ನನ್ನ ಕ್ಷೇತ್ರದ ಜನರು ನನ್ನನ್ನು ಯಾವುದೇ ಕಾರಣಕ್ಕೆ ಭೇಟಿಯಾಗಬೇಕು ಎಂದರೆ ಅವರು ಆಧಾರ್ ಕಾರ್ಡ್ ತರಬೇಕು ಕಡ್ಡಾಯ ಎಂದು ಹೇಳುವ ಮೂಲಕ ಸಂಸದೆ ಕಂಗನಾ ರಣಾವತ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ರಾಜಕೀಯ ಪ್ರವೇಶ ಮಾಡಿ ಸಂಸದೆ ಆಗುತ್ತಿದ್ದಂತೆ ಸಾಲು ಸಾಲು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಸಂಸದೆಯಾದ ಬಳಿಕ ಏರ್‌ಪೋರ್ಟ್ ಪ್ರವೇಶಿಸುವಾಗ ಐಡಿ ಕಾರ್ಡ್ ತೋರಿಸದಿದ್ದಕ್ಕೆ ಮಹಿಳಾ ಮಾರ್ಸೆಲ್ ಜೊತೆ ಜಗಳವಾಡಿದ ಘಟನೆ ನಡೆದಿತ್ತು. ಈವೇಳೆ ಮಹಿಳೆ ಮಾರ್ಸೆಲ್ ಸಂಸದೆ ಕಂಗನಾಗೆ ಕಪಾಲಕ್ಕೆ ಹೊಡೆದ ಘಟನೆಯು ನಡೆದಿತ್ತು.
ಈಗ ನನ್ನನ್ನು ನೋಡಲು ಬರುವ ಜನರು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು ಎಂದು ಹೇಳುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಅದಕ್ಕೆ ಕಾರಣ, ತಮ್ಮನ್ನು ಭೇಟಿಯಾಗಲು ಬರುವವರು ಮಂಡಿ ಲೋಕಸಭಾ ಕ್ಷೇತ್ರದ ಜನರು ಹೌದೋ ಅಲ್ಲವೋ ಎಂದು ನೋಡುವುದಕ್ಕಾಗಿ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳಿದ್ದಾರೆ.
ನೀವು ಮೇಲಿನ ಹಿಮಾಚಲ ಪ್ರದೇಶದವರಾಗಿದ್ದರೆ ನಮ್ಮ ಕುಲು ಮನಾಲಿ ಮನೆಗೆ ಬನ್ನಿ. ನೀವು ಮಂಡಿಯವರಾಗಿದ್ದರೆ ಮಂಡಿ ಕಚೇರಿಗೆ ಬನ್ನಿ ಎಂದೂ ಕಂಗನಾ ಹೇಳಿದ್ದಾರೆ. ಕೆಲಸದ ವಿಚಾರವಾಗಿ ಯಾರನ್ನಾದರೂ ಖುದ್ದಾಗಿ ಭೇಟಿಯಾದರೆ ತುಂಬಾ ಒಳ್ಳೆಯದು. ಜನರು ತಮ್ಮ ಸಮಸ್ಯೆಗಳನ್ನು ಅಂಚೆ ಮೂಲಕವೂ ಹೇಳಬಹುದು ಎಂದಿದ್ದಾರೆ.
ಪ್ರಸ್ತುತ ಹಿಮಾಚಲ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ವಿಕ್ರಮಾದಿತ್ಯ ಸಿಂಗ್, ಕಂಗನಾ ಮಾತಿಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಯೊಬ್ಬರು ತಮ್ಮ ಸಂಸದೀಯ ಕ್ಷೇತ್ರದ ಜನರಿಗೆ ಈತರ ಹೇಳುವುದು ಉತ್ತಮ ನಡವಳಿಕೆಯಲ್ಲ. ಜನಪ್ರತಿನಿಧಿ ಸ್ವಂತ ರಾಜ್ಯದವರೇ ಆಗಿರಲಿ, ಪ್ರವಾಸಿಗರೇ ಇರಲಿ, ಸಾರ್ವಜನಿಕ ಪ್ರತಿನಿಧಿಗಳು ಎಲ್ಲರನ್ನೂ ಭೇಟಿಯಾಗಬೇಕು. ಹೀಗೆ ಅಧಾರ್ ಕಾರ್ಡ್ ತರುವಂತೆ ಹೇಳುವುಸು ಸರಿಯಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಟೀಕಿಸಿದ್ದಾರೆ.