ಕಾಂತಾರ-2 ಗೆ ಬಂತು ಆಪತ್ತು: ದೈವಾರಾಧಕರು ಹೇಳುತ್ತಿರುವುದೇನು?

ಬೆಂಗಳೂರು: ದೇಶಾದ್ಯಂತ ಭರ್ಜರಿ ಯಶಸ್ಸು ಗಳಿಸಿದ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕಾಂತಾರ ಚಲನಚಿತ್ರದ ಪ್ರೀಕ್ವೆಲ್ ಶೂಟಿಂಗ್ ಈಗಾಗಲೇ ಆರಂಭಗೊಂಡಿದೆ.

ಕಾಂತಾರದ ನಿರ್ದೇಶಕ ಮತ್ತು ನಾಯಕನಟ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ಆದರೆ ಚಲನಚಿತ್ರಗಳಲ್ಲಿ ದೈವರಾಧನೆಯನ್ನು ಬಳಸುವ ಕುರಿತು ದೈವನರ್ತಕರ ಸಮುದಾಯ ಗರಂ‌ ಆಗಿರುವುದು ಚಿತ್ರತಂಡಕ್ಕೆ ಆತಂಕ ತಂದೊಡ್ಡಿದೆ.

ಸಿನಿಮಾ, ನಾಟಕಗಳಲ್ಲಿ ದೈವಾರಾಧನೆ ಪ್ರದರ್ಶಿಸಬೇಡಿ. ದೈವಾರಾಧನೆ ಪ್ರದರ್ಶನವಾದರೆ ನಾವೇ ನುಗ್ಗಿ ತಡೆಯುತ್ತೇವೆ. ನಮ್ಮ ಕಾನೂನಾತ್ಮಕ ಹೋರಾಟಕ್ಕೆ ನ್ಯಾಯ ಸಿಗುತ್ತಿಲ್ಲ. ಹಲವು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಆದ್ರೆ ಈವರೆಗೂ ಎಫ್ ಐ ಆರ್ ದಾಖಲಿಸಿಲ್ಲ ಎಂದು ‘ನಲಿಕೆ’ ದೈವನರ್ತಕ ಸಮುದಾಯ ಎಚ್ಚರಿಸಿದೆ.

ಇನ್ನು ಮುಂದೆ ಕಾನೂನನ್ನು ನಾವು ಕಾಯೋದಿಲ್ಲ. ದೈವಾರಾಧನೆ ಪ್ರದರ್ಶನವಾದ್ರೆ ನಾವೇ ನುಗ್ಗುತ್ತೇವೆ. ನಿಷ್ಠಾವಂತ ದೈವಾರಾಧಕರು ತಲೆ ತಗ್ಗಿಸುವಂತಾಗಿದೆ. ಬೆಂಬಲ ಇಲ್ಲ ಎಂದಾದರೆ ನೈತಿಕ ಪೊಲೀಸ್ ಗಿರಿ ಮಾಡ್ತೇವೆ ಎಂದು ದೈವ ನರ್ತಕ ನಲಿಕೆ ಸಮುದಾಯ ಎಚ್ಚರಿಸಿದೆ.

ದೈವಾರಾಧನೆಯನ್ನೇ ಕೇಂದ್ರವಾಗಿಟ್ಟುಕೊಂಡು ನಿರ್ಮಾಣವಾದ ಕಾಂತಾರ ಸಿನಿಮಾ ಅಪಾರ ಜನಮನ್ನಣೆ ಗಳಿಸಿದ್ದಲ್ಲದೆ ರಿಷಬ್ ಶೆಟ್ಟಿಯವರಿಗೆ ರಾಷ್ಟ್ರಪ್ರಶಸ್ತಿಯನ್ನೂ ತಂದುಕೊಟ್ಟಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಕಾಂತಾರ ನಂತರ ದೇಶದ ಹಲವು ಭಾಷೆಗಳಿಗೆ ಡಬ್ ಆಗಿ ಅಲ್ಲೂ ಯಶಸ್ಸು ಕಂಡಿತ್ತು.

ಚಿತ್ರದ ಯಶಸ್ಸಿನ ನಂತರ‌ ಕಾಂತಾರ ಸಿನಿಮಾದ ಪ್ರೀಕ್ವೆಲ್ (ಹಿಂದಿನ ಕಥೆ) ನಿರ್ಮಾಣಕ್ಕೆ ಹೊಂಬಾಳೆ ಸಂಸ್ಥೆ ಕೈ ಇಟ್ಟಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.

More articles

Latest article

Most read