Saturday, December 7, 2024

ಜಮ್ಮು ಮತ್ತು ಕಾಶ್ಮೀರ: ಗದ್ದಲ ಎಬ್ಬಿಸಿದ ಬಿಜೆಪಿ, ಕಲಾಪಕ್ಕೆ ಅಡ್ಡಿ

Most read

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಲು ಒತ್ತಾಯಿಸಿ ಅಂಗೀಕರಿಸಿದ ನಿರ್ಣಯವನ್ನು ವಿರೋಧಿಸಿ ಬಿಜೆಪಿ ಶಾಸಕರು ಸತತ ಮೂರನೇ ದಿನವೂ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದರು. ಇದರಿಂದ ಇಂದೂ ಸಹ ಸದನದ ಕಲಾಪಕ್ಕೆ ಅಡ್ಡಿಯುಂಟಾಯಿತು.  ಬಿಜೆಪಿ ಸದಸ್ಯರು ಗದ್ದಲ, ಪ್ರತಿಭಟನೆಯ್ನು ಮುಂದುವರೆಸಿದ್ದರಿಂದ ಸದನದಲ್ಲಿ ಡಳಿತ ಮತ್ತು ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು.  ಇದೆ ಪರಿಣಾಮ ಸಭಾಧ್ಯಕ್ಷ ಅಬ್ದುಲ್ ರಹೀಂ ರಾಫರ್   ಕೋಲಾಹಲಕ್ಕೆ ಕಾರಣರಾದ ೧೩ ಸದಸ್ಯರನ್ನು ಸದನದಿಂದ ಹೊರ ಹಾಕುವಂತೆ ಸೂಚಿಸಿದರು. ನಂತರ ಮಾರ್ಷಲ್‌ಗಳು ವಿರೋಧ ಪಕ್ಷದ 12 ಸದಸ್ಯರು ಮತ್ತು ಅವಾಮಿ ಇತೆಹಾದ್ ಪಕ್ಷದ ಶಾಸಕ ಶೇಖ್ ಖುರ್ಷಿದ್ ಅವರನ್ನು ಮಾರ್ಷಲ್‌ಗಳು ಸದನದಿಂದ ಹೊರಹಾಕಿದರು.

ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಪಾಕಿಸ್ತಾನ ಅಜೆಂಡಾ ನಡೆಯಲ್ಲ ಎಂದು ಬಿಜೆಪಿ ಸದಸ್ಯರು ಘೋಷಣೆಗಳನ್ನು ಕೂಗುತ್ತಾ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಸಭಾಧ್ಯಕ್ಷರು ಬಿಜೆಪಿ ಸದಸ್ಯರನ್ನು ಸದನದಿಂದ ಹೊರಕ್ಕೆ ಕಳುಹಿಸುವಂತೆ ನಿರ್ದೇಶನ ನೀಡಿದರು. ಭಾರಿ ಕೋಲಾಹಲ ಉಂಟಾಗಿ ಕಲಾಪಕ್ಕೆ ಅಡ್ಡಿ ಉಂಟಾಗಿದ್ದರಿಂದ ಕಲಾಪವನ್ನು ಕೆಲ ಸಮಯ ಮುಂದೂಡಲಾಯಿತು.

More articles

Latest article