ಜೋಗ ಜಲಪಾತ ನೋಡಲು ಬರುವ ಪ್ರವಾಸಿಗರಿಗೆ ಎರಡು ಗಂಟೆ ಸಮಯ ನಿಗದಿ ಮಾಡಿರುವ ಜೋಗ ನಿರ್ವಹಣಾ ಪ್ರಾಧಿಕಾರ ಪ್ರವೇಶ ಶುಲ್ಕ ಕೂಡ ಹೆಚ್ಚಳ ಮಾಡಿದೆ. ಇದಕ್ಕೆ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೋಗದ ಸೌಂದರ್ಯ ನೋಡಲು 2 ಗಂಟೆಯ ಅವಧಿ ನಿಗದಿ ಮಾಡಿದೆ. 2 ಗಂಟೆಯೊಳಗೆ ಜೋಗದ ಪರಿಸರ ನೋಡಲು ಸಾಧ್ಯವೇ? ಮತ್ತು ಪೂರ್ಣ ಕಾಮಗಾರಿ ಮುಗಿಯದೇ ಪ್ರವೇಶ ಶುಲ್ಕ ಹೆಚ್ಚಿಸಿದೆ ಎಂದು ನಿರ್ವಹಣಾ ಪ್ರಾಧಿಕಾರದ ನಡೆಗೆ ಪ್ರವಾಸಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಪಾರ್ಕಿಂಗ್ ಶುಲ್ಕವಾಗಿ, ಬಸ್‌ಗೆ 150 ರೂ. ಇದ್ದ ಶುಲ್ಕ 200 ರೂ., ಕಾರಿಗೆ 50 ರೂ. ಇದ್ದ ಶುಲ್ಕ 80 ರೂಗೆ ಏರಿಸಲಾಗಿದೆ. ಒಬ್ಬ ಪ್ರವಾಸಿಗನಿಗೆ 10 ರೂ. ಇದ್ದ ಶುಲ್ಕ 20 ರೂ.ಗೆ ಏರಿಕೆ ಮಾಡಲಾಗಿದೆ.