Thursday, September 19, 2024

ಕೊಡಗು ಮತ್ತು ಹಾಸನ ಅರಣ್ಯಗಳಲ್ಲಿ ಮಾವೋವಾದಿಗಳು ಪ್ರತ್ಯಕ್ಷ: ರಾಜ್ಯ ಪೊಲೀಸ್ ಕಣ್ಗಾವಲು, ಕಟ್ಟೆಚ್ಚರ

Most read

 ಕೊಡಗು ಮತ್ತು ಹಾಸನ ಜಿಲ್ಲೆಗಳ ಅರಣ್ಯಗಳಲ್ಲಿ ಮಾವೋವಾದಿಗಳ ಚಟುವಟಿಕೆ ಕಂಡುಬಂದ ಬೆನ್ನಲ್ಲೇ ರಾಜ್ಯ ಪೊಲೀಸರು ಹೈಅಲರ್ಟ್‌ ಆಗಿ ತನಿಖೆ ಪ್ರಾರಂಭಿಸಿದ್ದಾರೆ. ಲೋಕಸಭಾ ಚುನಾವಣೆ ಸಮಯದಲ್ಲಿ ಯಾವುದು ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.

ಪೊಲೀಸರ ಪ್ರಕಾರ, ಮಾವೋವಾದಿ ನಾಯಕ ವಿಕ್ರಮ್ ಗೌಡ ಕೇರಳದ ಗಡಿಗೆ ಹೊಂದಿಕೊಂಡಿರುವ ಕೊಡಗಿನ ಗ್ರಾಮವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ದಿನಸಿ ವಸ್ತುಗಳನ್ನು ಖರೀದಿಸುವ ವೇಳೆ ಮಾವೋವಾದಿಗಳು ತಮ್ಮ “ಬಡವರಿಗಾಗಿ ಹೋರಾಟ” ಕ್ಕೆ ಬೆಂಬಲ ಕೋರಿ ಗ್ರಾಮಸ್ಥರನ್ನು ಸಂಪರ್ಕಿಸಿದ್ದಾರೆ. ” ಸದ್ಯ ನಾವು ಏನನ್ನೂ ಬಹಿರಂಗಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಇಬ್ಬರು ಮಹಿಳೆಯರ ಬಳಿ ಬಂದೂಕುಗಳು ಮತ್ತು  ಮ್ಯಾಗ್ಜೀನ್ಸ್ ಇದ್ದವು” ಎಂದು ಕೊಡಗು ಎಸ್ಪಿ ಕೆ ರಾಮರಾಜನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, ಮಾವೋವಾದಿ ಗುಂಪು ಒಂದು ತಿಂಗಳ ಹಿಂದೆ ಕರ್ನಾಟಕದ ಅರಣ್ಯ ಪ್ರವೇಶಿಸಿದ್ದಾರೆ. ಸ್ಥಳೀಯ ಹಳ್ಳಿಗಳಿಂದ ಜನರನ್ನು ಅವರೊಂದಿಗೆ ಸೇರಿಸಿಕೊಳ್ಳುವ ಯೋಜನೆಯನ್ನು ಹೊಂದಿರಬಹುದು ಎಂಬುದನ್ನು ಅಂದಾಜಿಸಿದ್ದಾರೆ. ಅಲ್ಲದೆ, ಸಕಲೇಶಪುರ ಭಾಗದಲ್ಲಿ ಮಾವೋವಾದಿಗಳ ಚಟುವಟಿಕೆ ಕಂಡುಬಂದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ.

More articles

Latest article