ತಿಂಗಳ ಮೊದಲೇ KAS ಪ್ರಶ್ನೆ ಪತ್ರಿಕೆ ಮುದ್ರಿಸಿ ನಿಯಮ ಉಲ್ಲಂಘಿಸಿದ KPSC: ಪರೀಕ್ಷೆ ಮುಂದೂಡುವಂತೆ ಆಗ್ರಹ!

Most read

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್ಸಿ) ಆಗಸ್ಟ್ 25ರಂದು ನಡೆಸಲು ನಿರ್ಧರಿಸಿರುವ ಕೆಎಎಸ್‌ ಪೂರ್ವಭಾವಿ ಪರೀಕ್ಷೆ ಅಕ್ರಮ ನಡೆಯುತ್ತಿರುವ ಕಾರಣ ಕೆಎಎಸ್‌ ಪರೀಕ್ಷೆಯನ್ನು ಮುಂದೂಡುವಂತೆ ಕೆಎಎಸ್ ಅಭ್ಯರ್ಥಿಗಳು ಕರ್ನಾಟಕದ ಮುಖ್ಯ ಕಾರ್ಯದರ್ಶಿಗಳಿಗೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿರುವ ಅಭ್ಯರ್ಥಿಗಳು, ಈ ವಿಷಯಕ್ಕೆ ಸಂಬಂಧಿಸಿದಂತೆ ದಿನಾಂಕ:07.08.2024 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಪರೀಕ್ಷೆಯನ್ನು ಮುಂದೂಡುವಂತೆ ಮನವಿ ಮಾಡಿದ್ದು, ಆಗ ಪ್ರಶ್ನೆಪತ್ರಿಕೆಗಳು ಮುದ್ರಣಗೊಂಡಿದ್ದು, ಪೂರ್ವತಯಾರಿ ಮುಗಿದಿದ್ದು, ಪರೀಕ್ಷೆ ಮುಂದೂಡಲು ಆಗುವುದಿಲ್ಲವೆಂಬ ಕಾರಣವನ್ನು ತಿಳಿಸಿರುತ್ತಾರೆ.

ಈ ಅಂಶವನ್ನು ಗಮನಿಸಿದರೆ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಮೇಲೆ ಮತ್ತಷ್ಟು ಎಳೆಎಳೆಯಾಗಿ ಭ್ರಷ್ಟಾಚಾರದ ಅನುಮಾನಕ್ಕೆ ಎಡೆಮಾಡಿಕೊಡುತ್ತಿರುತ್ತದೆ. ಏಕೆಂದರೆ ಪರೀಕ್ಷೆಗೆ ದಿನಾಂಕ ನಿಗದಿಯಾದ ಒಂದು ವಾರದ ಮುಂಚೆ ಪ್ರಶ್ನೆ ಪತ್ರಿಕೆ ಮುದ್ರಣ ಮಾಡುವುದು ಸಾಮಾನ್ಯ. ಆದರೆ ಗೆಜೆಟೆಡ್ ಪ್ರೊಬೇಷನರ್, ಕೆಎಎಸ್ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆಗೆ ಪರೀಕ್ಷೆಗೆ ಗೊತ್ತುಪಡಿಸಿದ ದಿನಾಂಕಕ್ಕೆ ಒಂದು ತಿಂಗಳ ಮೊದಲೇ ಕೆಪಿಎಸ್ಸಿ ಮುದ್ರಣ ಮಾಡಿಟ್ಟಿಕೊಂಡಿರುವುದು ಈಗ ಮತ್ತೊಂದು ಭ್ರಷ್ಟಾಚಾರ ಮಾಡುವ ತಯಾರಿ ಇದು ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಎಲ್ಲಾ ತಯಾರಿ ಆಗಿದೆಯೆಂದು ಹೇಳುತ್ತಿರುವುದು, ಕೆ.ಪಿ.ಎಸ್.ಸಿ ಯು ಸರ್ಕಾರಕ್ಕೆ ನೇಮಕಾತಿ ನಿಯಮಗಳಲ್ಲಿ ಸುಳ್ಳು ಹೇಳುತ್ತಿರುವುದು ಮತ್ತು ಪರೀಕ್ಷೆ ನಡೆಯುವ ಒಂದು ತಿಂಗಳ ಮುಂಚೆಯೇ ಪ್ರಶ್ನೆ ಪತ್ರಿಕೆ ಮುದ್ರಿಸಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುವ ವಿಷಯಗಳು ಸ್ಪಷ್ಟವಾಗಿದೆ ಎಂದಿದ್ದಾರೆ.

ಮುಂದುವರೆದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾದಂತೆಯೇ. ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಹುದೆಂದು ಸರ್ಕಾರಕ್ಕೆ ಹೆದರಿಸಿ ದಿನಾಂಕ:27.08.2024 ರಂದೇ ಪರೀಕ್ಷೆ ನಡೆಸಲು ತಮ್ಮಿಂದ ಸಹಿಯನ್ನು ಪಡೆದುಕೊಂಡಿರುತ್ತದೆ ಎಂದು ಆರೋಪಿಸಿದೆ.

ಹಾಗಾಗಿ ತಾವುಗಳು ಕೆ.ಪಿ.ಎಸ್.ಸಿ ಯು ಪರೀಕ್ಷೆ ನಡೆಸಲು ಉದ್ದೇಶಿಸಿರುವ ದಿವನಾಂಕ:27.08.2024 ರಂದು ಕರ್ತವ್ಯದ ದಿನವಾಗಿದ್ದು, ಅಭ್ಯರ್ಥಿಗಳಿಗೆ ತೊಂದರೆಯಾಗುವುದನ್ನು ಮನಗಂಡು ಪರೀಕ್ಷಾ ದಿನಾಂಕ ಮುಂದೂಡಿ, ಭಾನುವಾರದಂದೇ ಪರೀಕ್ಷೆ ನಡೆಸಲು ಕೆ.ಪಿ.ಎಸ್.ಸಿ ರವರಿಗೆ ಸೂಚಿಸಬೇಕೆಂದು ಈ ಮೂಲಕ ಕೋರಲಾಗಿದೆ ಎಂದು ತಿಳಿಸಿದೆ.

ಕೇಂದ್ರ ಲೋಕಸೇವಾ ಯೋಗ (UPSC) ಸೇರಿದಂತೆ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುತ್ತವೆ. ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಾರದು ಹಾಗೂ ಪರೀಕ್ಷೆಯ ಪಾರದರ್ಶಕತೆಯನ್ನು ಪಾಲಿಸುವ ಸಲುವಾಗಿ ಈ ರೀತಿಯಾದ ಕ್ರಮವನ್ನು ಪಾಲಿಸಲಾಗಿದೆ. ಆದರೆ ಕೆಪಿಎಸ್‌ಸಿ ಮಾತ್ರ KAS ಪರೀಕ್ಷೆಯ ಒಂದು ತಿಂಗಳ ಮುಂಚೆ ಮುದ್ರಣ ಮಾಡಿಟ್ಟುಕೊಂಡಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

More articles

Latest article