ಸದ್ಗುರು ಚೇತರಿಸಿಕೊಳ್ಳದಿದ್ದರೆ ಸೂರ್ಯ ಉದಯಿಸಲ್ಲ, ಭೂಮಿ ಚಲಿಸಲ್ಲ : ಕಂಗನಾ ರಣಾವತ್‌

ಸದ್ಗುರು ಐಸಿಯು ಬೆಡ್‌ ಮೇಲೆ ನೋಡಿದ ಮೇಲೆ ನನಗೆ ದೇವರು ಕುಸಿದು ಬಿದ್ದಂತೆ ಭಾಸವಾಯ್ತು. ಸದ್ಗುರು ಚೇತರಿಸಿಕೊಳ್ತಾರೆ, ಇಲ್ಲದಿದ್ದರೆ ಸೂರ್ಯ ಉದಯಿಸಲ್ಲ, ಭೂಮಿ ಚಲಿಸಲ್ಲ ಎಂದು ಕಂಗನಾ ರಣಾವತ್‌ ಹೇಳಿದ್ದಾರೆ‌.

ಈ ಬಗ್ಗೆ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಬಹಳ ಬರೆದುಕೊಂಡಿರುವ ಕಂಗನಾ ರಣಾವತ್‌, ಸದ್ಗುರು ಅವರ ಬಗ್ಗೆ ರಾಧೆಯವರಿಂದ ತಿಳಿದುಕೊಂಡಾಗಿನಿಂದ ನನಗೆ ತೀವ್ರ ಸಂಕಟವಾಗುತ್ತಿದೆ. ಸದ್ಗುರು ಅವರು ತೀವ್ರ ನೋವಿನಲ್ಲೂ ಬೃಹತ್ ಶಿವರಾತ್ರಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅದಲ್ಲದೇ ಯಾವುದೇ ಸಭೆಯನ್ನು ಅವರು ತಪ್ಪಿಸಿಕೊಂಡಿಲ್ಲ. ನೀವು ಬೇಗ ಗುಣಮುಖರಾಗಿ.. ನೀವು ಇಲ್ಲದೇ ನಾವು ಏನೂ ಅಲ್ಲ ಎಂದಿದ್ದಾರೆ.

ಸದ್ಗುರು ಅವರನ್ನು ನಾನು ಐಸಿಯು ನಲ್ಲಿ ನೋಡಿದಾಗ. ನನಗೆ ತುಂಬಾ ಬೇಸರ ಆಯ್ತು. ಈ ಮೊದಲು ಅವರು ನಮ್ಮಂತೆ ಮೂಳೆ, ರಕ್ತ, ಮಾಂಸ ಹೊಂದಿರುವವರು ಎಂದು ನನಗೆ ಯಾವತ್ತೂ ಅನಿಸಲಿಲ್ಲ. ದೇವರು ಕುಸಿದು ಬಿದ್ದಂತೆ ಭಾಸವಾಯ್ತು, ಭೂಮಿಯು ಪಲ್ಲಟವಾದಂತೆ ಅನುಭವ ಆಯ್ತು, ಆಕಾಶ ನನ್ನ ಕೈಬಿಟ್ಟಂತೆ, ನನ್ನ ತಲೆ ತಿರುಗುತ್ತಿರುವಂತೆ ಭಾಸವಾಯ್ತು. ನನಗೆ ವಾಸ್ತವವನ್ನೇ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ, ಈ ಘಟನೆಯನ್ನು ನಾನು ನಂಬಲ್ಲ. ಅವರು ಚೇತರಿಸಿಕೊಳ್ಳುತ್ತಾರೆ. ಇಲ್ಲದಿದ್ದರೆ ಸೂರ್ಯ ಉದಯಿಸುವುದಿಲ್ಲ, ಭೂಮಿ ಚಲಿಸುವುದಿಲ್ಲ ಎಂದು ಹೇಳಿದ್ದಾರೆ.

More articles

Latest article

Most read