ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 1.29 ಕೋಟಿ ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ಏರ್‌ ಪೋರ್ಟ್‌ನಲ್ಲಿ 1.29 ಕೋಟಿ ಮೌಲ್ಯದ ಚಿನ್ನ ಜಪ್ತಿಯಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್‌ ಪೋರ್ಟ್‌ನಲ್ಲಿ ಕಸ್ಟಮ್ಸ್‌ ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ.‌ 2 ಕೆಜಿ 86ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 12 ಪ್ರಯಾಣಿಕರು ಸಿಕ್ಕಿಹಾಕಿಕೊಂಡಿದ್ದಾರೆ. ಅದರಲ್ಲಿ ಓರ್ವ ಪುರುಷ ಮತ್ತು 11 ಮಹಿಳೆಯರು ಇದ್ದಾರೆಂದು ತಿಳಿದು ಬಂದಿದೆ. ಇವರುಗಳನೆಲ್ಲ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಈ ಎಲ್ಲಾ ಪ್ರಯಾಣಿಕರು ಮಸ್ಕಟ್‌ ಮತ್ತು ಮದೀನಾದಿಂದ ಕೆಐಎಬಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಬರುವ ವೇಳೆಯಲ್ಲಿ ಮೈಮೇಲೆ ಬಂಗಾರ ತೊಟ್ಟು ಬಂದಿದ್ದಾರೆ. ಮೈಮೇಲೆ ಬಂಗಾರ ತೊಟ್ಟು ಬಂದರೆ ಯಾರು ಕೇಳುವುದಿಲ್ಲ ಎಂದು ಅಂದುಕೊಂಡಿದ್ದರು. ಚಿನ್ನಕ್ಕೆ ಸರಿಯಾದ ಬಿಲ್‌ ಮತ್ತು ಟ್ಯಾಕ್ಸ್‌ ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

More articles

Latest article

Most read