆದರೆ ಚಾಲಕ ಅಧಿಕೃತ ಓಟಿಪಿಯನ್ನು ಕೇಳಲೇ ಇಲ್ಲ. ಮೇಲಾಗಿ ಆತನ ಮೊಬೈಲ್ ನಲ್ಲಿ ಓಲಾ ಆಪ್ ಇರಲೇ ಇಲ್ಲ. ಅಧಿಕೃತ ಆಪ್ ಕೆಲಸ ಮಾಡುತ್ತಿಲ್ಲ. ಆದ್ದರಿಂದ ನೀವು ಹೋಗಬೇಕಾಗಿರುವ ಸ್ಥಳವನ್ನು ನನ್ನ ಮೊಬೈಲ್ ಕಳುಹಿಸಿ ಎಂದು ನಂಬಿಸಿದ್ದಾನೆ.


ನಂತರ ಚಾಲಕ ಹೆಚ್ಚಿನ ಹಣಕ್ಕಾಗಿ ಬೇಡಿಕೆ ಇರಿಸಿದ್ದಾನೆ. ಪೆಟ್ರೋಲ್ ಬಂಕ್ ವೊಂದಕ್ಕೆ ಹೋಗಿ ಡೀಸೆಲ್ ಗೆ 500 ರೂ, ನೀಡುವಂತೆ ಕೇಳಿದ್ದಾನೆ. ತಾನು ಸುರಕ್ಷಿತವಾಗಿಲ್ಲ ಎಂದು ಭಾವಿಸಿದ ಮಹಿಳೆ ಪೊಲೀಸರ ತುರ್ತು ಸಹಾಯಕ್ಕಾಗಿ 112 ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ 20 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿ ವಾಹನ ಚಾಲಕನನ್ನು ಬಂಧಿಸಿದ್ದಾರೆ.

More articles

Latest article