ಕರ್ನಾಟಕದಲ್ಲಿ 2 ಹಂತದಲ್ಲಿ ಲೋಕಸಭೆ ಚುನಾವಣೆ: ಮತದಾನ ಯಾವಾಗ ಗೊತ್ತೇ?

Most read

ಕೇಂದ್ರ ಚುನಾವಣಾ ಆಯೋಗ ಮುಂಬರುವ ಲೋಕಸಭೆ ಚುನಾವಣೆ ದಿನಾಂಕವನ್ನು ಶನಿವಾರ ಪ್ರಕಟಿಸಿದರು. ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಕೂಡ ಇಂದಿನಿಂದಲೇ ಜಾರಿಗೆ ಬರಲಿದೆ. 

ರಾಜ್ಯದಲ್ಲಿ ಒಟ್ಟು 28 ಲೋಕಸಭಾ ಕ್ಷೇತ್ರಗಳಿದ್ದು, ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರಕರ್ನಾಟಕ ಮೂರನೇ ಹಂತದಲ್ಲಿಮತದಾನ ನಡೆಯಲಿದೆ.

ಕರ್ನಾಟಕದಲ್ಲಿ ಏಪ್ರಿಲ್ 26ರಂದು ಹಾಗೂ ಮೇ 7ರಂದು ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಜಯ ಗಳಿಸಿತ್ತು. ಜೆಡಿಎಸ್ ಒಂದು ಸ್ಥಾನ ಹಾಗೂ ಪಕ್ಷೇತರ ಅಭ್ಯರ್ಥಿ ಒಂದು ಸ್ಥಾನ  ಜಯಗಳಿತ್ತು.

ಕರ್ನಾಟಕ ಎರಡನೇ ಹಂತದ ಲೋಕಸಭಾ ಚುನಾವಣೆ-2024 ರ ಕಾರ್ಯಕ್ರಮಗಳ ಕ್ಯಾಲೆಂಡರ್

ಕ್ರಮ ಸಂಖ್ಯೆದಿನಾಂಕಕಾರ್ಯಕ್ರಮಗಳು
116/03/2024ಚುನಾವಣೆ ನೀತಿ ಸಂಹಿತೆ
228/03/2024ನಾಮನಿರ್ದೇಶನಗಳ ಪ್ರಾರಂಭಿಕ ದಿನಾಂಕ
304/04/2024ನಾಮನಿರ್ದೇಶನಗಳ ಕೊನೆಯ ದಿನಾಂಕ
405/04/2024ನಾಮನಿರ್ದೇಶನಗಳ ಪರಿಶೀಲನೆ
508/04/2024ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ
626/04/2024ಮತದಾನ ದಿನಾಂಕ
704/06/2024ಮತಎಣಿಕೆ
806/06/2024ಚುನಾವಣಾ ಪೂರ್ಣಗೊಳ್ಳುವ ದಿನಾಂಕ

ಕರ್ನಾಟಕ ಮೂರನೇ ಹಂತದ ಲೋಕಸಭಾ ಚುನಾವಣೆ-2024 ರ ಕಾರ್ಯಕ್ರಮಗಳ ಕ್ಯಾಲೆಂಡರ್

ಕ್ರಮ ಸಂಖ್ಯೆದಿನಾಂಕಕಾರ್ಯಕ್ರಮಗಳು
116/03/2024ಚುನಾವಣೆ ನೀತಿ ಸಂಹಿತೆ
212/04/2024ನಾಮನಿರ್ದೇಶನಗಳ ಪ್ರಾರಂಭಿಕ ದಿನಾಂಕ
319/04/2024ನಾಮನಿರ್ದೇಶನಗಳ ಕೊನೆಯ ದಿನಾಂಕ
420/04/2024ನಾಮನಿರ್ದೇಶನಗಳ ಪರಿಶೀಲನೆ
522/04/2024ನಾಮನಿರ್ದೇಶನಗಳನ್ನು ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ
607/05/2024ಮತದಾನ ದಿನಾಂಕ
704/06/2024ಮತಎಣಿಕೆ
806/06/2024ಚುನಾವಣಾ ಪೂರ್ಣಗೊಳ್ಳುವ ದಿನಾಂಕ

More articles

Latest article