ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜ್ಹರ್ ಸೋದರ ಮುಹಮ್ಮದ್ ತಾಹಿರ್ ಅನ್ವರ್ ನಿಗೂಢ ಸಾವು

ಬಹಾವಲ್‌ಪುರ (ಪಾಕಿಸ್ತಾನ), ಮಾರ್ಚ್ 31: ಜೈಶ್-ಎ-ಮೊಹಮ್ಮದ್ (JeM) ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಹಿರಿಯ ಸೋದರ ಮುಹಮ್ಮದ್ ತಾಹಿರ್ ಅನ್ವರ್ (ಹಕೀಂ ಮುಹಮ್ಮದ್ ತಾಹಿರ್ ಅನ್ವರ್) ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ. ಈತನ ಮರಣಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿಲ್ಲವಾದರೂ ಅನೇಕ ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಭಾರತದ ಮೋಸ್ಟ್ ವಾಂಟೆಡ್ ಉಗ್ರಗಾಮಿ ಮಸೂದ್ ಅಜರ್ ನ ಜೈಷ್ ಸಂಘಟನೆಯ ಅಧಿಕೃತ ಟೆಲಿಗ್ರಾಮ್ ಮತ್ತು ಸಾಮಾಜಿಕ ಮಾಧ್ಯಮ ಚಾನಲ್‌ಗಳ ಮೂಲಕ ಈ ಸುದ್ದಿಯನ್ನು ದೃಢಪಡಿಸಲಾಗಿದೆ. ಸ್ವತಃ ಮಸೂದ್ “ನನ್ನ ಪ್ರಿಯ ಹಿರಿಯ ಸಹೋದರ ಹಕೀಂ ಮುಹಮ್ಮದ್ ತಾಹಿರ್ ಅನ್ವರ್ ನಿಧನರಾಗಿದ್ದಾರೆ” ಎಂದು ಹೇಳಿದ್ದಾನೆ.

ತಾಹಿರ್ ಅಂತ್ಯಕ್ರಿಯೆ ಪ್ರಾರ್ಥನೆಗಳು ಸೋಮವಾರ ರಾತ್ರಿ 11 ಗಂಟೆಗೆ ಬಹಾವಲ್‌ಪುರದ ಜಾಮಿಯಾ ಮಸ್ಜಿದ್ ಉಸ್ಮಾನ್ ವಾಲಿ (ಮಾರ್ಕಜ್ ಉಸ್ಮಾನ್-ಒ-ಅಲಿ)ಯಲ್ಲಿ ನಡೆಯಲಿವೆ.

ತಾಹಿರ್ ಅನ್ವರ್ JeMನಲ್ಲಿ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿದ್ದ. ಸಂಘಟನೆಯ ಸಶಸ್ತ್ರ ತಂಡಗಳ ನಾಯಕತ್ವ, ಆಯುಧ ತರಬೇತಿದಾರನಾಗಿ ಮತ್ತು ಬಹಾವಲ್‌ಪುರದ ಮುಖ್ಯ ಕೇಂದ್ರದ ಮುಖ್ಯಸ್ಥರಾಗಿ ಸಕ್ರಿಯರಾಗಿದ್ದ. ಅವನ ನಿಧನದಿಂದ ಸಂಘಟನೆಯ ಸಶಸ್ತ್ರ ಮತ್ತು ತರಬೇತಿ ವಿಭಾಗ ದುರ್ಬಲವಾಗಿದೆ.

ಈತನ ಸಾವಿಗೆ ಪಾಕಿಸ್ತಾನಿ ಅಧಿಕಾರಿಗಳು ಅಥವಾ JeM ಯಾವುದೇ ಕಾರಣವನ್ನು ಇನ್ನೂ ಘೋಷಿಸಿದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ “ಅನಾಮಧೇಯ ಮಹಿಳೆಯೊಬ್ಬರು ಇತ್ತೀಚಿಗೆ ತಾಹಿರ್ ನಮಾಜ್ ಮುಗಿಸಿ ಬರುವಾಗ ಹಿಂದಿನಿಂದ ಬಂದು ಆತನ ದೇಹಕ್ಕೆ ಪಿನ್ ಚುಚ್ಚಿದ್ದರು” ಎಂಬ ಊಹಾಪೋಹಗಳು ಹರಿದಾಡುತ್ತಿವೆಯಾದರೂ ಅವುಗಳಿಗೆ ಯಾವುದೇ ದೃಢೀಕರಣವಿಲ್ಲ.

ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಬಹಾವಲ್‌ಪುರದ JeM ಕೇಂದ್ರ ಕಚೇರಿ ಮೇಲೆ ಭಾರತ ಪಡೆಗಳು ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಮಸೂದ್ ಅಜರ್ ಕುಟುಂಬದ ಹಲವಾರು ಮೃತರಾಗಿದ್ದರು.

More articles

Latest article

Most read